--ಇಲ್ಲಿ ಜಾಹೀರಾತು--

ದೂರಸಂಪರ್ಕ ಸಂಸ್ಥೆಗಳಿಗೆ ವಂಚನೆ- ಇಬ್ಬರ ಬಂಧನ

On: August 4, 2025 2:28 PM
Follow Us
--ಇಲ್ಲಿ ಜಾಹೀರಾತು--

Whatsapp Channel

Join Now

Telegram Group

Join Now


ಬೆಂಗಳೂರು: ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತಿಸಿ ಸರ್ಕಾರ ಹಾಗೂ ದೂರಸಂಪರ್ಕ ಸಂಸ್ಥೆಗಳಿಗೆ ಕೋಟ್ಯಾಂತರ ರೂಪಾಯಿ ವಂಚನೆ ಮಾಡುತ್ತಿದ್ದ ಕೇರಳದ ವ್ಯಕ್ತಿ ಸೇರಿದಂತೆ ಇಬ್ಬರನ್ನು ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಿಂದ ಒಂಬತ್ತು ಸಿಮ್ ಬಾಕ್ಸ್ ಗಳು, ಮೊಬೈಲ್, 6 ರೌಟರ್ ಗಳು, ಲ್ಯಾಪ್ ಟ್ಯಾಪ್, 702 ಸಿಮ್ ಕಾರ್ಡ್ಗಳನ್ನು ವಶಪಡಿಸಿಕೊಂಡಿದ್ದು, ಇವುಗಳ ಮೌಲ್ಯ 10 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.
ವೈಟ್ಫಿಲ್ಡ್ ನ ಇಮಡಿಹಳ್ಳಿ ಮುಖ್ಯ ರಸ್ತೆಯ ರಾಮಮಂದಿರದ ಬಳಿ ಕೆಲವರು ಸಿಮ್ ಬಾಕ್ಸ್ ಗಳಲ್ಲಿ ಸಿಮ್ ಕಾರ್ಡ್ಗಳನ್ನು ಬಳಸಿ ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಉಂಟು ಮಾಡುವಂತಹ ರೀತಿಯಲ್ಲಿ ಭಾರತಿ ಏರ್ಟೆಲ್ ಕಂಪನಿಗೆ ನಷ್ಟ ಉಂಟು ಮಾಡುತ್ತಾ, ಮಾನ್ಯತೆ ಇಲ್ಲದ ಟೆಲಿಫೋನ್ ಎಕ್ಸೈಂಜ್ ನಡೆಸುತ್ತಿದ್ದರು.
ಪೊಲೀಸರು ಹಲವು ಆಯಾಮಗಳಲ್ಲಿ ಮಾಹಿತಿ ಕಲೆಹಾಕಿ, ದೂರ ಸಂಪರ್ಕ ಇಲಾಖೆ ಅಧಿಕಾರಿಗಳು ಹಾಗೂ ಏರ್ ಟೆಲ್ ಸೇವಾ ದಾತೆಯ ಸಹಯೋಗದೊಂದಿಗೆ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಆರೋಪಿಯೊಬ್ಬನನ್ನು ಪತ್ತೆಹಚ್ಚಿ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದ್ದಾರೆ. ವೈಟ್ಫೀಲ್ಡ್ ನಲ್ಲಿ ಬಾಡಿಗೆ ಮನೆ ಮಾಡಿಕೊಂಡು ಮನೆಯಲ್ಲೇ ಸಿಮ್ ಬಾಕ್ಸ್ ಗಳನ್ನು ಅಳವಡಿಸಿ ರಹಸ್ಯ ಟೆಲಿಫೋನ್ ಎಕ್ಸೈಂಜ್ ಸ್ಥಾಪನೆ ಮಾಡಿದ್ದಾಗಿ ಆರೋಪಿಯು ವಿಚಾರಣೆ ವೇಳೆ ಹೇಳಿದ್ದಾನೆ.
ವಿದೇಶದಿಂದ ಕೊರಿಯರ್ ಮೂಲಕ ಕಳುಹಿಸಿದ ಸಿಮ್ ಬಾಕ್ಸ್ ಗಳನ್ನು ಬಳಸಿ ಮತ್ತೊಬ್ಬ ಸಹಚರನ ಸಹಾಯದಿಂದ ಅಂತರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸುತ್ತಿದ್ದರಿಂದ ಆರೋಪಿಗೆ ಪ್ರತಿ ತಿಂಗಳು ನಾಲ್ಕರಿಂದ ಐದು ಲಕ್ಷದ ವರೆಗೆ ಹವಾಲಾ ಮಾರ್ಗದಿಂದ ಹಣ ಲಭಿಸುತ್ತಿತ್ತು ಎಂಬುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

Author

Editor TumkurVarthe

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು

WhatsApp

Join Now

Telegram

Join Now

Instagram

Join Now