--ಇಲ್ಲಿ ಜಾಹೀರಾತು--

ಬಿಎಂಟಿಸಿ ಬಸ್ ಗೆ ಅಡ್ಡ ಬಂದ ಕಾಡಾನೆ ಹಿಂಡು

On: April 17, 2025 2:24 PM
Follow Us
--ಇಲ್ಲಿ ಜಾಹೀರಾತು--

Whatsapp Channel

Join Now

Telegram Group

Join Now


ಬೆಂಗಳೂರು: ಇತ್ತೀಚಿನ ದಿನಗಳ ಕಾಡಾನೆಗಳು ನಾಡಿಗೆ ಬಂದು ದಾಳಿ ನಡೆಸುತ್ತಿರುವ ಘಟನೆ ಹೆಚ್ಚುತ್ತಿದೆ. ಕಾಡಾನೆಗಳ ಹಿಂಡೊಂದು ಬಿಎಂಟಿಸಿ ಬಸ್ ಗೆ ಅಡ್ದಗಟ್ಟಿದ ಘಟನೆ ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ನಡೆದಿದೆ. ಕನಕಪುರ ರಸ್ತೆಯ ಕಗ್ಗಲೀಪುರ ಬಳಿ ಗುಲ್ಲಹಟ್ಟಿ ಗ್ರಾಮದಲ್ಲಿ ಕಾಡಾನೆಗಳ ಹಿಂಡು ಬಿಎಂಟಿಸಿ ಬಸ್ ಗೆ ಅಡ್ದಗಟ್ಟಿದೆ.
ಕಂಗಾಲಾದ ಬಸ್ ಚಾಲಕ, ಪ್ರಯಾಣಿಕರು ಜೀವಭಯದಲ್ಲಿ ಕೆಲಕಾಲ ಪರದಾಡಿದ್ದಾರೆ. ರಸ್ತೆ ಮಧ್ಯೆಯೇ ಕಾಡಾನೆಯೊಂದು ಬಸ್ ನ್ನು ಅಡ್ದಗಟ್ಟಿ ನಿಲ್ಲಿಸಿದೆ. ಬಸ್ ಸುತ್ತ ಒಂದು ಸುತ್ತು ಹೊಡೆದಿದೆ. ಬಸ್ ನಲ್ಲಿದ್ದ ಪ್ರಯಾಣಿಕರು ಉಸಿರು ಬಿಗಿಹಿಡಿದು ಕುಳಿತಿದ್ದಾರೆ. ಇದೇ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಕಾಡಾನೆ ಬಸ್ ನ ಹಿಂಬದಿ ನಿಧಾನವಾಗಿ ಹೆಜ್ಜೆ ಇಡುತ್ತಿದ್ದಂತೆ ಚಾಲಕ ಬಸ್ ಚಲಾಯಿಸಿಕೊಂಡು ಹೋಗಿದ್ದಾರೆ. ಕಾಡಾನೆಗಳ ಹಿಂಡನ್ನು ಅರಣ್ಯ ಇಲಾಖೆ ಸಿಬ್ಬಂದಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.

Author

Editor TumkurVarthe

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು

WhatsApp

Join Now

Telegram

Join Now

Instagram

Join Now