
ಮಂಗಳೂರು: ಗಾಂಜಾ ಸಂಗ್ರಹಿಸಿದ ಮತ್ತು ಮಾರಾಟ ಮಾಡಲು ಯತ್ನಿಸಿದ ಆರೋಪದ ಮೇಲೆ ಕೇರಳದ ಎರಡನೇ ವರ್ಷದ ಬಿಬಿಎ ವ್ಯಾಸಂಗ ಮಾಡುತ್ತಿದ್ದ 11 ವಿದ್ಯಾರ್ಥಿಗಳನ್ನು ಮಂಗಳೂರಿನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಖಚಿತ ಸುಳಿವಿನ ಮೇರೆಗೆ, ಪಿಎಸ್ ಐ ಶೀತಲ್ ಅಲಗೂರ್ ನೇತತ್ವದ ಮಂಗಳೂರು ದಕ್ಷಿಣ ಪೊಲೀಸರ ತಂಡ ಗುರುವಾರ ಸಂಜೆ ಅತ್ತಾವರದ ಕಪ್ರಿಗುಡ್ಡೆ ಮಸೀದಿ ಬಳಿಯ ಅಪಾರ್ಟ್ಮೆಂಟ್ ಮೇಲೆ ದಾಳಿ ನಡೆಸಿತು.
ಎಲ್ಲ ಆರೋಪಿಗಳು ಕಾಲೇಜು ಅಧ್ಯಯನಕ್ಕಾಗಿ ನಗರದಲ್ಲಿ ತಂಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ದಾಳಿಯಲ್ಲಿ 12.26 ಕೆಜಿ ಗಾಂಜಾ ಪತ್ತೆಯಾಗಿದ್ದು, ಇದನ್ನು ಒಡಿಶಾದಿಂದ ತರಲಾಗಿದೆ. ಬಳಿಕ ಇದನ್ನು ಏಳು ಪೊಟ್ಟಣಗಳಲ್ಲಿ ಪ್ಯಾಕ್ ಮಾಡಲಾಗಿದೆ ಎಂದು ವರದಿಯಾಗಿದೆ.
ಪ್ಯಾಕೇಜಿಂಗ್ ನ ಪ್ರಮಾಣ ಮತ್ತು ವಿಧಾನವು ಮಾರಾಟ ಮಾಡಲು ಪ್ರಯತ್ನಿಸಲಾಗಿದೆ ಎಂದು ಸೂಚಿಸುತ್ತದೆ. ವಶಪಡಿಸಿಕೊಂಡ ವಸ್ತುವಿನ ಮೌಲ್ಯ ಸುಮಾರು 2.45 ಲಕ್ಷ ರೂ. ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಂಜಾ ಸಂಗ್ರಹ- 11 ವಿದ್ಯಾರ್ಥಿಗಳ ಬಂಧನ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


