
ಬೆಂಗಳೂರು: ರಾತ್ರಿಯ ವೇಳೆ ಕುಡಿದು ವಾಹನ ಚಲಾಯಿಸುವವರ ಸಂಖ್ಯೆ ಹೇರುತ್ತಲೇ ಇದೆ. ಇದಕ್ಕೆ ಕಡಿವಾಣ ಹಾಕಲು ಪೊಲೀಸರು ರಾತ್ರಿಯ ವೇಳೆ ಗಸ್ತು ಹೆಚ್ಚು ಮಾಡಿದ್ದಾರೆ. ಇದೀಗ ಕುಡಿದು ವಾಹನ ಚಲಾಯಿಸುತ್ತಿದ್ದ ವ್ಯಕ್ತಿಯನ್ನು ಪ್ರಶ್ನಿಸಿದ್ದಕ್ಕೆ ಸಬ್ ಇನ್ಸ್ ಪೆಕ್ಟರ್ ಮೇಲೆ ಪುಂಡರಗುಂಪು ಕಾರು ಹತ್ತಿಸೋಕೆ ಯತ್ನಿಸಿರೋ ಘಟನೆ ರಾಜಗೋಪಾಲನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಗುರುವಾರ ರಾತ್ರಿ ರಾಜಗೋಪಾಲನಗರ ಠಾಣಾ ವ್ಯಾಪ್ತಿಯ ಬಾಟಲ್ ಮಾರ್ಕ್ ಬಾರ್ ಬಳಿ ಸ್ಕಾರ್ಪಿಯೋ ಕಾರಿನಲ್ಲಿ ನಾಲ್ಕೈದು ಜನರ ಪುಂಡರ ಗುಂಪೊಂದು ಡ್ರಿಂಕ್ಸ್ ಮಾಡುತ್ತಿದ್ದರು. ಇದನ್ನು ರಾತ್ರಿಯ ವೇಳೆ ಗಸ್ತು ತಿರುಗುತ್ತಿದ್ದ ಸಬ್ ಇನ್ಸ್ ಪೆಕ್ಟರ್ ಮುರಳಿ ಎಂಬುವವರು ಗಮನಿಸಿದ್ದಾರೆ. ಗಸ್ತಿನ ವೇಳೆ ಬಾರ್ ಮುಂದೆ ವಾಹನ ನಿಂತಿರುವುದನ್ನು ನೋಡಿ ಬಾರ್ ಮುಚ್ಚಿದರೂ ಸ್ಕಾರ್ಪಿಯೋ ಇಲ್ಲೇಕೆ ಇದೆ, ಅಲ್ಲದೇ ಕಾರನ್ನು ಫುಲ್ ಟಿಂಟ್ ಕೂಡ ಮಾಡಿಸಲಾಗಿತ್ತು ಇದರಿಂದ ಅನುಮಾನಗೊಂಡು ಚಾಲಕನಿಗೆ ಜೀಪ್ ಅನ್ನು ನಿಲ್ಲಿಸಲು ಹೇಳಿದ್ದಾರೆ.ಅದರಂತೆ ಚಾಲಕ ಜೀಪ್ ಅನ್ನು ನಿಲ್ಲಿಸಿದ್ದಾರೆ, ಬಳಿಕ ಅದರ ಹತ್ತಿರ ಹೋದಾಗ ಸುಮಾರು ನಾಲ್ಕೈದು ಜನ ಯುವಕರು ಕೈಯಲ್ಲಿ ಎಣ್ಣೆ ಬಾಟಲ್ ಹಿಡಿದುಕೊಂಡು ಪಾರ್ಟಿ ಮಾಡುತ್ತಿದ್ದರು. ಇತ್ತ ಪೊಲೀಸರನ್ನು ನೋಡಿ ಬಾಟಲ್ ಸಮೇತ ಕಾರನ್ನು ಹತ್ತಿ ರಿವರ್ಸ್ ತೆಗೆದಿದ್ದಾರೆ.
ಅಷ್ಟೇ ಅಲ್ಲದೆ ಕಾರಿನ ಗ್ಲಾಸ್ ನಲ್ಲಿ ಜಯ ಕರ್ನಾಟಕ ಸಂಘಟನೆಯ ಹೆಸರಿದ್ದು, ಕಾರು ಜಾನ್ಸನ್ ಎಂಬಾತನಿಗೆ ಸೇರಿದ್ದು ಎಂದು ಪೊಲೀಸ್ ವಿಚಾರಣೆಯ ವೇಳೆ ಗೊತ್ತಾಗಿದೆ. ಸದ್ಯ ಈ ವಿಚಾರ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಪಿಎಸ್ ಐ ಮೇಲೆ ಕಾರು ಹತ್ತಿಸಲು ಮುಂದಾದವರಿಗೆ ತಕ್ಕ ಪಾಠ ಕಲಿಸಲು ಮುಂದಾಗಿದ್ದಾರೆ.
ರಾಜಗೋಪಾಲ ನಗರದಲ್ಲಿ ಪುಂಡರ ಗುಂಪಿನಿಂದ ಕೃತ್ಯ ಇನ್ಸ್ಪೆಕ್ಟರ್ ಮೇಲೆ ಕಾರು ಹತ್ತಿಸಲು ಯತ್ನ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


