ಧರ್ಮಸ್ಥಳದಲ್ಲಿ ಮೃತದೇಹ ಹೂತು ಹಾಕಿದ ಪ್ರಕರಣ ಕಾರ್ಯಾಚರಣೆಯಲ್ಲಿ ಕಳೇಬರ ಸಿಕ್ಕಿಲ್ಲ

ಬೆಳ್ತಂಗಡಿ: ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟ ಬಳಿ ಮೃತದೇಹ ಹೂತು ಹಾಕಿದ ಪ್ರಕರಣ ಸಂಬಂಧ ಮಿನಿ ಹಿಟಾಚಿ ಸತತ ಕಾರ್ಯಾಚರಣೆ ನಡೆಸಿದರೂ ಕಳೇಬರ ಸಿಕ್ಕಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. 12 ಮಂದಿ ಪೌರಕಾರ್ಮಿಕರ ಸಹಾಯದಿಂದ ಆರಂಭದಲ್ಲಿ ಪಿಕ್ಕಾಸು, ಹಾರೆಯಲ್ಲಿ ಬೆಳಗ್ಗೆ 12.30 ಕ್ಕೆ ಆರಂಭವಾದ ಅಗೆಯುವ ಕೆಲಸ ಮಧ್ಯಾಹ್ನ 2.30 ರವರೆಗೆ ನಡೆಯಿತು.ಕಳೇಬರ ಅಲ್ಲೆಲ್ಲೂ ಸಿಗದ ಸಮಯದಲ್ಲಿ ದೂರುದಾರ ಮತ್ತಷ್ಟು ಅಗೆಯುವಂತೆ ಒತ್ತಾಯಿಸಿದರು. ಕಡೆಗೆ ತನಿಖಾಧಿಕಾರಿ ಅನುಚೇತ್ ಸೂಚನೆಯಂತೆ ಮಿನಿ ಹಿಟಾಚಿ ಕರೆಸಲಾಯಿತು.ಮಧ್ಯಾಹ್ನ 3.30 ರಿಂದ ಆರಂಭವಾದ ಹಿಟಾಚಿ … Read more

ಕ್ಷಣಾರ್ಧದಲ್ಲಿ ಹೊತ್ತಿ ಉರಿದ ಕಾರು

ಗುಬ್ಬಿ: ತುಮಕೂರು ಕಡೆಯಿಂದ ಹೊಸದುರ್ಗ ಮಾರ್ಗವಾಗಿ ಚಲಿಸುತ್ತಿದ್ದ ಡಸ್ಟರ್ ಕಂಪನಿಯ ಕಾರಿನಲ್ಲಿ ಇದ್ದಕ್ಕಿದ್ದಂತೆ ಹೊಗೆ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಹೊತ್ತಿ ಉರಿದ ಘಟನೆ ಗುಬ್ಬಿ ತಾಲೂಕಿನ ಎಚ್ಎಎಲ್ ಘಟಕದ ಮುಂದಿನ ಯಲ್ಲಾಪುರ ಗೇಟ್ ಬಳಿ ನಡೆದಿದೆ. ಕಾರು ಮಾಲೀಕ ಹೇಮಂತ್ ಮತ್ತು ಮತ್ತೊಬ್ಬ ತುಮಕೂರು ಕಡೆಯಿಂದ ತಮ್ಮ ಸ್ವಗ್ರಾಮ ಹೊಸದುರ್ಗ ಬಳಿಯ ಶ್ರೀರಾಮಪುರ ಎಂಬಲ್ಲಿಗೆ ತೆರಳುತ್ತಿದ್ದರು, ಮಾರ್ಗ ಮಧ್ಯೆ ಗುಬ್ಬಿಯ ಯಲ್ಲಾಪುರ ಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿ 73 ರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಡ್ರೈವರ್ ಸೇರಿದಂತೆ ಕಾರು … Read more

ಸರಣಿ ಕಳವು- ಬೆಚ್ಚಿಬಿದ್ದ ನಾಗರಿಕರು

ವೈ.ಎನ್.ಹೊಸಕೋಟೆ: ತಡರಾತ್ರಿ ನೀಲಮ್ಮನಹಳ್ಳಿ ಗ್ರಾಮದ ರೈತರ ಜಮೀನುಗಳಲ್ಲಿ ಲಕ್ಷಾಂತರ ರೂ. ಬೆಲೆಯ ಕೊಳವೆಬಾವಿ ಕೇಬಲ್ ಕಳುವಾಗಿರುವ ಘಟನೆ ನಡೆದಿದೆ. ಎಂದಿನಂತೆ ಸೋಮವಾರ ಸರ್ವೆ ನಂಬರ್ 109, 107, 341, 342 ಈ ಜಮೀನುಗಳಿಗೆ ಸಂಬಂಧಿಸಿದ ರೈತರಾದ ರಮೇಶ್, ರಾಮಾಂಜಿ, ಶ್ರೀನಿವಾಸ್, ಆರ್.ವಿ.ನಾಗರಾಜು, ರೋಹಿತ್, ಶಿವಣ್ಣ ರಾತ್ರಿ ನೀರು ಹಾಯಿಸಿ ಮನೆಗೆ ಹೋಗಿದ್ದಾರೆ. ಮಂಗಳವಾರ ಬೆಳಗ್ಗೆ ಜಮೀನುಗಳಲ್ಲಿ ನೋಡಿದಾಗ ಈ ಎಲ್ಲಾ ಸರ್ವೆ ನಂಬರುಗಳಲ್ಲಿದ್ದ ಕೇಬಲ್ ಗಳು ಕಾಣೆಯಾಗಿವೆ, ಇದೇ ರೀತಿ ಈ ಹಿಂದೆಯೂ ಈ ಜಮೀನುಗಳಲ್ಲಿ ಕೃಷಿ … Read more

ಲಾರಿಗಳಲ್ಲಿ ಮರಳು ಸಾಗಾಟ- ಕಣ್ಮುಚ್ಚಿ ಕುಳಿತ ಆಡಳಿತ

ಮಧುಗಿರಿ: ಪಟ್ಟಣ ವ್ಯಾಪ್ತಿಯಲ್ಲಿ ಮನೆ ನಿರ್ಮಿಸಿಕೊಳ್ಳಲು ಬೇಕಾಗಿರುವ ಮರಳನ್ನು ಟ್ರ್ಯಾಕ್ಟರ್ ಗಳ ಮೂಲಕ ಸಾಗಿಸಲು ಸಚಿವ ಕೆ.ಎನ್.ರಾಜಣ್ಣನವರ ಮೌಖಿಕ ಆದೇಶವನ್ನು ಹಲವರು ದುರುಪಯೋಗ ಪಡಿಸಿಕೊಂಡು ಲಾರಿಗಳ ಮೂಲಕ ಮಾರಾಟ ಮಾಡಿಕೊಳ್ಳುತ್ತಿರುವುದು ಕಾಣಬಹುದಾಗಿದೆ. ಪಟ್ಟಣದ ಕಸಬಾ ವ್ಯಾಪ್ತಿಯಲ್ಲಿ ನ ಗುಡಿರೊಪ್ಪ ಶಾಲೆಯ ಪಕ್ಕದ ಮರಳಿನ ರಾಶಿ ಹಾಕಿಕೊಂಡು ಲಾರಿಗಳ ಮೂಲಕ ಮಾರಾಟ ಮಾಡುತ್ತಿದ್ದರು ಕೂಡ ತಾಲೂಕು ಆಡಳಿತ ಕಣ್ಮುಚ್ಚಿ ಕುಳಿತಿದೆ. ಅಲ್ಲಿ ಬಂಡೆ ಸಮಿಪ ಮರಳಿನ ರಾಶಿ ನೋಡಿದರೆ ಎಂತವರಿಗೂ ಇದು ಮಾರಾಟ ಮಾಡಲು ಶೇಖರಣೆ ಮಾಡಿ ಇಟ್ಟಿರುವಂತೆ … Read more

ಅತಿಥಿ ಶಿಕ್ಷಕಿ ಆತ್ಮಹತ್ಯೆ

ಮಧುಗಿರಿ: ತನ್ನ ಬಗ್ಗೆ ಜನರು ಕೆಟ್ಟದಾಗಿ ಮಾತನಾಡಿ ಕೊಳ್ಳುತ್ತಿದ್ದರೆ ಎಂಬ ಕಾರಣಕ್ಕೆ ಅತಿಥಿ ಶಿಕ್ಷಕಿಯೊಬ್ಬರು ಡೆತ್ ನೋಟ್ ಬರೆದು ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ ಲಾಲಪೇಟೆಯಲ್ಲಿ ಘಟನೆ ನಡೆದಿದೆ. ನೇರಳೆಕೆರೆ ಶಾಲೆಯ ಅತಿಥಿ ಶಿಕ್ಷಕಿ ನಾಗರತ್ನ (34) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ, ಇವರ ಪತಿ ಪ್ರದೀಪ ಲಾರಿ ಚಾಲಕನಾಗಿದ್ದಾರೆ, ಇವರು ಮೂಲತಃ ಕೊಡ್ಲಾಪುರ ವಾಸಿಯಾಗಿದ್ದು ಪಟ್ಟಣದ ಲಾಲಪೇಟೆಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ಮಕ್ಕಳಿಬ್ಬರು ಎರಡು ಮತ್ತು ನಾಲ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಸೋಮವಾರ … Read more

ನಿಗೂಢ ಸರಣಿ ಸಾವು- ಎಸ್ ಐಟಿ ತನಿಖೆ ಆರಂಭ

ಮಂಗಳೂರು: ಧರ್ಮಸ್ಥಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ನಿಗೂಢ ಸರಣಿ ಸಾವುಗಳ ತನಿಖೆಗಾಗಿ ಕರ್ನಾಟಕ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ (ಎಸ್ ಐಟಿ) ಶನಿವಾರ ತನ್ನ ತನಿಖೆಯನ್ನು ಪ್ರಾರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಸ್ಐಟಿ ತನ್ನ ಕಚೇರಿಯನ್ನು ಧರ್ಮಸ್ಥಳದ ಬದಲಿಗೆ ಬೆಳ್ತಂಗಡಿಯಲ್ಲಿ ಆರಂಭಿಸಿದೆ. ಮಲ್ಲಿಕಟ್ಟೆಯಲ್ಲಿರುವ ಗುಪ್ತಚರ ಬ್ಯೂರೋ ಆವರಣದಲ್ಲಿ ಸ್ಥಾಪಿಸಲಾದ ಎಸ್ ಐಟಿ ಕಚೇರಿಗೆ ಹಿರಿಯ ಅಧಿಕಾರಿಗಳು ಆಗಮಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಸ್ಥಳಗಳಿಗೆ ಭೇಟಿ ನೀಡಿದೆ ಎಂದು ಮೂಲಗಳು ತಿಳಿಸಿವೆ. ತನಿಖೆಯ ಮೇಲ್ವಿಚಾರಣೆ ನಡೆಸುತ್ತಿರುವ … Read more

ಮುಸುಕುದಾರಿಗಳಿಂದ ಚಿನ್ನಾಭರಣ ದೋಚಿ ಪರಾರಿ

ನೆಲಮಂಗಲ: ಆಭರಣ ಮಳಿಗೆಯೊಂದಕ್ಕೆ ನುಗ್ಗಿದ ಮೂವರು ಮುಸುಕುಧಾರಿ ವ್ಯಕ್ತಿಗಳು, ಸಿಬ್ಬಂದಿಗೆ ಚಾಕು ತೋರಿಸಿ ಬೆದರಿಸಿ 184 ಗ್ರಾಂ ಚಿನ್ನಾಭರಣ ದೋಚಿರುವ ಘಟನೆ ನಡೆದಿದೆ. ಜುಲೈ 24 ರ ರಾತ್ರಿ ದಿನದ ವ್ಯಾಪಾರ ಮುಗಿಸಿ ಅಂಗಡಿ ಮುಚ್ಚಲು ಮುಂದಾದಾಗ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಡಕಾಯಿತರು ಯಾರಿಗೂ ಯಾವುದೇ ತೊಂದರೆ ಮಾಡಿಲ್ಲ, ಸಿಬ್ಬಂದಿ ಬೆದರಿಸಲು ಚಾಕು ತೋರಿಸಿದ್ದಾರೆ ಎನ್ನಲಾಗಿದೆ. ಬಳಿಕ ಆಭರಣಗಳನ್ನು ದೋಚಿಕೊಂಡು ಕಾರಿನಲ್ಲಿ ಪರಾರಿಯಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಸಂಬಂಧ … Read more

ಪತಿ ಹತ್ಯಗೆ ಪತ್ನಿಯಿಂದಲೇ ಸುಪಾರಿ

ರಾಮನಗರ: ವಿಷ ಕುಡಿದು ಗ್ರಾಮ ಪಂಚಾಯತಿ ಸದಸ್ಯೆ ಪತಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇದು ಆತ್ಮಹತ್ಯೆ ಅಲ್ಲ, ಕೊಲೆ ಎಂಬುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಗ್ರಾಮ ಪಂಚಾಯತಿ ಸದಸ್ಯೆ ತನ್ನ ಪತಿ ಹತ್ಯೆಗೆ ಸುಪಾರಿ ನೀಡಿರೋದು ವಿಚಾರಣೆಯಲ್ಲಿ ಬಹಿರಂಗವಾಗಿದೆ. ಕಳೆದ ಜೂನ್ 24 ರಂದು ಚನ್ನಪಟ್ಟಣ ತಾಲೂಕಿನ ಮಾಕಳಿ ಗ್ರಾಪಂ ಸದಸ್ಯೆ ಚಂದ್ರಕಲಾ ಪತಿ ಲೋಕೇಶ್ (38) ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಚನ್ನಪಟ್ಟಣ ತಾಲೂಕಿನ ಕೃಷ್ಣಾಪುರದೊಡ್ಡಿ ಗ್ರಾಮದಲ್ಲಿ ಲೋಕೇಶ್ ಮೃತದೇಹ ಪತ್ತೆಯಾಗಿತ್ತು. ಲೋಕೇಶ್ ಶವದ … Read more

ಖೋಟಾ ನೋಟು ಚಲಾವಣೆ- ನಾಲ್ವರ ಬಂಧನ

ದಾವಣಗೆರೆ: ಖೋಟಾ ನೋಟು ಚಲಾವಣೆ ದಂಧೆಯಲ್ಲಿ ತೊಡಗಿಕೊಂಡಿದ್ದ ನಾಲ್ವರನ್ನು ಬಸವಾಪಟ್ಟಣ ಠಾಣೆ ಪೊಲೀಸರು ಬಂಧಿಸಿ 3.75 ಲಕ್ಷ ಖೋಟಾ ನೋಟನ್ನು ವಶಪಡಿಸಿಕೊಂಡಿದ್ದಾರೆ. ಹೂವಿನಹಡಗಲಿ ತಾಲೂಕಿನ ನಡುವಿನ ತಾಂಡದ ಸಂತೋಷಕುಮಾರ (32), ಕೊಟ್ಟೂರು ತಾಲೂಕಿನ ಬೇವೂರು ಗ್ರಾಮದ ವಿರೇಶ(37), ದಾವಣಗೆರೆ ತಾಲೂಕು ಕುಕ್ಕವಾಡ ಗ್ರಾಮದ ಕುಬೇರಪ್ಪ(60) ಹಾಗೂ ಕೊಟ್ಟೂರಿನ ಬೇವೂರು ಗ್ರಾಮದ ಹನುಮಂತಪ್ಪ(75) ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳು ಈಗಾಗಲೇ ಮೈಸೂರು, ತುಮಕೂರು ಸೇರಿದಂತೆ ವಿವಿಧೆಡೆ ಖೋಟಾ ನೋಟುಗಳನ್ನು ಚಲಾವಣೆ ಮಾಡಿರುವುದರ ಬಗ್ಗೆ ಮಾಹಿತಿ ಸಿಕ್ಕಿದೆ. ಇದರ ಬಗ್ಗೆ ವಿಸ್ತೃತ … Read more

ಪ್ರಯಾಣಿಕನ ಟ್ರಾಲಿಯಲ್ಲಿ ಕೆಜಿ ಚಿನ್ನ ಪತ್ತೆ

ಬೆಂಗಳೂರು: ಬೆಂಗಳೂರು ಗ್ರಾಮಾಂತರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಗೆ ಬರುತ್ತಿದ್ದ ಪ್ರಯಾಣಿಕನ ಟ್ರಾಲಿಯಲ್ಲಿ ಕೆಜಿ ಚಿನ್ನ ಪತ್ತೆಯಾಗಿರುವ ಘಟನೆ ನಡೆದಿದೆ. ವ್ಯಕ್ತಿ ಅಕ್ರಮವಾಗಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದಾಗ ಮತ್ತೊಬ್ಬರ ಬ್ಯಾಗ್ ನಲ್ಲಿ ಚಿನ್ನ ಬಿಟ್ಟು ಹೋಗಿರುವುದಾಗಿ ವರದಿಯಾಗಿದೆ.ವರದಿಗಳ ಪ್ರಕಾರ ದುಬೈ ನಿಂದ ಬಂದಿದ್ದ ವ್ಯಕ್ತಿ ಸಹ ಪ್ರಯಾಣಿಕರ ಲಗೇಜ್ ಟ್ರಾಲಿ ಒಂದಕ್ಕೆ ಚಿನ್ನದ ಬ್ಯಾಗ್ ಹಾಕಿ ಎಸ್ಕೇಪ್ ಆಗಿದ್ದಾನೆ. ಗೋಲ್ಡ್ ಸ್ಮಗ್ಲರ್ ಬರೋಬ್ಬರಿ 3.5 ಕೆಜಿ ಚಿನ್ನ ಬಿಸ್ಕೆಟ್ಗಳಿದ್ದ ಬ್ಯಾಗ್ ಬಿಟ್ಟು ಓಡಿ ಹೋಗಿದ್ದಾನೆ. ಕಸ್ಟಮ್ಸ್ … Read more