
ಬೆಂಗಳೂರು: ಕೆನರಾ ಬ್ಯಾಂಕ್ ನಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಭೇದಿಸಿರುವ ವಿಜಯಪುರದ ಮನಗೂಳಿ ಪೊಲೀಸ್ ಠಾಣೆಯ 8 ವಿಶೇಷ ತಂಡಗಳು 15 ಮಂದಿ ಡಕಾಯಿತರನ್ನು ಬಂಧಿಸಿ 1.16 ಕೋಟಿ ನಗದು,39 ಕೆಜಿ ಬಂಗಾರದ ಗಟ್ಟಿ ಸೇರಿದಂತೆ 39.26 ಕೋಟಿ ರೂ.ಮೌಲ್ಯದ ಆಭರಣಗಳನ್ನು ವಶಪಡಿಸಿಕೊಂಡಿವೆ.
ಹುಬ್ಬಳ್ಳಿಯ ವಿಜಯ ಕುಮಾರ, ಚಂದ್ರಶೇಖರ,ಸುನೀಲ, ಬಾಲರಾಜ ಮಣಿಕಮ್, ಗುಂಡು ಜೊಸೇಫ್, ಚಂದನ್ ರಾಜ್, ಇಜಾಜ್, ಪೀಟರ್, ಸುಸೈರಾಜ್, ಬಾಬುರಾವ, ಮಹಮದ ಆಸೀಫ್, ಅನೀಲ, ಅಬು, ಸೋಲೋಮ್ ವೇಸ್ಲಿ ಮತ್ತು ಮರಿಯಾದಾಸ ಬಂಧಿತ ಡಕಾಯಿತರು. ಮೇ 23 ರ ಸಂಜೆಯಿಂದ 25ರ ಅವಧಿಯ ನಡುವೆ ವಿಜಯಪುರ ಜಿಲ್ಲೆಯ ಮನಗೂಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಮನಗೂಳಿ ಪಟ್ಟಣದ ಕೆನರಾ ಬ್ಯಾಂಕ್ ನ ಕಿಟಕಿಯ ಸರಳುಗಳನ್ನು ಕಳ್ಳರ ಗ್ಯಾಂಗ್ ಕತ್ತರಿಸಿ, ಆ ಮೂಲಕ ಒಳನುಗ್ಗಿತ್ತು.
ಕಳ್ಳತನ ಮಾಡಿದ್ದ ಕೆಲವು ಆಭರಣಗಳನ್ನು ಮಾರಾಟ ಮಾಡಿದ್ದು, ಆ ಹಣವನ್ನು ಗೋವಾದ ಮೆಜೆಸ್ಟಿಕ್ ಪ್ರೈಡ್ ಕ್ಯಾಸಿನೋದಲ್ಲಿ ಡಿಪಾಸಿಟ್ ಮಾಡಿದ್ದ 1.16 ಕೋಟಿ ರೂ.ಗಳನ್ನು ವಶಪಡಿಸಿಕೊಳ್ಳುವಲ್ಲಿ ಈ ತಂಡ ಯಶಸ್ವಿಯಾಗಿದೆ.ಈ ಪ್ರಕರಣವನ್ನು ತಾಂತ್ರಿಕ ಸಾಧನಗಳು ಹಾಗೂ ಅಧಿಕಾರಿ ಮತ್ತು ಸಿಬ್ಬಂದಿ ಅವಿರತ ಪ್ರಯತ್ನ, ಕಠಿಣ ಪರಿಶ್ರಮಗಳ ಮೂಲಕ ಕರ್ತವ್ಯ ನಿರ್ವಹಿಸಿದ ಎಲ್ಲಾ ಪೊಲೀಸ್ ಅಧಿಕಾರಿಗಳ ಕೌಶಲ್ಯ,ಬದ್ಧತೆಗಳನ್ನು ಶ್ಲಾಸಿ ಲಕ್ಷ್ಮಣ ನಿಂಬರಗಿ ಪ್ರಶಂಸನಾ ಪತ್ರ ನೀಡಿ ಬಹುಮಾನ ಘೋಷಿಸಿದ್ದಾರೆ.
15 ಮಂದಿ ಡಕಾಯಿತರ ಬಂಧನ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


