ಹಲವು ದರೋಡೆ, ಕಳವು ಪ್ರಕರಣ ಪತ್ತೆ: ಆರೋಪಿಗಳ ಬಂಧನ

ಮೈಸೂರು: ಮೈಸೂರು ಜಿಲ್ಲಾ ಪೊಲೀಸರು ಎರಡು ತಿಂಗಳಲ್ಲಿ ಕಾರ್ಯಾಚರಣೆ ನಡೆಸಿ ಹಲವು ಪ್ರಕರಣ ಪತ್ತೆ ಮಾಡಿದ್ದಾರೆ. ನಗದು, ಚಿನ್ನಾಭರಣ, ವಾಹನ ಸೇರಿದಂತೆ 29 ಕೋಟಿಗೂ ಹೆಚ್ಚು ಬೆಲೆಯ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು, ಈ ವರ್ಷದ ಜನವರಿಯಿಂದ ಫೆಬ್ರವರಿವರೆಗೆ 01 ಡಕಾಯಿತಿ, 2 ಸುಲಿಗೆ, 7 ಮನೆ ಕಳ್ಳತನ, 5 ವಾಹನ ಕಳ್ಳತನ. 8 ಸಾಮಾನ್ಯ ಕಳ್ಳತನ, 1 ಜಾನುವಾರು ಪ್ರಕರಣ ಪತ್ತೆ ಮಾಡಿ ಒಟ್ಟು ರೂ.29.97.788 ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು 9 ಪ್ರಕರಣಗಳಲ್ಲಿ 279 ಗ್ರಾಂ ಚಿನ್ನದ ಒಡವೆಗಳು ಮತ್ತು 1 ಪ್ರಕರಣದಲ್ಲಿ 30 ಗ್ರಾಂ ಬೆಳ್ಳಿಯ ಕಾಲು ಚೈನು ಸಾಮಾಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಅಂದಾಜು ಮೌಲ್ಯ 10,46,800 ರೂ.ಗಳಾಗಿದೆ ಎಂದು ತಿಳಿಸಿದರು.
ಒಟ್ಟು 5 ಪ್ರಕರಣಗಳಲ್ಲಿ 3,76,989 ರೂಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು 06 ಪ್ರಕರಣಗಳಲ್ಲಿ ಮೂರು ಕಾರು, ಒಂದು ವ್ಯಾನ್, 4 ಮೋಟಾರ್ ಬೈಕ್ ಸೇರಿ 8 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಅಂದಾಜು ಮೌಲ್ಯ 14,33,000 ರೂ. ಎಂದು ಹೇಳಿದರು.
ಒಟ್ಟು 3 ಪ್ರಕರಣಗಳಲ್ಲಿ ಮೋಟಾರ್, ಮೊಬೈಲ್ ಹಾಗೂ ವೈರ್ ವಸ್ತುಗಳನ್ನು ವಶಪಡಿಸಿಕೊಂಡಿದ್ದು ಇವುಗಳ ಒಟ್ಟು ಮೌಲ್ಯ 82,999 ರೂ. ಗಳಾಗಿದೆ. 1 ಪ್ರಕರಣಗಳಲ್ಲಿ 2 ಹಸುಗಳುಗಳನ್ನು ವಶಪಡಿಸಿಕೊಂಡಿದೆ. ಒಟ್ಟು ಅಂದಾಜು ಮೌಲ್ಯ 58,000 ರೂ. ಗಳಾಗಿದೆ ಎಂದು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.
2026ನೇ ಜನವರಿಯಿಂದ ಇದುವರೆಗೆ ಎನ್.ಡಿ.ಪಿ.ಎಸ್ ಕಾಯ್ದೆ ಅಡಿ 55 ಪ್ರಕರಣಗಳನ್ನು ದಾಖಲಿಸಿದೆ. 1 ಕೆ.ಜಿ. 860 ಗ್ರಾಂ ಗಾಂಜಾ ಮತ್ತು ಎಂ.ಡಿ.ಎA.ಎ .010 ಎಂ.ಎಲ್ ಅನ್ನು ವಶಪಡಿಸಿಕೊಳ್ಳಲಾಗಿದ್ದು, ಒಟ್ಟು 56 ಜನರುಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಲಾಟರಿ ಕಾಯ್ದೆ ಅಡಿ ಒಟ್ಟು 14 ಪ್ರಕರಣಗಳನ್ನು ದಾಖಲಿಸಿದೆ. 2,26,707 ರೂ. ಮೊತ್ತದ ಲಾಟರಿ ಟಿಕೇಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
29 ಕೋಟಿ ಮೌಲ್ಯದ ಚಿನ್ನಾಭರಣ ವಶ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


