
ಕುಣಿಗಲ್: ಪಟ್ಟಣದ ಬಿದನಗೆರೆಯ ಬಸವೇಶ್ವರ ಮಠಧ ಆವರಣದಲ್ಲಿ ಅಪರಿಚಿತ ಮಹಿಳೆ ಶವ ಪತ್ತೆಯಾಗಿದೆ. ಮೃತಳು ಸುಮಾರು 70ವರ್ಷ ವಯೋಮಾನದವರಾಗಿದ್ದು, ಹೆಸರು ಶಿವಮ್ಮ ಎಂತಲೂ ಕುಣಿಗಲ್ನವರೆಂದು ಇನ್ನು ಕೆಲವೊಮ್ಮೆ ಮಧುಗಿರಿ ಹತ್ತಿರದ ಸಿದ್ದಾಪುರ ಎಂದು ಹೇಳಿಕೊಂಡು ಬಿದನಗೆರೆ ಬಸವೆಶ್ವರ ಮಠದಲ್ಲಿ ಕೆಲಸ ಮಾಡಿಕೊಂಡು ಅಲ್ಲಿಯೆ ಮಲಗುತ್ತಿದ್ದರು, ಗುರುವಾರ ಬೆಳಗ್ಗೆ ಮೃತಪಟ್ಟಿರುವುದು ಕಂಡುಬಂದಿದೆ.
ಮೃತಳು ಚಪ್ಪಟೆ ಮುಖ,ಗೋದಿ ಮೈ ಬಣ್ಣ, ಐದು ಅಡಿ ಎತ್ತರ, ಸಣ್ಣನೆ ಶರೀರ ಹೊಂದಿದ್ದಾರೆ, ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಿಚಿತ ಮಹಿಳೆ ಶವ ಪತ್ತೆ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


