ಗ್ಯಾಸ್ ಸಿಲಿಂಡರ್ ಕಳ್ಳರ ಬಂಧನ

ರಾಮನಗರ: ಗ್ಯಾಸ್ ಸಿಲಿಂಡರ್ ಸರಬರಾಜು ವಾಹನದಲ್ಲಿ ಸಿಲಿಂಡರ್ ಕದ್ದು ಎಸ್ಕೇಪ್ ಆಗಿದ್ದ ಇಬ್ಬರು ಕಳ್ಳರನ್ನು ಬಿಡದಿ ಪೊಲಿಸರು ಬಂಧಿಸಿದ್ದಾರೆ. ಮಹೇಶ್ ನಾಯಕ್ (19), ಗೋವಿಂದರಾಜು (20) ಬಂಧಿತ ಆರೋಪಿಗಳು. ರಾಮನಗರ ತಾಲೂಕಿನ ಬನ್ನಿಕುಪ್ಪೆ ಗ್ರಾಮದಲ್ಲಿ ಮನೆಮುಂದೆ ನಿಂತಿದ್ದ ಗ್ಯಾಸ್ ಸರಬರಾಜು ವಾಹನದಲ್ಲಿ 8 ಸಿಲಿಂಡರ್ ಕದ್ದು ಖದೀಮರು ಎಸ್ಕೇಪ್ ಆಗಿದ್ದರು. ಈ ಸಂಬAಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳ ಬಂಧನ ಮಾಡಲಾಗಿದೆ. ಆರೋಪಿಗಳಿಂದ 8 ಗ್ಯಾಸ್ ಸಿಲಿಂಡರ್‌ಗಳು ಹಾಗೂ ಕೃತ್ಯಕ್ಕೆ … Read more

ನೀರಿನ ಕ್ಯಾನ್ ಗಳಲ್ಲಿ ಪೆಟ್ರೋಲ್ ಸಂಗ್ರಹ!

ಚೆನ್ನೈ: ತಮಿಳುನಾಡಿನಲ್ಲಿ ಬಂಕ್ ಮುಂದೆ ಜನರು ಸಾಲುಗಟ್ಟಿ ನಿಂತು ನೀರಿನ ಕ್ಯಾನ್ ಗಳನ್ನು ತಂದು ಪೆಟ್ರೋಲ್ ಹಾಕಿಸುತ್ತಿದ್ದಾರೆ. ಈಗ ಸಿಲಿಂಡರ್‌ಗೆ ಸಮಸ್ಯೆಯಾಗಿದೆ ಮುಂದೆ ಪೆಟ್ರೋಲ್ ಕೂಡ ಸಿಗುವುದಿಲ್ಲ. ದರ ಭಾರೀ ಏರಿಕೆಯಾಗಲಿದೆ ಎಂಬ ಗಾಳಿ ಸುದ್ದಿ ವೈರಲ್ ಆದ ಬೆನ್ನಲ್ಲೇ ತಮಿಳುನಾಡಿನ ಪೆಟ್ರೋಲ್ ಬಂಕ್ ಮುಂದೆ ಜನ ಪೆಟ್ರೋಲ್ ಹಾಕಿಸಲು ಮುಗಿಬಿದ್ದಿದ್ದಾರೆ. ವಾಹನಗಳಿಗೆ ಫುಲ್ ಟ್ಯಾಂಕ್ ಪೆಟ್ರೋಲ್ ತುಂಬಿಸುವುದರ ಜೊತೆಗೆ ಮನೆಯಲ್ಲಿದ್ದ 20 ಲೀಟರ್ ವಾಟರ್ ಕ್ಯಾನ್ ತಂದು ಪೆಟ್ರೋಲ್ ತುಂಬಿಸಿಕೊAಡು ಹೋಗಿದ್ದಾನೆ. ತಮಿಳುನಾಡಿನ ಪೆಟ್ರೋಲ್ ಬಂಕ್‌ನ … Read more

ರೂಪಾಯಿ ಮೌಲ್ಯ ಕುಸಿತ

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಮುಂದುವರಿದ ಪರಿಣಾಮ ಕಚ್ಚಾತೈಲ ಬೆಲೆಯಲ್ಲಿ ತೀವ್ರ ಏರಿಕೆ ಮತ್ತು ಡಾಲರ್‌ಗೆ ಬೇಡಿಕೆ ಹೆಚ್ಚಳದಿಂದ ಗುರುವಾರ ಅಮೆರಿಕದ ಡಾಲರ್ ಎದುರು ಭಾರತದ ರೂಪಾಯಿ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿತ ಕಂಡಿದೆ. ಜಾಗತಿಕ ಕಚ್ಚಾ ತೈಲ ಬೆಲೆಗಳು ರಾತ್ರಿಯಿಡೀ ಏರುತ್ತಲೇ ಇದ್ದುದರಿಂದ ಡಾಲರ್ ಎದುರು ರೂಪಾಯಿ ಮೌಲ್ಯ 35 ಪೈಸೆ ಕುಸಿದು ದಿನದ ಕನಿಷ್ಠ ಮಟ್ಟ 92.36ಕ್ಕೆ ತಲುಪಿತು. ದೇಶೀಯ ಷೇರು ಮಾರುಕಟ್ಟೆ ಕುಸಿತದಿಂದ ಡಾಲರ್ ಮತ್ತಷ್ಟು ಪ್ರಬಲವಾಗುತ್ತಿದೆ. ಈಕ್ವಿಟಿ ಮಾರುಕಟ್ಟೆಗಳಲ್ಲಿ ವಿದೇಶಿ ಬಂಡವಾಳ … Read more

ಬಂಡೀಪುರ-ನಾಗರಹೊಳೆ ಸಫಾರಿ ಬಂದ್: ಇಲಾಖೆಗೆ 6 ಕೋಟಿ ರೂ. ಆದಾಯ ನಷ್ಟ

ಮೈಸೂರು: ಬಂಡೀಪುರ ಹುಲಿ ಮೀಸಲು ಅರಣ್ಯ ಮತ್ತು ನಾಗರಹೊಳೆ ಹುಲಿ ಮೀಸಲು ಪ್ರದೇಶಗಳಲ್ಲಿ ನವೆಂಬರ್ 7ರಿಂದ ಫೆಬ್ರವರಿ 21 ರವರೆಗೆ ವನ್ಯಜೀವಿ ಸಫಾರಿ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದರಿಂದ ಒಟ್ಟಾರೆ ಸುಮಾರು 6 ಕೋಟಿ ರೂ. ಆದಾಯ ನಷ್ಟವಾಗಿದೆ. ಈ ಅವಧಿಯಲ್ಲಿ ಸಫಾರಿ ಸ್ಥಗಿತಗೊಳಿಸುವುದರಿಂದ ಅರಣ್ಯ ಇಲಾಖೆಗೆ ಬರುವ ಆದಾಯದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರಿದೆ. ಎರಡು ಮೀಸಲು ಪ್ರದೇಶಗಳಲ್ಲಿ, ಬಂಡೀಪುರ ಹುಲಿ ಮೀಸಲು ಪ್ರದೇಶವು ಸುಮಾರು 2.5 ಕೋಟಿ ನಷ್ಟವನ್ನು ಅನುಭವಿಸಿದೆ. ನಾಗರಹೊಳೆ ಹುಲಿ ಮೀಸಲು ಪ್ರದೇಶದಲ್ಲಿ … Read more

ಆನೆ ದಾಳಿಗೆ ರೈತ ಬಲಿ

ಮಡಿಕೇರಿ: ಕೊಡಗಿನಲ್ಲಿ ಕಾಡಾನೆ ದಾಳಿ ಪ್ರಕರಣ ಹೆಚ್ಚುತ್ತಿವೆ. ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪ ಹೈಸ್ಕೂಲ್ ಪೈಸಾರಿಯಲ್ಲಿ ಕಾಫಿ ತೋಟಕ್ಕೆ ತೆರಳಿದ್ದ ಕಾಫಿ ಬೆಳೆಗಾರನ ಮೇಲೆ ಆನೆ ದಾಳಿ ಮಾಡಿದೆ. ಆನೆ ದಾಳಿಗೊಳಗಾದ ರೈತ ಗಣಪತಿ (49) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಾಡಹಗಲೇ ಕಾಫಿ ತೋಟದಲ್ಲಿ ಕಾಡಾನೆ ಕಾಣಿಸಿಕೊಂಡಿದೆ. ಸ್ಥಳಕ್ಕೆ ಪೊಲೀಸರು, ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕುಶಾಲನಗರ ತಾಲೂಕಿನ ವಾಲ್ನೂರಿನಲ್ಲಿ ನಂಜರಾಯಪಟ್ಟಣ ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಜಲಜಾಕ್ಷಿ ಇತ್ತೀಚೆಗೆ ಆನೆ ದಾಳಿಯಿಂದ ಮೃತಪಟ್ಟಿದ್ದರು.

ಕೋಳಿ ಮೊಟ್ಟೆ ಬೆಲೆ ಭಾರೀ ಕುಸಿತ: ಕೊಲ್ಲಿ ರಾಷ್ಟ್ರಗಳ ಯುದ್ಧದಿಂದ ಕರ್ನಾಟಕದ ಮೇಲೆ ಎಫೆಕ್ಟ್

ಮೈಸೂರು: ಕೆಲವು ದಿನಗಳಿಂದ ಕೋಳಿ ಮೊಟ್ಟೆ ಬೆಲೆಯಲ್ಲಿ ಭಾರೀ ಇಳಿಕೆ ಕಂಡಿದೆ. 7.5 ರೂ. ಇದ್ದ ಮೊಟ್ಟೆ ಬೆಲೆ ಈಗ 5 ರೂ.ಗೆ ಇಳಿಕೆಯಾಗಿದೆ. ಇದು ಗ್ರಾಹಕರಿಗೆ ಸಂತಸ ತಂದಿದೆ. ಆದರೆ, ಕೋಳಿ ಸಾಕಾಣಿಕೆದಾರರಲ್ಲಿ ಆತಂಕ ಮೂಡಿಸಿದೆ. ಮಧ್ಯಪ್ರಾಚ್ಯ ಯುದ್ಧದ ಹಿನ್ನೆಲೆಯಲ್ಲಿ ರಫ್ತು ವ್ಯತ್ಯಯ, ಹಬ್ಬದ ಕಾಲದ ಬೇಡಿಕೆ ಕುಸಿತ ಹಾಗೂ ಬೇಸಿಗೆ ಪರಿಣಾಮ ಮೊಟ್ಟೆ ಬೆಲೆ ಇಳಿಕೆಗೆ ಕಾರಣವಾಗಿದೆ ಎನ್ನಲಾಗಿದೆ. ಕಳೆದ ಸುಮಾರು 15 ದಿನಗಳಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ಮೊಟ್ಟೆ ದರದಲ್ಲಿ ದೊಡ್ಡ ಮಟ್ಟದ … Read more

ಟಿಕೆಟ್ ಫೈಟ್: ಮಲ್ಲಿಕಾರ್ಜುನ್- ಜಮೀರ್ ನಡುವೆ ಸಿಎಂ ಸಂಧಾನ

ಬೆಂಗಳೂರು: ಡಿಸಿಎಂ ಡಿ.ಕೆ ಶಿವಕುಮಾರ್ ಆಯೋಜಿಸಿದ್ದ ಔತಣಕೂಟದಲ್ಲಿ ಸಚಿವರಾದ ಎಸ್.ಎಸ್ ಮಲ್ಲಿಕಾರ್ಜುನ್ ಮತ್ತು ಜಮೀರ್ ಅಹಮದ್ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಿ ಸಂಧಾನ ಮಾಡಿಸಿದ್ದಾರೆ. ಸಿದ್ದರಾಮಯ್ಯ ಅವರು ಇಬ್ಬರನ್ನೂ ಅಕ್ಕಪಕ್ಕ ಕೂರಿಸಿಕೊಂಡು ಮಾತನಾಡಿಸಿದ್ದಾರೆ. ಬಹಿರಂಗವಾಗಿ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ಟಿಕೆಟ್ ಹಂಚಿಕೆ ಬಗ್ಗೆ ಮಾತನಾಡದಂತೆ ಸಿಎಂ ಸೂಚಿಸಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ಅಲ್ಪಸಂಖ್ಯಾತರಿಗೆ ನೀಡಬೇಕೆಂದು ಜಮೀರ್ ಹೇಳಿದ್ದರು. ಇದಕ್ಕೆ ಸಿಟ್ಟಾದ ಎಸ್.ಎಸ್ ಮಲ್ಲಿಕಾರ್ಜುನ್ ಅವರು, ನಮ್ಮ ಕ್ಷೇತ್ರದಲ್ಲಿ ಬಂದು ಮಾತನಾಡಲು ಅವನ್ಯಾರು ಎಂದು … Read more

ಪ್ರಿಯಕರನ ಜತೆ ಸೇರಿ ಪತಿ ಕೊಲೆ: ಪತ್ನಿ ಸೇರಿದಂತೆ ಮೂವರ ಬಂಧನ

ಮಂಡ್ಯ: ಅರ್ಚಕನ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದ ಪತಿಯನ್ನು ಪ್ರಿಯಕರನೊಂದಿಗೆ ಸೇರಿ ಕೊಲೆಗೈದಿದ್ದ ಪತ್ನಿ ಹಾಗೂ ಇತರ ಮೂವರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಮಂಡ್ಯ ಜಿಲ್ಲೆಯ ಮರಳಗಾಲ ಗ್ರಾಮದ ಬಳಿ ಕೊಲೆ ನಡೆದಿತ್ತು. ಮೃತರನ್ನು ಸಿದ್ದಲಿಂಗಪ್ಪ ಎಂದು ಗುರುತಿಸಲಾಗಿದೆ. ಅವರು ಸ್ಥಳೀಯ ದೇವಾಲಯದಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಿದ್ದರು. ಅವರನ್ನು ಹತ್ಯೆಗೈದ ಆರೋಪದಡಿ ಪತ್ನಿ ಶಾಲಿನಿ, ಆಕೆಯ ಪ್ರೇಮಿ ಹರೀಶ ಹಾಗೂ ಎಂಆರ್ ಸಂತೋಷ್ ಕುಮಾರ್, ಬಿ.ಗಣೇಶ್ ಎಂಬುವರನ್ನು ಬಂಧಿಸಲಾಗಿದೆ … Read more

ಗಾಂಜಾ ಮಾರಾಟ: ಇಬ್ಬರಿಗೆ 4 ವರ್ಷ ಶಿಕ್ಷೆ

ಮೈಸೂರು: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರಿಗೆ ನ್ಯಾಯಾಲಯ 4 ವರ್ಷ ಕಠಿಣ ಶಿಕ್ಷೆ ವಿಧಿಸಿದೆ. ಮಹಮದ್ ಷಬಾಜ್ ಹಾಗೂ ಫರ್ಮಾನ್ ಪಾಷಗೆ ಮೈಸೂರಿನ ಏಳನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ನಾಲ್ಕು ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 40 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ. ಬೆಂಗಳೂರು-ಮೈಸೂರು ರಸ್ತೆಯ ಅಜೀಜ್ ಸೇಠ್ ವೃತ್ತದ ಸಿದ್ದಿಖ್ ನಗರಕ್ಕೆ ಹೋಗುವ ಮರದ ಬಳಿಯಲ್ಲಿ 2023ರ ಫೆ.18ರಂದು ಸ್ಕೂಟರ್‌ನಲ್ಲಿ ಗಾಂಜಾ ಮಾರಾಟ ಮಾಡಲು ಬಂದಿದ್ದ ಮಹಮದ್ ಷಬಾಜ್ ಹಾಗೂ … Read more

ತಿಂಗಳಿಗೆ 1 ಸಿಲಿಂಡರ್

ಬೆಂಗಳೂರು: ರಾಜ್ಯದಲ್ಲಿ ಒಂದು ಕುಟುಂಬಕ್ಕೆ ತಿಂಗಳಿಗೆ ಒಂದು ಸಿಲಿಂಡರ್ ನೀಡಲು ನಿರ್ಧರಿಸಲಾಗಿದೆ. ಒಬ್ಬ ಗ್ರಾಹಕ ಒಂದು ಬಾರಿ ಎಲ್‌ಪಿಜಿ ಖರೀದಿ ಮಾಡಿದ ನಂತರ ಇನ್ನೊಂದು ಎಲ್‌ಪಿಜಿ ಸಿಲಿಂಡರ್ ಖರೀದಿ ಮಾಡಲು ಒಂದು ತಿಂಗಳು ಕಾಯಬೇಕು ಎಂಬ ನಿಯಮ ಜಾರಿ ಮಾಡಲಾಗಿದೆ. ದೇಶದಾದ್ಯಂತ ಈ ಕಾಯುವಿಕೆ ಅವಧಿ 25 ದಿನ ಎಂಬ ನಿಯಮ ವಿಧಿಸಲಾಗಿದೆ. ಆದರೆ, ರಾಜ್ಯದಲ್ಲಿ ಗ್ರಾಹಕರು ಮತ್ತೊಂದು ಸಿಲಿಂಡರ್ ಖರೀದಿಸಲು 30 ದಿನ ಕಾಯಬೇಕಿದೆ. ಅಲ್ಲದೆ, ಅವರು ಕಡ್ಡಾಯವಾಗಿ ಒಟಿಪಿಯನ್ನು ನೀಡುವಂತೆಯೂ ಸೂಚನೆ ನೀಡಲಾಗಿದೆ ಎಂದು … Read more