
ಪಾವಗಡ: ಪಾವಗಡ ಪಟ್ಟಣದ ಹೊರ ವಲಯದ ಕಣಿವೇನಹಳ್ಳಿ ಕ್ರಾಸ್ ಬಳಿ ಭೀಕರ ರಸ್ತೆ ಅಪಘಾತವಾಗಿ ಆಂಧ್ರ ಮೂಲದ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಜರುಗಿದೆ.
ಗೋಪಾಲಪ್ಪ ಮತ್ತು ನರಸಿಂಹಮೂರ್ತಿ ಎಂಬುವರು ಸತ್ಯ ಸಾಯಿ ಜಿಲ್ಲೆಯ ಮಡಕಶಿರಾ ತಾಲೂಕಿನ ರೇಕಲಕುಂಟೆ ಗ್ರಾಮದವರು, ಪಾವಗಡ ತಾಲೂಕಿನ ಕಡಪಲಕೆರೆಗೆ ಮೂರ್ತಿ ಅವರ ಮಗ ನರೇಶ್ ಅವರನ್ನು ಮಾತನಾಡಿಸಿಕೊಂಡು ಕಾರಿನಲ್ಲಿ ಹಿಂತಿರುವಾಗ ನಾಯಿ ಅಡ್ಡ ಬಂದ ಕಾರಣ ಅದನ್ನು ತಪ್ಪಿಸಲು ಹೋಗಿ ಪಕ್ಕದಲ್ಲಿರುವ ಗುಣಿಗೆ ಎಗರಿ ಕಾರು ಅಪಘಾತವಾಗಿದ್ದು ಸ್ಥಳದಲ್ಲೇ ಗೋಪಾಲಪ್ಪ (50) ಸಾವನ್ನಪ್ಪಿದ್ದಾರೆ.
ನರಸಿಂಹಮೂರ್ತಿ (46) ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸಿದ್ದಾರೆ, ಸ್ಥಳಕ್ಕೆ ಮಧುಗಿರಿ ಡಿವೈಎಸ್ಪಿ ಮಂಜುನಾಥ್ ಪಾವಗಡ ಸಿಪಿಐ ಸುರೇಶ್ ಧಾವಿಸಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕಳೆದೊಂದು ವಾರದಲ್ಲಿ ಪಾವಗಡ ಪಟ್ಟಣದ ಸಮೀಪ ಮೂರು ಪ್ರತ್ಯೇಕ ಅಪಘಾತಗಳಲ್ಲಿ ಮೂವರು ಸಾವನ್ನಪ್ಪಿದ್ದು ಇದರಿಂದ ಪಾವಗಡದ ಜನತೆ ಆತಂಕ ಮೂಡಿದೆ, ಎಂಎಜಿ ಸರ್ಕಲ್ ಬಳಿ ಸ್ಕೂಟಿಯಲ್ಲಿ ಹೋಗುತ್ತಿದ್ದ ಕಾಲೇಜು ವಿದ್ಯಾರ್ಥಿನಿಯ ಮೇಲೆ ಈಚರ್ ಹರಿದು ಬಾಲಕಿ ಸ್ಥಳದಲ್ಲಿ ಸಾವನ್ನಪ್ಪಿದ್ದಳು, ಇದಾದ ಎರಡು ದಿನಗಳ ನಂತರ ಪಟ್ಟಣದ ಶಿರಾ ರಸ್ತೆಯಲ್ಲಿ ಪೆಟ್ರೋಲ್ ಬಂಕ್ ಮುಂಭಾಗ ಲಾರಿ ಹರಿದು ಆಂಧ್ರದ ಮಹಿಳೆ ಸಾವನ್ನಪ್ಪಿದ್ದರು, ಪಟ್ಟಣದ ಸಾರ್ವಜನಿಕರು ಕೆಶಿಫ್ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದು, ಪಾವಗಡ ಪಟ್ಟಣದ ಸಮೀಪ ಸುತ್ತಮುತ್ತಲು ಅಪಘಾತ ವಲಯ ಎಂದು ನಾಮಫಲ ಅಳವಡಿಸಲು ಮತ್ತು ಅಂಶ ಹಾಕಲು ಒತ್ತಾಯಿಸಿದ್ದಾರೆ.
ಕಾರು ಅಪಘಾತ- ವ್ಯಕ್ತಿ ಸ್ಥಳದಲ್ಲೇ ಸಾವು

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


