--ಇಲ್ಲಿ ಜಾಹೀರಾತು--

ಜೈಲಲ್ಲೇ ರೌಡಿಶೀಟರ್ ಗುಬ್ಬಚ್ಚಿ ಸೀನಾ ಬರ್ತಡೇ

On: October 4, 2025 3:02 PM
Follow Us
--ಇಲ್ಲಿ ಜಾಹೀರಾತು--

Whatsapp Channel

Join Now

Telegram Group

Join Now


ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಈ ಮೊದಲು ಪರಪ್ಪನ ಅಗ್ರಹಾರ ಜೈಲು ಸೇರಿದಾಗ ಅಲ್ಲಿನ ರೌಡಿ ಶೀಟರ್ ಗಳ ಜೊತೆ ಕುಳಿತು ಹರಟೆ ಹೊರೆಡೆಯುವುದು ಸಿಗರೇಟ್ ಸಿರುವುದು ಭಾರಿ ಚರ್ಚೆಯಾಗಿತ್ತು. ಇದಕ್ಕೆ ಬ್ರೇಕ್ ಹಾಕಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದರು ಕೂಡ ಇದೀಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜ್ಯಾತಿಥ್ಯ ಮುಂದುವರೆದಿದೆ.
ಜೈಲಿನಲ್ಲಿ ಕೈದಿಗಳ ಕಳ್ಳಾಟ ಇನ್ನೂ ನಿಂತಿಲ್ಲ, ವಿಚಾರಣಾಧೀನ ಕೈದಿಗಳ ಕಳ್ಳಾಟಕ್ಕೆ ಬ್ರೇಕ್ ಇಲ್ಲ ಎಂಬಂತಾಗಿದೆ. ನಟೋರಿಯಸ್ ರೌಡಿಶೀಟರ್ ಶೀನಿವಾಸ್ ಅಲಿಯಾಸ್ ಗುಬ್ಬಚ್ಚಿ ಸೀನಾ ಜೈಲಲ್ಲೇ ಭರ್ಜರಿಯಾಗಿ ಬರ್ತಡೆ ಸೆಲಬ್ರೇಟ್ ಮಾಡಿಕೊಂಡಿದ್ದಾನೆ. ಆಪಲ್ ಹಾರ ಹಾಕಿಕೊಂಡು ಜೈಲಿನ ಬ್ಯಾರಕ್ ನಲ್ಲಿ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾನೆ.
ಈತ ಕೊಲೆ ಕೇಸ್ ನಲ್ಲಿ ಜೈಲು ಸೇರಿದ್ದ ನಟೋರಿಯಸ್ ರೌಡಿಶೀಟರ್. ಮೊಬೈಲ್ನಲ್ಲಿ ಬರ್ತ್ಡೇ ಪಾರ್ಟಿಯ ವಿಡಿಯೋ, ಫೋಟೋ ತೆಗೆದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಜೈಲಿನಿಂದಲೇ ವಿಡಿಯೋ, ಫೋಟೋ ಪೋಸ್ಟ್ ಆಗಿದೆ. ಗುಬ್ಬಚ್ಚಿ ಸೀನನ ಶಿಷ್ಯಂದಿರಿಂದ ಪೋಸ್ಟ್ ಆಗಿದೆ. ಜೈಲಧಿಕಾರಿಗಳು, ಸಿಬ್ಬಂದಿಯಿಂದ ಕೈದಿಗಳಿಗೆ ರಾಜಾತಿಥ್ಯ ಸಿಗುತ್ತಿದೆ ಎಂಬುದನ್ನು ವೀಡಿಯೋ ಬಹಿರಂಗಪಡಿಸಿದೆ.

Editor TumkurVarthe

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು

WhatsApp

Join Now

Telegram

Join Now

Instagram

Join Now