--ಇಲ್ಲಿ ಜಾಹೀರಾತು--

ಜಾತಿ ನಿಂದನೆ ಆರೋಪ- ಸ್ವಾಮೀಜಿ ವಿರುದ್ಧ ಪ್ರಕರಣ

On: August 13, 2025 2:46 PM
Follow Us
--ಇಲ್ಲಿ ಜಾಹೀರಾತು--

Whatsapp Channel

Join Now

Telegram Group

Join Now


ಕುಣಿಗಲ್: ದೇವಾಲಯದೊಳಗೆ ಪ್ರವೇಶವನ್ನು ತಡೆದು, ಜಾತಿ ನಿಂದನೆ ಮಾಡಿದ ಆರೋಪದ ಮೇಲೆ ಕುಣಿಗಲ್ ತಾಲ್ಲೂಕಿನ ಹಂಗರಹಳ್ಳಿ ಗ್ರಾಮದ ವಿದ್ಯಾಚೌಡೇಶ್ವರಿ ದೇವಸ್ಥಾನದ ಬಾಲಮಂಜುನಾಥ ಸ್ವಾಮೀಜಿ ಸೇರಿದಂತೆ ಐವರು ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಗಡಿ ತಾಲ್ಲೂಕಿನ ಚಂದುರಾಯನಹಳ್ಳಿ ಗ್ರಾಮದ ಎಸ್.ಜಿ.ವನಜಾ ಎಂಬ ಮಹಿಳೆ ನೀಡಿರುವ ದೂರಿನ ಪ್ರಕಾರ, ಅವರು ದೇವಾಲಯಕ್ಕೆ ಕರ್ಪೂರ ಹಚ್ಚಲು ಹೋಗಿದ್ದಾಗ, ಸ್ವಾಮೀಜಿಯವರು ಮಾದಿಗಳು ಬರುತ್ತಿದ್ದಾಳೆ, ಬಾಗಿಲು ಹಾಕಿ ಎಂದು ತಮ್ಮ ಆಪ್ತರಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಈ ಹೇಳಿಕೆಯನ್ನು ಆಧರಿಸಿ ದೇವಾಲಯದ ಬಾಗಿಲು ಮುಚ್ಚಲಾಗಿದ್ದು, ವನಜಾ ಅವರಿಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಾಮೀಜಿ ಬಾಲಮಂಜುನಾಥ, ಅವರ ತಾಯಿ ರಾಜಮ್ಮ, ಚಿಕ್ಕಮ್ಮ ನಾಗಮ್ಮ ಮತ್ತು ಆಪ್ತರಾದ ಅಭಿಷೇಕ್ ಹಾಗೂ ಮಂಜುನಾಥ್ ವಿರುದ್ಧ ಡಿಸಿಆರ್ಇ ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟೀಸ್ ಕಾಯ್ದೆಯಡಿ ಹಾಗೂ ಇತರ ಸೆಕ್ಷನ್ ಗಳಡಿ ಪ್ರಕರಣ ದಾಖ ಲಾಗಿದೆ.

Editor TumkurVarthe

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು

WhatsApp

Join Now

Telegram

Join Now

Instagram

Join Now