
ಬೆಂಗಳೂರು: ಆನ್ ಲೈನ್ ನಲ್ಲಿ ನಕಲಿ ಕಾನೂನು ಸೇವೆ ಒದಗಿಸುತ್ತಿದ್ದ ಇಬ್ಬರು ಸಹೋದರರ ದೊಡ್ಡ ಸೈಬರ್ ಅಪರಾಧ ಜಾಲವನ್ನು ಸಿಸಿಬಿ ಪೊಲೀಸರು ಭೇದಿಸಿ ಒಬ್ಬನನ್ನು ಬಂಧಿಸಿದ್ದಾರೆ.
ಆರೋಪಿ ಸಹೋದರ ದುಬೈನಲ್ಲಿದ್ದು, ಹಲವಾರು ನಕಲಿ ಕಂಪನಿಗಳನ್ನು ಸ್ಥಾಪಿಸಿ ಆನ್ ಲೈನ್ ವಂಚನೆ ನಡೆಸಲು ಸಾಂದರ್ಭಿಕ ಜಾಲವೊಂದನ್ನು ನಿರ್ಮಿಸಿದ್ದನು ಎಂಬುವುದು ಪೊಲೀಸರ ತನಿಖೆಯಿಂದ ಬಹಿರಂಗವಾಗಿದೆ.
ನಗರದ ಕಸ್ತೂರಿನಗರದಲ್ಲಿ ಇಂಡಿಯನ್ ಲೀಗಲ್ಎಂಬ ನಕಲಿ ಕಂಪನಿಯನ್ನು ಸ್ಥಾಪಿಸಿ 12 ಟೆಲಿಕಾಲರ್ಗಳನ್ನು ನೇಮಿಸಿ ಸೈಬರ್ ವಂಚನೆ ಗೊಳಗಾದವರಿಗೆ ಹಣ ಮರಳಿ ನೀಡುವುದಾಗಿ ಭರವಸೆ ನೀಡಿ ವಂಚಿಸುತ್ತಿದ್ದರು. ದೂರುದಾರರಿಗೆ ಸೋಲಾರ್ ಪ್ಲಾಂಟ್ ಅವಳಡಿಸುವುದಾಗಿ ಆರೋಪಿಗಳು ಆಮಿಷವೊಡ್ಡಿ 1.5 ಕೋಟಿ ರೂ.ಗಳಷ್ಟು ವಂಚಿಸಲಾಗಿದೆ. ಅಲ್ಲದೇ ಈ ಹಣವನ್ನು ಮರಳಿ ಪಡೆಯಲು ಆನ್ ಲೈನ್ ನಲ್ಲಿ ಕಾನೂನು ನೆರವಿನ ಬಗ್ಗೆ ಹುಡುಕುತ್ತಿದ್ದಾಗ, ಕ್ವಿಕ್ ಮೋಟೋ ಲೀಗಲ್ ಸರ್ವಿಸ್ ಎಂಬ ವೆಬ್ ಸೈಟ್ ನೋಡಿ ಸಂಪರ್ಕಿಸಿದಾಗ ಕಾನೂನು ಸೇವೆ ಒದಗಿಸುವುದಾಗಿ ಟೆಲಿಕಾಲರ್ ಗಳು ಹೇಳಿದ್ದಾರೆ.
ಕಾಲ್ ಸೆಂಟರ್ ನಲ್ಲಿದ್ದ 10 ಕಂಪ್ಯೂಟರ್ ಹಾರ್ಡ್ ಡಿಸ್ಕ್ ಗಳು, 7 ನಕಲಿ ಕಂಪನಿಗಳ ಸೀಲುಗಳು, ಬಾಡಿಗೆ ಒಪ್ಪಂದ ಪತ್ರಗಳು, ಚೆಕ್ ಬುಕ್ ಗಳು, ದಾಖಲೆಗಳು, ಮೊಬೈಲ್ ಫೋನ್, ಸಿಪಿಯು,11 ಸಿಮ್ ಕಾರ್ಡ್ಗಳು ಸೇರಿದಂತೆ ಎಸ್ ಐಪಿ ಟ್ರಂಕ್ ಸರ್ವರ್ ವ್ಯವಸ್ಥೆಯ ಡೇಟಾ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ದೇಶದಾದ್ಯಂತ 29 ಕ್ಕೂ ಹೆಚ್ಚು ಪ್ರಕರಣಗಳು ಸೈಬರ್ ಕ್ರೈಂ ಪೋರ್ಟಲ್ ನಲ್ಲಿ ದಾಖಲಾಗಿವೆ.ಈ ಜಾಲದಲ್ಲಿ ತೊಡಗಿರುವ ಉಳಿದ ಆರೋಪಿಗಳನ್ನು ಪತ್ತೆಹಚ್ಚಲು ತನಿಖೆ ಮುಂದುವರೆದಿದೆ.
ಆನ್ ಲೈನ್ ನಲ್ಲಿ ನಕಲಿ ಕಾನೂನು ಸೇವೆ ಇಬ್ಬರು ಸಹೋದರರ ಬಂಧನ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


