ಡಿಕೆಶಿ ಓಡಿಸಿದ್ದ ಸ್ಕೂಟಿ ಮೇಲೆ 34 ಕೇಸ್!

ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೆಬ್ಬಾಳ ಮೇಲ್ಸೇತುವೆ ಕಾಮಗಾರಿ ಪರಿಶೀಲನೆ ನಡೆಸಿದ್ದರು. ಈ ಸಂದರ್ಭದಲ್ಲಿ ಹೊಸ ಸೇತುವೆ ಮೇಲೆ ಸ್ಕೂಟಿಯಲ್ಲಿ ಸವಾರಿ ಮಾಡಿದ್ದರು. ಹೀಗೆ ಡಿಸಿಎಂ ಡಿಕೆಶಿ ಸವಾರಿ ಮಾಡಿದ್ದಂತ ಬೈಕ್ ಮೇಲೆ 34 ಕೇಸ್ ಗಳಿದ್ದರೆ, ಅದರ ದಂಡದ ಮೊತ್ತ ರೂ.18,500 ಆಗಿದೆ, ಅದನ್ನು ಕಟ್ಟದೇ ಬೈಕ್ ಮಾಲೀಕ ಬಾಕಿ ಉಳಿಸಿಕೊಂಡಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಅವರು ನಗರದ ಹೆಬ್ಬಾಳ ಮೇಲ್ಸೇತುವೆ ಕಾಮಗಾರಿ ಪರಿಶೀಲನೆ ವೇಳೆ ಸಚಿವ ಬೈರತಿ ಸುರೇಶ್ ಜೊತೆಗೆ ಸ್ಕೂಟಿಯಲ್ಲಿ … Read more

ಆಸ್ಪತ್ರೆಯಲ್ಲಿ ಬಾಣಂತಿ ಸಾವು- ಆಕ್ರೋಶ

ಬೆಂಗಳೂರು: ಹೆರಿಗೆಯಾದ ಕೆಲವೇ ಗಂಟೆಗಳಲ್ಲಿ ಬಾಣಂತಿ ಸಾವನ್ನಪ್ಪಿದ್ದು ಇದಕ್ಕೆ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ ಈ ಒಂದು ಘಟನೆ, ಬೆಂಗಳೂರಿನ ಕೋಣನಕುಂಟೆಯಲ್ ಕ್ರಾಸ್ ಬಳಿರುವ ಅಸ್ಟ್ರಾ ಆಸ್ಪತ್ರೆಯಲ್ಲಿ ನಡೆದಿದೆ.ಅಸ್ಟ್ರಾ ಆಸ್ಪತ್ರೆ ವೈದ್ಯರ ನಿರ್ಲಕ್ಷದಿಂದ ಬಾಣಂತಿ ಸಾವನಪ್ಪಿದ್ದಾಳೆ ಎನ್ನುವ ಆರೋಪ ಕೇಳಿ ಬಂದಿದೆ.ಬೆಂಗಳೂರಿನ ಕೋಣನಕುಂಟೆ ಕ್ರಾಸ್ ನಲ್ಲಿರುವ ಅಸ್ಟ್ರಾ ಆಸ್ಪತ್ರೆಯಲ್ಲಿ ನಿನ್ನೆ ಮಂಡ್ಯ ಮೂಲದ ತನು (23) ಎನ್ನುವ ಮಹಿಳೆ ದಾಖಲಾಗಿದ್ದರು.ಈ ವೇಳೆ ಆಸ್ಪತ್ರೆಯ ವೈದ್ಯರು ಹೆರಿಗೆ ಮಾಡಿಸಿದ್ದಾರೆ. ಶಸ್ತ್ರಚಿಕಿತ್ಸೆಯಾದ ಕೆಲವೇ ಗಂಟೆಯಲ್ಲಿ ತನು ಮೃತಪಟ್ಟಿದ್ದಾರೆ … Read more

ವಾಹನಗಳಿಗೆ ಬೆಂಕಿ- ಮೂವರ ಬಂಧನ

ಬೆಂಗಳೂರು: ದ್ವೇಷದಿಂದ ಹತ್ತು ಬೈಕ್, ಏಳು ಸೈಕಲ್ ಮತ್ತು ಅಂಗಡಿಯೊಂದಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಹಲಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.ಮಕ್ಸೂದ್ ಅಹದ್ (26),ಇಜಾರ್ ಪಾಷಾ (24),ಹಮಿತ್ ತಬ್ರೇಜ್ (26) ಬಂಧಿತ ಆರೋಪಿಗಳು. ಜು.28 ರಂದು ಬೆಳಗಿನ ಜಾವ 3.30 ರ ಸುಮಾರಿನಲ್ಲಿ ಹಲಸೂರಿನ ಕಾಳಿಯಮ ಸ್ಟ್ರೀಟ್ ನ 4ನೇ ಬೀದಿಯ ರಸ್ತೆಯಲ್ಲಿ ನಿಲ್ಲಿಸಿದ್ದ ಹತ್ತು ಬೈಕ್ ಗಳು, ಏಳು ಸೈಕಲ್ ಗಳಿಗೆ ಪೆಟ್ರೋಲ್ ಸುರಿದು ಆರೋಪಿಗಳು ಬೆಂಕಿ ಹಚ್ಚಿದ್ದರು.ಅದೇ ದಿನ ಮತ್ತೊಂದು … Read more

ಮನೆ ಬೀಗ ಮುರಿದು ಒಡವೆ, ಹಣ ಕಳ್ಳತನ

ಗುಬ್ಬಿ: ಹಾಡ ಹಗಲಲ್ಲಿಯೇ ಪಟ್ಟಣದಲ್ಲಿ ಮನೆ ಬೀಗ ಮುರಿದು ಒಡವೆ ಮತ್ತು ಹಣ ದೋಚಿರುವುದು ಪಟ್ಟಣದ ಜನತೆಯಲ್ಲಿ ಆತಂಕವನ್ನುಂಟು ಮಾಡಿದೆ. ಪಟ್ಟಣದ ಮಾರುತಿ ನಗರದ ನಿವಾಸಿಗಳಾದ ಸರ್ವೇಯರ್ ಜಗದೀಶ್ ಹಾಗೂ ಅವರ ಪತ್ನಿ ಮನೆಗೆ ಬೀಗ ಹಾಕಿಕೊಂಡು ಕೆಲಸಕ್ಕೆ ಹೋಗಿದ್ದ ವೇಳೆ ಗಮನಿಸಿದ ಕಳ್ಳರು ಮನೆಯ ಬೀಗ ಮುರಿದು ಹಣ, ಒಡವೆ ಕದ್ದೊಯ್ದಿದ್ದಾರೆ. ಜಗದೀಶ್ ದಂಪತಿ ಮಗಳ ಮದುವೆ ನಿಶ್ಚಯವಾಗಿದ್ದು, ಮುಂದಿನ ಭಾನುವಾರ ನಿಶ್ಚಿತಾರ್ಥಕ್ಕಾಗಿ ಎಲ್ಲ ಸಿದ್ಧತೆ ಮಾಡಿಕೊಂಡಿದ್ದರು, ಸ್ನೇಹಿತರ ಬಳಿ ಹಣ ಪಡೆದು ತಂದು ಮನೆಯಲ್ಲಿ … Read more

ಮಳೆ ಅವಾಂತರ, ಮನೆ ಗೋಡೆ ಕುಸಿತ, 9 ಮಂದಿ ಪಾರು

ಗುಬ್ಬಿ: ತಾಲೂಕಿನ ಬಹುತೇಕ ಭಾಗಗಳಲ್ಲಿ ಸೋಮವಾರ ರಾತ್ರಿ ಭರ್ಜರಿಯಾಗಿ ಮಳೆ ಸುರಿಯುವ ಮೂಲಕ ಸಾಕಷ್ಟು ಅನಾಹುತ ಸೃಷ್ಟಿ ಮಾಡಿದೆ. ತಾಲೂಕಿನ ಮುನಿಯಪ್ಪನ ಪಾಳ್ಯ ಗ್ರಾಮದ ಸಿದ್ದಮ್ಮ ಎನ್ನುವವರ ಮನೆ ಸಂಪೂರ್ಣವಾಗಿ ಗೋಡೆ ಕುಸಿದು 9 ಜನರು ಅದೃಷ್ಟವಶಾತ್ ಪಾರಾಗಿದ್ದಾರೆ, ಅದೇ ಮನೆಯಲ್ಲಿ ಮಲಗಿದ್ದ 9 ಜನರು ಹೆಚ್ಚು ಮಳೆ ಬೀಳುತ್ತಿದ್ದುದನ್ನು ಕಂಡು ಹೊರ ಭಾಗಕ್ಕೆ ಬಂದ ಕೊಡಲೇ ಮನೆಯ ಗೋಡೆ ಕುಸಿತ ಕಂಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ, ಸರಕಾರ ನಮಗೆ ಪರಿಹಾರ ನೀಡಬೇಕು ಮತ್ತು ಮನೆ ನಿರ್ಮಾಣ ಮಾಡಿಕೊಡಬೇಕು … Read more

ದೇವ ಮಾನವನ ಹೆಸರೇಳಿ ವ್ಯಕ್ತಿಗೆ ವಂಚನೆ

ಮೈಸೂರು: ದೇವ ಮಾನವನ ಹೆಸರೇಳಿಕೊಂಡು ನಗರದ ವ್ಯಕ್ತಿಯೊಬ್ಬರಿಂದ 2.19 ಕೋಟಿ ರೂ. ಹಣ ಹಾಗೂ 200 ಗ್ರಾಂ ಚಿನ್ನಾಭರಣವನ್ನು ವಂಚಕ ದಂಪತಿ ಲಪಟಾಯಿಸಿರುವ ಘಟನೆ ಸೆನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದಕ್ಷಿಣ ಕನ್ನಡ ಮೂಲದ ರೂಪಶ್ರೀ ಕುಮಾರ್ ಹಾಗೂ ಸಂದೇಶ್ ದಂಪತಿ ನಗರದ ಜೆಎಸ್ಎಸ್ ಲೇಔಟ್ನ ನಿವಾಸಿ ಅರುಣ್ ಕುಮಾರ್ (54) ಅವರಿಗೆ ಕೇವಲ ವಾಟ್ಸಾಪ್ ಮೂಲಕವೇ ವಂಚಿಸಿರುವುದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ. 2017ರಲ್ಲಿ ಅರುಣ್ ಕುಮಾರ್ ಅವರನ್ನು ರೂಪಶ್ರೀ ಕುಮಾರ್ ಸಂಪರ್ಕಿಸಿದಾಗ ತಾವು … Read more

ಬಸ್ ಮೇಲೆ ಕಲ್ಲು ತೂರಾಟ

ಗದಗ: ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಮಂಗಳವಾರದಿಂದ ಮುಷ್ಕರ ಆರಂಭಿಸಿದ್ದು, ಹುಬ್ಬಳ್ಳಿಯಿಂದ ಹೊಸಪೇಟೆಗೆ ಹೋಗುತ್ತಿದ್ದ ಬಸ್ ಮೇಲೆ ಮಾಸ್ಕ್ ಧರಿಸಿದ್ದ ಇಬ್ಬರು ವ್ಯಕ್ತಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಮಂಗಳವಾರ ಬೆಳಗ್ಗೆ 7.15 ರ ಸುರಿಗೆ ಹುಬ್ಬಳ್ಳಿ- ಗದಗ ಬೈಪಾಸ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಹುಬ್ಬಳ್ಳಿಯಿಂದ ಹೊಸಪೇಟೆಗೆ ಹೋಗುತ್ತಿದ್ದ ಬಸ್ ಅನ್ನು ಬೈಕ್ ನಲ್ಲಿ ಹಿಂಬಾಲಿಸಿದ ಇಬ್ಬರು ಮುಸುಕುಧಾರಿ ವ್ಯಕ್ತಿಗಳು, ಬಸ್ ಮುಂದೆ ಬಂದು ಕಲ್ಲು ತೂರಾಟ ನಡೆಸಿ ಪರಾರಿಯಾಗಿದ್ದಾರೆ. ಅದೃಷ್ಟವಶಾತ್ ಬಸ್ ನಲ್ಲಿ … Read more

ರಮ್ಯಾಗೆ ಅಶ್ಲೀಲ ಮೆಸೇಜ್- ನಾಲ್ವರ ಬಂಧನ

ಬೆಂಗಳೂರು: ನಟಿ, ಮಾಜಿ ಸಂಸದೆ ರಮ್ಯಾ ಅವರಿಗೆ ಇನ್ ಸ್ಟಾಗ್ರಾಂ ಖಾತೆಯಲ್ಲಿ ಅಶ್ಲೀಲವಾಗಿ ಕಮೆಂಟ್ ಮಾಡಿದ್ದ ಮತ್ತು ಬೆದರಿಕೆಯೊಡ್ಡಿದ್ದ ಆರೋಪದಡಿ ಮತ್ತಿಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಬಂಧಿತರನ್ನು ಭುವನ್ ಗೌಡ ಹಾಗೂ ರಾಜೇಶ್ ಎಂದು ಗುರುತಿಸಲಾಗಿದ್ದು, ಈ ಮೂಲಕ ಬಂಧಿತರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಇದೇ ಪ್ರಕರಣದಲ್ಲಿ ಆಗಸ್ಟ್ 2ರಂದು ಟಿ ಓಬಣ್ಣ ಮತ್ತು ಗಂಗಾಧರ ಎಂಬುವವರನ್ನು ಬಂಧಿಸಲಾಗಿತ್ತು. ನಟ ದರ್ಶನ್ ಅವರ ಅಭಿಮಾನಿಗಳು ಎಂದು ಹೇಳಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಹಾಗೂ ಅವಹೇಳನಕಾರಿ … Read more

ಆನ್ ಲೈನ್ ನಲ್ಲಿ ನಕಲಿ ಕಾನೂನು ಸೇವೆ ಇಬ್ಬರು ಸಹೋದರರ ಬಂಧನ

ಬೆಂಗಳೂರು: ಆನ್ ಲೈನ್ ನಲ್ಲಿ ನಕಲಿ ಕಾನೂನು ಸೇವೆ ಒದಗಿಸುತ್ತಿದ್ದ ಇಬ್ಬರು ಸಹೋದರರ ದೊಡ್ಡ ಸೈಬರ್ ಅಪರಾಧ ಜಾಲವನ್ನು ಸಿಸಿಬಿ ಪೊಲೀಸರು ಭೇದಿಸಿ ಒಬ್ಬನನ್ನು ಬಂಧಿಸಿದ್ದಾರೆ. ಆರೋಪಿ ಸಹೋದರ ದುಬೈನಲ್ಲಿದ್ದು, ಹಲವಾರು ನಕಲಿ ಕಂಪನಿಗಳನ್ನು ಸ್ಥಾಪಿಸಿ ಆನ್ ಲೈನ್ ವಂಚನೆ ನಡೆಸಲು ಸಾಂದರ್ಭಿಕ ಜಾಲವೊಂದನ್ನು ನಿರ್ಮಿಸಿದ್ದನು ಎಂಬುವುದು ಪೊಲೀಸರ ತನಿಖೆಯಿಂದ ಬಹಿರಂಗವಾಗಿದೆ. ನಗರದ ಕಸ್ತೂರಿನಗರದಲ್ಲಿ ಇಂಡಿಯನ್ ಲೀಗಲ್ಎಂಬ ನಕಲಿ ಕಂಪನಿಯನ್ನು ಸ್ಥಾಪಿಸಿ 12 ಟೆಲಿಕಾಲರ್ಗಳನ್ನು ನೇಮಿಸಿ ಸೈಬರ್ ವಂಚನೆ ಗೊಳಗಾದವರಿಗೆ ಹಣ ಮರಳಿ ನೀಡುವುದಾಗಿ ಭರವಸೆ ನೀಡಿ … Read more

ದೂರಸಂಪರ್ಕ ಸಂಸ್ಥೆಗಳಿಗೆ ವಂಚನೆ- ಇಬ್ಬರ ಬಂಧನ

ಬೆಂಗಳೂರು: ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತಿಸಿ ಸರ್ಕಾರ ಹಾಗೂ ದೂರಸಂಪರ್ಕ ಸಂಸ್ಥೆಗಳಿಗೆ ಕೋಟ್ಯಾಂತರ ರೂಪಾಯಿ ವಂಚನೆ ಮಾಡುತ್ತಿದ್ದ ಕೇರಳದ ವ್ಯಕ್ತಿ ಸೇರಿದಂತೆ ಇಬ್ಬರನ್ನು ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಒಂಬತ್ತು ಸಿಮ್ ಬಾಕ್ಸ್ ಗಳು, ಮೊಬೈಲ್, 6 ರೌಟರ್ ಗಳು, ಲ್ಯಾಪ್ ಟ್ಯಾಪ್, 702 ಸಿಮ್ ಕಾರ್ಡ್ಗಳನ್ನು ವಶಪಡಿಸಿಕೊಂಡಿದ್ದು, ಇವುಗಳ ಮೌಲ್ಯ 10 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ. ವೈಟ್ಫಿಲ್ಡ್ ನ ಇಮಡಿಹಳ್ಳಿ ಮುಖ್ಯ ರಸ್ತೆಯ ರಾಮಮಂದಿರದ ಬಳಿ ಕೆಲವರು ಸಿಮ್ ಬಾಕ್ಸ್ ಗಳಲ್ಲಿ … Read more