--ಇಲ್ಲಿ ಜಾಹೀರಾತು--

ಅಸ್ಥಿ ಪಂಜರಗಳ ಶೋಧ ಕಾರ್ಯಾಚರಣೆ ಪಾಯಿಂಟ್ ನಂ.13 ರಲ್ಲಿ ಜಿಪಿಆರ್ ಸ್ಕ್ಯಾನ್

On: August 12, 2025 2:41 PM
Follow Us
--ಇಲ್ಲಿ ಜಾಹೀರಾತು--

Whatsapp Channel

Join Now

Telegram Group

Join Now


ಧರ್ಮಸ್ಥಳ: ಧರ್ಮಸ್ಥಳದಲ್ಲಿ ಶವ ಹೂತಿಟ್ಟಿದ್ದಾಗಿ ದೂರುದಾರರೊಬ್ಬರು ಹೇಳಿದ್ದಂತ ತಪ್ಪೊಪ್ಪಿಗೆ ಹೇಳಿಕೆಯಿಂದಾಗಿ ಎಸ್ ಐಟಿಯಿಂದ ಅಸ್ಥಿ ಪಂಜರಗಳ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇದೀಗ ಜಿಪಿಆರ್ ಮೂಲಕ ಪಾಯಿಂಟ್ ನಂ.13ರಲ್ಲಿ ಸ್ಕ್ಯಾನ್ ಮಾಡಲಾಗಿದ್ದು, ಅದರ ಮುಕ್ತಾಯದ ಬಳಿಕ ತಂತ್ರಜ್ಞರು ಪೂಟೇಜ್ ಪರಿಶೀಲನೆಯಲ್ಲಿ ತೊಡಗಿದ್ದಾರೆ.ಧರ್ಮಸ್ಥಳದಲ್ಲಿ ಶವಗಳ ಅಸ್ಥಿ ಪಂಜರಗಳಿಗಾಗಿ ಎಸ್ ಐಟಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಪಾಯಿಂಟ್ ನಂ.6ರಲ್ಲಿ ಹೊರತಾಗಿ ಇದುವರೆಗಿನ ಶೋಧ ಕಾರ್ಯಾಚರಣೆಯಲ್ಲಿ ಎಸ್ ಐಟಿಗೆ ಅಸ್ಥಿಪಂಜರಗಳು ಬೇರೆ ಯಾವುದೇ ಪಾಯಿಂಟ್ ನಲ್ಲಿ ದೊರೆತಿಲ್ಲ. ಇನ್ನೂ ದೂರುದಾರ ತೋರಿಸುತ್ತಿರುವಂತ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ.
ಪಾಯಿಂಟ್ ನಂ.13ರಲ್ಲಿ ಎಸ್ ಐಟಿ ಮೊದಲ ಬಾರಿಗೆ ಜಿಪಿಆರ್ ತಂತ್ರಜ್ಞಾನ ಬಳಸಿ ಶೋಧ ಕಾರ್ಯಾಚರಣೆ ನಡೆಸಿದರು. ಇದೀಗ ಜಿಪಿಆರ್ ಸ್ಕ್ಯಾನ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಅದರ ಪೂಟೇಜ್ ಅನ್ನು ತಂತ್ರಜ್ಞರು ಪರಿಶೀಲಿಸುತ್ತಿರುವುದಾಗಿ ತಿಳಿದು ಬಂದಿದೆ. ಇಲ್ಲಿ ಏನಾದರೂ ಅಸ್ಥಿ ಪಂಜರ ಸಿಗಲಿದ್ಯಾ ಅಂತ ಕಾದು ನೋಡಬೇಕಿದೆ.

Author

Editor TumkurVarthe

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು

WhatsApp

Join Now

Telegram

Join Now

Instagram

Join Now