--ಇಲ್ಲಿ ಜಾಹೀರಾತು--

ನವಜಾತ ಶಿಶು ಮಾರಾಟ ಮಹಿಳೆ ದೂರು

On: August 14, 2025 2:35 PM
Follow Us
--ಇಲ್ಲಿ ಜಾಹೀರಾತು--

Whatsapp Channel

Join Now

Telegram Group

Join Now


ಬೆಂಗಳೂರು: ನವಜಾತ ಶಿಶು ಮಾರಾಟ ಮಾಡಿ ಬಳಿಕ ಹಣ ಖರ್ಚಾದ ನಂತರ ಮಗುವನ್ನು ವಾಪಸ್ ಕೊಡಿಸಿ ಎಂದು ಮಹಿಳೆಯೊಬ್ಬರು ಡಿಜೆ ಹಳ್ಳಿ ಪೊಲೀಸ್ ಠಾಣೆ ದೂರು ನೀಡಿದ ಘಟನೆ ನಡೆದಿದೆ.
ಅಮುದಾ, ರಮ್ಯಾ ಎಂಬವರಿಗೆ ಸುಮಾರು 2.5 ಲಕ್ಷ ರೂ.ಗೆ ನಸೀಂ ಬೇಗಂ ಎಂಬ ಮಹಿಳೆ ತಮ ಹೆಣ್ಣು ಮಗು ಮಾರಾಟ ಮಾಡಿದ್ದರು. ನಸೀಂ ಬೇಗಂ 15 ವರ್ಷದ ಹಿಂದೆ ದಸ್ತಗೀರ್ ಎಂಬವರ ಜೊತೆ ಮದುವೆಯಾಗಿದ್ದರು. ದಂಪತಿಗೆ ಎರಡು ಗಂಡು, 1ಹೆಣ್ಣುಮಕ್ಕಳಿದ್ದು. ಶಿವಾಜಿನಗರದ ಘೋಷಾ ಆಸ್ಪತ್ರೆಯಲ್ಲಿ ನಾಲ್ಕನೇ ಮಗುವಿಗೆ ಜನ್ಮ ನೀಡಿದ್ದರು. ಹಣದಾಸೆಗಾಗಿ ದಂಪತಿ ನವಜಾತ ಹೆಣ್ಣುಮಗುವನ್ನು 2.5 ಲಕ್ಷ ರೂ.ಗೆ ಮಾರಾಟ ಮಾಡಿದ್ದರು. ಮಾರಾಟ ಮಾಡಿ ಬಂದಿದ್ದ ಹಣ ಖರ್ಚಾದ ಬಳಿಕ ಮಹಿಳೆ ಇದೀಗ ಮಗು ವಾಪಸ್ ಬೇಕು ಎಂದು ಕೇಳುತ್ತಿದ್ದಾರೆ. ಈ ಹಿನ್ನೆಲೆ ಸದ್ಯ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಮಕ್ಕಳ ಹಕ್ಕು ಮತ್ತು ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿಗಳು ಇದು ಅನಧೀಕೃತವಾಗಿ ಮಗು ಮಾರಾಟವಾಗಿದೆ. ಮತ್ತು ಪಡೆದವರೂ ಕೂಡ ನಿಯಮ ಪಾಲಿಸಿಲ್ಲ ಎಂದು ಹೇಳಿದ್ದಾರೆ.

Author

Editor TumkurVarthe

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು

WhatsApp

Join Now

Telegram

Join Now

Instagram

Join Now