--ಇಲ್ಲಿ ಜಾಹೀರಾತು--

ಯುದ್ಧ ನಷ್ಟ ಪರಿಹಾರ ನೀಡಿದರೆ ಹಾರ್ಮುಜ್ ಓಪನ್

On: April 6, 2026 2:37 PM
Follow Us
--ಇಲ್ಲಿ ಜಾಹೀರಾತು--

Whatsapp Channel

Join Now

Telegram Group

Join Now

ಡೊಡ್ಡಣ್ಣನ ಡೆಡ್‌ ಲೈನ್‌ ಗೆ ಇರಾನ್ ತಿರುಗೇಟು
ಟೆಹ್ರಾನ್: ವಿಶ್ವದ ದೊಡ್ಡಣ್ಣ ಟ್ರಂಪ್ ಡೆಡ್‌ಲೈನ್‌ಗೆ ಇರಾನ್ ಕೂಡ ತನ್ನದೇ ದಾಟಿಯಲ್ಲಿ ಕೌಂಟರ್ ನೀಡಿದೆ. ಯುದ್ಧದಿಂದಾಗಿರುವ ನಷ್ಟ ಪರಿಹಾರ ನೀಡದೆ ಹಾರ್ಮುಜ್ ಜಲಸಂಧಿ ತೆರೆಯುವ ಮಾತಿಲ್ಲ ಎಂದು ಅಮೆರಿಕಗೆ ಇರಾನ್ ತಿರುಗೇಟು ನೀಡಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಬೆದರಿಕೆ ಹಾಕಿದ್ದಾರೆ. ಒಪ್ಪಂದಕ್ಕೆ ಬನ್ನಿ ಅಥವಾ ಶರಣಾಗಿ. ಇಲ್ಲವಾದಲ್ಲಿ ಮಂಗಳವಾರ ರಾತ್ರಿ 8 ಗಂಟೆಗೆ ಮಾರಕ ದಾಳಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಆದರೆ ಇರಾನ್ ಹಿಂದೆ ಸರಿಯಲು ಸಿದ್ಧವಿಲ್ಲ. ಯುದ್ಧದಿಂದಾಗಿರುವ ನಷ್ಟ ತುಂಬಿಕೊಡುವAತೆ ಷರತ್ತು ವಿಧಿಸುವ ಮೂಲಕ ಟ್ರಂಪ್ ನರಕ ದರ್ಶನದ ಎಚ್ಚರಿಕೆಗೆ ಇರಾನ್ ಪ್ರತ್ಯುತ್ತರ ನೀಡಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ 48 ಗಂಟೆಗಳ ಹೊಸ ಡೆಡ್‌ಲೈನ್ ನೀಡಿದ್ದಾರೆ. ಹುಚ್ಚರೇ, ಜಲಸಂಧಿಯನ್ನು ತೆರೆಯಿರಿ, ಇಲ್ಲದಿದ್ದರೆ ನೀವು ನರಕಕ್ಕೆ ಹೋಗುತ್ತೀರಿ ಎಂದು ಕಟು ಪದಗಳಲ್ಲಿ ಇರಾನ್ ನಾಯಕರನ್ನು ಟ್ರಂಪ್ ಎಚ್ಚರಿಸಿದ್ದಾರೆ.
ಟ್ರೂಥ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ಟೆಹ್ರಾನ್ ಹಾರ್ಮುಜ್ ಜಲಸಂಧಿಯನ್ನು ತೆರೆಯದಿದ್ದರೆ ಅಮೆರಿಕ ಅದರ ವಿದ್ಯುತ್ ಸ್ಥಾವರಗಳು ಮತ್ತು ಸೇತುವೆಗಳ ಮೇಲೆ ದಾಳಿ ಮಾಡಬಹುದು. ಅದು ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಇರಾನ್‌ಗೆ ಎಚ್ಚರಿಕೆ ನೀಡಿದ್ದಾರೆ.

Author

Editor TumkurVarthe

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು

WhatsApp

Join Now

Telegram

Join Now

Instagram

Join Now