
ನವದೆಹಲಿ: ಮಧ್ಯಪ್ರಾಚ್ಯ ಯುದ್ಧದಿಂದ ದಿನೇ ದಿನೇ ಡಾಲರ್ ಮುಂದೆ ಪಲ್ಟಿಯಾಗುತ್ತಿರುವ ರೂಪಾಯಿ ಮೌಲ್ಯವನ್ನು ವೃದ್ಧಿಸಲು ಆರ್ಬಿಐ ಮಧ್ಯಪ್ರವೇಶ ಮಾಡಿದರೂ ಮತ್ತೆ ಕುಸಿದಿದೆ. ಮೊದಲ ಬಾರಿಗೆ 1 ಡಾಲರ್ ಮೌಲ್ಯ 95 ರೂ.ಗಳ ಗಡಿಯನ್ನು ದಾಟಿದೆ.
ಎಲ್ಲಾ ಬ್ಯಾಂಕುಗಳು ಪ್ರತಿ ವ್ಯವಹಾರದ ದಿನದ ಅಂತ್ಯಕ್ಕೆ ತಮ್ಮ ಎನ್ಒಪಿ-ಐಎನ್ ಆರ್ ಅನ್ನು ಗರಿಷ್ಠ 100 ಮಿಲಿಯನ್ ಡಾಲರ್ಗೆ ಮಿತಿಗೊಳಿಸಬೇಕು ಎಂದು ಆರ್ಬಿಐ ನಿರ್ದೇಶನ ನೀಡಿದೆ. ಈ ಹೊಸ ನಿಯಮವನ್ನು ಪಾಲಿಸಲು ಬ್ಯಾಂಕ್ಗಳಿಗೆ ಏಪ್ರಿಲ್ 10 ರವರೆಗೆ ಗಡುವು ನೀಡಲಾಗಿದೆ. ಆರ್ಬಿಐ ಈ ನಿರ್ಧಾರದ ಬೆನ್ನಲ್ಲೇ ರೂಪಾಯಿ ಮೌಲ್ಯ ಸೋಮವಾರ ಬೆಳಗ್ಗೆ ಸುಮಾರು 1 ರೂಪಾಯಿ 30 ಪೈಸೆ ಏರಿಕೆಯಾಗಿ 93.59ಕ್ಕೆ ತಲುಪಿತ್ತು. ಬೆಳಗ್ಗೆ ಏರಿಕೆಯಾಗಿ ನಂತರ ರೂಪಾಯಿ ಮೌಲ್ಯ ಕುಸಿಯಲು ಆರಂಭವಾಯಿತು. ಮಧ್ಯಾಹ್ನ 3 ಗಂಟೆ ವೇಳೆಗೆ 1 ಡಾಲರ್ ಮುಂದೆ 95.13 ರೂ.ನಲ್ಲಿ ವ್ಯವಹಾರ ನಡೆಸುತ್ತಿತ್ತು. ಡಾಲರ್ ಮುಂದೆ ರೂಪಾಯಿ ಮೌಲ್ಯ 95 ಡಾಲರ್ಗೆ ಕುಸಿದಿರುವುದು ಇದೇ ಮೊದಲು.
ರೂಪಾಯಿ ದಾಖಲೆ ಕುಸಿತ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


