--ಇಲ್ಲಿ ಜಾಹೀರಾತು--

ಕಿರುಕುಳಕ್ಕೆ ಬೇಸತ್ತು ಯುವತಿ ಆತ್ಮಹತ್ಯೆ- ಸತ್ಯ ಬಯಲು

On: April 19, 2025 2:19 PM
Follow Us
--ಇಲ್ಲಿ ಜಾಹೀರಾತು--

Whatsapp Channel

Join Now

Telegram Group

Join Now


ಬೆಳಗಾವಿ: ಮುಸ್ಲಿಂ ಯುವಕನ ಕಿರುಕುಳಕ್ಕೆ ಬೇಸತ್ತು ದಲಿತ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಳೆದ ಒಂದು ವಾರದ ಹಿಂದೆ ಬೆಳಗಾವಿಯ ಮಹಾಂತೇಶ್ ನಗರದ ಸಮಾಜ ಕಲ್ಯಾಣ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ ನೇಣು ಬಿಗಿದುಕೊಂಡು ಬಿಸಿಎ ಓದುತ್ತಿದ್ದ ವಿದ್ಯಾರ್ಥಿನಿ ಶಿಲ್ಪಾ ಆತ್ಮಹತ್ಯೆಗೆ ಶರಣಾಗಿದ್ದಳು. ಇದೀಗ ಈ ಒಂದು ಆತ್ಮಹತ್ಯೆ ಪ್ರಕರಣಕ್ಕೆ ಸ್ಪೋಟಕ ತಿರುವು ಸಿಕ್ಕಿದೆ. ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಚಿಕ್ಕಮಲ್ಲೂರು ಗ್ರಾಮದ ನಿವಾಸಿಯಾದ ಶಿಲ್ಪಾ (22) ಆತ್ಮಹತ್ಯೆಗೆ ಶರಣಾಗಿದ್ದಳು.

ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಚಿಕ್ಕಮಲ್ಲೂರು ಗ್ರಾಮದ ಶಿಲ್ಪಾ ಬೆಳಗಾವಿಯಲ್ಲಿ ಬಿಸಿಎ ಓದುತ್ತಿದ್ದಳು. ನವೀನ್ ಎಂಬ ಯುವಕನನ್ನು ಶಿಲ್ಪಾ ಪ್ರೀತಿಸುತ್ತಿದ್ದಳು. ಶಿಗ್ಗಾವಿಯ ರ್ನಿಚರ್ ಅಂಗಡಿಯಲ್ಲಿ ನವೀನ್ ಕೆಲಸ ಮಾಡುತ್ತಿದ್ದ.ಈ ವೇಳೆ ಶಿಲ್ಪಾಗೆ ಕರೆ ಮಾಡಿ ಮುಸ್ಲಿಂ ವ್ಯಕ್ತಿ ಟಾರ್ಚರ್ ನೀಡಿದ್ದ ಎಂಬ ಆರೋಪ ಕೇಳಿ ಬಂದಿದ್ದು, ನವೀನ್ ಕೆಲಸ ಮಾಡುತ್ತಿದ್ದ ಅಂಗಡಿ ಮಾಲೀಕನೇ ಶಿಲ್ಪಾಗೆ ಕಿರುಕುಳ ನೀಡುತ್ತಿದ್ದ. ಕಳೆದ ಮೂರು ವರ್ಷಗಳಿಂದ ಶಿಲ್ಪಾ ನವೀನ ಜೊತೆಗೆ ಲವ್ ಈ ವೇಳೆ ರಂಜಾನ್ ನದ್ ಎಂಬ ವ್ಯಕ್ತಿಯಿಂದ ಕರೆ ಮಾಡಿ ಶಿಲ್ಪಾಗೆ ಕಿರುಕುಳ ನೀಡಿರುವ ಆರೋಪ ಬಂದಿದೆ.

ಹಾಗಾಗಿ ಹಾಸ್ಟೆಲ್ ಅಲ್ಲಿ ನೇಣು ತೆಗೆದುಕೊಂಡು ಶಿಲ್ಪಾ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕಳೆದ ವಾರ ಈ ಒಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

Author

Editor TumkurVarthe

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು

WhatsApp

Join Now

Telegram

Join Now

Instagram

Join Now