--ಇಲ್ಲಿ ಜಾಹೀರಾತು--

ಎಲ್‌ ಪಿಜಿ ಬದಲಿಗೆ ಪೆಟ್ರೋಲ್ ಬಳಸಿ: ಕೇಂದ್ರ ಸಚಿವ ಜೋಷಿ

On: April 6, 2026 2:40 PM
Follow Us
--ಇಲ್ಲಿ ಜಾಹೀರಾತು--

Whatsapp Channel

Join Now

Telegram Group

Join Now


ದಾವಣಗೆರೆ: ಪೆಟ್ರೋಲ್ ಸದಾಕಾಲ ಲಭ್ಯವಿರುವ ಇಂಧನ. ಸಮಸ್ಯೆ ಬಗೆಹರಿಯುವ ವರೆಗೆ ಆಟೊ ಚಾಲಕರು ಎಲ್‌ಪಿಜಿ ಬದಲಿಗೆ ಪೆಟ್ರೋಲ್ ಬಳಸಿ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಸಲಹೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ದೇಶದಲ್ಲಿ ಸುಮಾರು 70 ದಿನಗಳಿಗೆ ಸಾಕಾಗುವಷ್ಟು ಕಚ್ಚಾ ತೈಲ ಸಂಗ್ರಹವಿದೆ. ನಿರಂತರವಾಗಿ ತೈಲ ಪೂರೈಕೆ ಆಗುತ್ತಿದೆ. ಜನರು ಆತಂಕಪಡುವ ಅಗತ್ಯವಿಲ್ಲ. ವಾಣಿಜ್ಯ ಸಿಲಿಂಡರ್‌ಗಳ ವಿತರಣೆಯನ್ನು ಶೇ,70ಕ್ಕೆ ಹೆಚ್ಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ದೇಶದಲ್ಲೇ ಶೇ.60ರಷ್ಟು ಎಲ್‌ಪಿಜಿಯನ್ನು ಉತ್ಪಾದಿಸಲಾಗುತ್ತಿದೆ. ಶೇ 40ರಷ್ಟು ಆಮದು ಮಾಡಿಕೊಳ್ಳುತ್ತಿದ್ದೇವೆ. ಜಾಗತಿಕ ಮಟ್ಟದಲ್ಲಿ ಆಟೊ ಎಲ್‌ಪಿಜಿ ಸಂಪನ್ಮೂಲಗಳು ಸೀಮಿತವಾಗಿವೆ. ವಿಶ್ವದ ಕೆಲವೇ ದೇಶಗಳಲ್ಲಿ ಆಟೊ ಎಲ್‌ಪಿಜಿ ಲಭ್ಯವಿದೆ ಎಂದು ಹೇಳಿದರು.
ಸರ್ಕಾರಿ ಒಡೆತನದ 72 ಸೇರಿದಂತೆ ರಾಜ್ಯದಲ್ಲಿ 372 ಆಟೊ ಎಲ್‌ಪಿಜಿ ವಿತರಣಾ ಕೇಂದ್ರಗಳಿವೆ. ಜಾಗತಿಕ ಮಟ್ಟದಲ್ಲಿ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಖಾಸಗಿ ಕಂಪನಿಗಳು ಪ್ರತಿ ಕೆಜಿ ಎಲ್‌ಪಿಜಿ ದರವನ್ನು 110ಕ್ಕೆ ಏರಿಸಿವೆ. ಸರ್ಕಾರಿ ಒಡೆತನದ ಕೇಂದ್ರಗಳಲ್ಲಿ ಆಟೊ ಎಲ್‌ಪಿಜಿ ದರ ಪ್ರತಿ ಕೆಜಿಗೆ 89 ಇದೆ. ಹೀಗಾಗಿ, ಈ ಕೇಂದ್ರಗಳಲ್ಲಿ ಎಲ್‌ಪಿಜಿಗೆ ಆಟೊಗಳ ಉದ್ದನೆಯ ಸರತಿ ಸಾಲು ಕಂಡುಬರುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಸಚಿವರು ಪ್ರತಿಕ್ರಿಯೆ ನೀಡಿದರು.

Author

Editor TumkurVarthe

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು

WhatsApp

Join Now

Telegram

Join Now

Instagram

Join Now