--ಇಲ್ಲಿ ಜಾಹೀರಾತು--

ಹೈವೆಯಲ್ಲಿ ದರೋಡೆ ಗ್ಯಾಂಗ್ ಬಗ್ಗೆ ಎಚ್ಚರ

On: May 31, 2025 2:30 PM
Follow Us
--ಇಲ್ಲಿ ಜಾಹೀರಾತು--

Whatsapp Channel

Join Now

Telegram Group

Join Now


ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದರೋಡೆ ಗ್ಯಾಂಗ್, ಕಳ್ಳತನದ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಅದರಂತೆ ಇಲ್ಲೊಂದು ಖತರ್ನಾಕ್ ಡೆಡ್ಲಿ ದರೋಡೆ ಗ್ಯಾಂಗ್, ಬೆಂಗಳೂರು ಚೆನ್ನ ಎಕ್ಸ್ಪ್ರೆಸ್ ನಲ್ಲಿ ಫುಲ್ ಆಯಕ್ಟೀವ್ ಆಗಿದ್ದಾರೆ.
ವೇಗವಾಗಿ ಬರೋ ಕಾರ್ ಗಳನ್ನೇ ಈ ಖದೀಮರ ಗ್ಯಾಂಗ್ ಟಾರ್ಗೆಟ್ ಮಾಡುತ್ತೆ. ಹೈವೇ ಮಧ್ಯ ಕಲ್ಲಿಟ್ಟು ಆಕ್ಸಿಡೆಂಟ್ ಮಾಡಿಸಿ ಗ್ಯಾಂಗ್ ಲೂಟಿ ಮಾಡುತ್ತಿದೆ. ಅಪಘಾತ ಆಗ್ತಿದ್ದಂತೆ ಡೆಡ್ಲಿ ಅಟ್ಯಾಕ್ ಮಾಡಿ ಲೂಟಿ ಮಾಡುತ್ತಾರೆ.
ಸದ್ಯ ಹೊಸಕೋಟೆಯಿಂದ ಚಿತ್ತೂರಿನವರೆಗೆ ಈ ಹೈವೇ ಸಂಪರ್ಕ ಇದ್ದು, ಕಳೆದ 25 ತಾರೀಖಿನಂದು ಮೂರಕ್ಕೂ ಹೆಚ್ಚು ಸಾವಾಗಿರೋ ಮಾಹಿತಿ ಲಭ್ಯವಾಗಿದೆ. ಹೈವೇದಲ್ಲಿ ಹೊಸಕೋಟೆಯಿಂದ ಕೆಜಿಫ್ ಮಾರ್ಗದಲ್ಲಿ ಕೃತ್ಯ ಎಸಗಿದ್ದಾರೆ. ಈ ಬಗ್ಗೆ ವಕೀಲ ಹುಸೇನ್ ಓವೈಸಿ ಯವರಿಂದ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಡಿಜಿ ಐಜಿಪಿ,ಹೈವೇ ಅಥಾರಿಟಿ, ಹೈವೇ ಚ್ ಇಂಜಿನಿಯರ್ ಗೆ ದೂರು ನೀಡಿದ್ದಾರೆ. ಮಧ್ಯ ಹೈವೇದಲ್ಲಿ ಕಲ್ಲಿಟ್ಟು ಡಿವೈಡರ್ ಮೇಲೆ ಕುಳಿತು ಗ್ಯಾಂಗ್ ವಾಚ್ ಮಾಡುತ್ತೆ. ಒಂದು ಕಾರು ತಪ್ಪಿದರೆ ಕಲ್ಲು ಸ್ಥಳಾಂತರ ಮಾಡಿ ಇನ್ನೊಂದು ಕಾರಿಗೆ ಸ್ಕೆಚ್ ಹಾಕುತ್ತೆ. ಆರೋಪಿಗಳ ಚಲನವಲನ ಕಾರಿನ ಡ್ಯಾಶ್ ಬೋರ್ಡ್ ಕ್ಯಾಮ್ ಅಲ್ಲಿ ಸೆರೆಯಾಗಿದೆ.
ಈ ರೀತಿ ಕೃತ್ಯಗಳು ನಡೆಯಲು ಹೈವೇಯಲ್ಲಿ ಸರಿಯಾದ ವ್ಯವಸ್ಥೆ ಇಲ್ಲದಿರುವುದೇ ಕಾರಣ ಎಂಬ ಆರೋಪ ಕೇಳಿ ಬಂದಿದೆ.ಹೈವೇ ಪೆಟ್ರೋಲಿಂಗ್, ಸಿಸಿಟಿವಿ ಕ್ಯಾಮೆರಾಗಳು ಸೇರಿದಂತೆ ತುರ್ತುಸಂದಭ ಲ್ಲಿ ಅಗತ್ಯ ವೈದ್ಯಕೀಯ ಸೇವೆಗಳಿಲ್ಲ ಎಂದು ತಿಳಿದು ಬಂದಿದೆ.

Author

Editor TumkurVarthe

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು

WhatsApp

Join Now

Telegram

Join Now

Instagram

Join Now