
ಚಾಮರಾಜನಗರ: ಚಿನ್ನದಾಸೆಗೆ ವೃದ್ಧೆಯನ್ನು ಕೊಲೆ ಮಾಡಿ ಚಿನ್ನದ ಸರ, ಓಲೆ, ನಗದನ್ನು ಕಳ್ಳತನ ಮಾಡಿರುವ ಘಟನೆ ಯಳಂದೂರು ತಾಲೂಕಿನ ಬನ್ನಿಸಾರಿಗೆ ಗ್ರಾಮದಲ್ಲಿ ನಡೆದಿದೆ. ಸಿದ್ದಮ್ಮ (70) ಮೃತ ದುರ್ದೈವಿ. ಮನೆಯಲ್ಲಿದ್ದ 20 ಗ್ರಾಂ ಚಿನ್ನದ ಸರ, 10 ಗ್ರಾಂ ಓಲೆ, 50 ಸಾವಿರ ನಗದು ಕಳವಾಗಿದೆ. ರಾತ್ರಿ ಮಲಗಿದ ವೇಳೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ನಿನ್ನೆ ರಾತ್ರಿ ಕರೆ ಮಾಡಿ ಮಾತಾಡಿದ್ದೆ. ಊಟ ಮಾಡಿ ನಮ್ಮ ತಾಯಿ ಮಲಗಿದ್ದಳು. ಬೆಳಗ್ಗೆ ಪಕ್ಕದ ಮನೆಯವರು ನಿಮ್ಮ ತಾಯಿ ಊರಿಗೆ ಬಂದಿದ್ದಾರೆಯೇ ಎಂದು ಕರೆ ಮಾಡಿದ್ದರು. ಮನೆಯ ಕಿಟಕಿಯಿಂದ ನೋಡಿದ ವೇಳೆ ಅವರು ಮೃತಪಟ್ಟಿರುವುದು ಗೊತ್ತಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ವೃದ್ಧೆ ಸಿದ್ದಮ್ಮ ಚಿಲ್ಲರೆ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು. ಚಿನ್ನ ಹಾಗೂ ಹಣದಾಸೆಗೆ ಕತ್ತು ಹಿಸುಕಿ ಕೊಂದಿರುವ ಆರೋಪ ಮಾಡಲಾಗಿದೆ. ಅಗರ-ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೃದ್ಧೆ ಕೊಲೆ ಮಾಡಿ ಚಿನ್ನಾಭರಣ ದರೋಡೆ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


