--ಇಲ್ಲಿ ಜಾಹೀರಾತು--

ಕಿರುತೆರೆ ನಟಿ ಮೇಲೆ ಪತಿಯಿಂದ ಚಾಕು ಇರಿತ

On: July 11, 2025 2:17 PM
Follow Us
--ಇಲ್ಲಿ ಜಾಹೀರಾತು--

Whatsapp Channel

Join Now

Telegram Group

Join Now


ಬೆಂಗಳೂರು: ಖಾಸಗಿ ವಾಹಿನಿಯ ನಿರೂಪಕಿ, ಅಮೃತಧಾರೆ ಧಾರಾವಾಹಿಯ ನಟಿಯ ಮೇಲೆ ಆಕೆಯ ಪತಿಯೇ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ಹನುಮಂತ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮುನೇಶ್ವರ ಲೇಔಟ್ನಲ್ಲಿ ನಡೆದಿದೆ.
ಮಂಜುಳಾ ಅಲಿಯಾಸ್ ಶ್ರುತಿ ಪತಿಯಿಂದ ಚಾಕು ಇರಿತಕ್ಕೊಳಗಾದ ನಟಿಯಾಗಿದ್ದು, ಘಟನೆಗೆ ಸಂಬಂಧಿಸಿ ಪೊಲೀಸರು ಪತಿ ಅಮರೇಶ್ ನನ್ನು ಬಂಧಿಸಿದ್ದಾರೆ, ಘಟನೆ ಕಳೆದ ಜುಲೈ 4 ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ, ಸದ್ಯ ನಟಿ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅಪಾಯದಿಂದ ಪಾರಾಗಿದ್ದಾರೆ, ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿರುವ ಅಮೃತಧಾರೆ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿರುವ ಶ್ರುತಿ ಇಪ್ಪತ್ತು ವರ್ಷಗಳ ಹಿಂದೆ ಅಮರೇಶ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು, ದಂಪತಿಗೆ ಇಬ್ಬರು ಪುತ್ರಿಯರು ಇದ್ದು ಹನುಮಂತನಗರದಲ್ಲಿ ವಾಸವಾಗಿದ್ದರು. ಕುಟುಂಬ ಸದಸ್ಯರ ಸಮ್ಮುಖದಲ್ಲಿ ರಾಜಿ ಮಾತುಕತೆ ನಡೆಸಿ ಹನುಮಂತನಗರದ ಮನೆಗೆ ಶ್ರುತಿ ಬಂದಿದ್ದರು. ಮಾರನೇ ದಿನ ಮಕ್ಕಳು ಕಾಲೇಜಿಗೆ ಹೋದ ವೇಳೆ ಪತಿ ಅಮರೇಶ್ ಮತ್ತು ಶ್ರುತಿ ನಡುವೆ ಮತ್ತೆ ಜಗಳವಾಗಿದೆ ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಬಳಿಕ ಅಮರೇಶ್ ಪತ್ನಿ ಶ್ರುತಿ ಮುಖಕ್ಕೆ ಪೆಪ್ಪರ್ ಸ್ಪ್ರೇ ಮಾಡಿ ಚಾಕುವಿನಿಂದ ಮೂರೂ ನಾಲ್ಕು ಬಾರಿ ಇರಿದಿದ್ದಾನೆ. ಘಟನೆಯಿಂದ ಶ್ರುತಿ ಅವರ ತೊಡೆ, ಕುತ್ತಿಗೆ ಭಾಗಗಳಿಗೆ ಗಂಭೀರ ಗಾಯಗಳಾಗಿದೆ. ಶ್ರುತಿ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು ಸದ್ಯ ಅಪಾಯದಿಂದ ಪಾರಾಗಿದ್ದಾರೆ. ಘಟನೆ ಸಂಬಂಧ ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಆರೋಪಿ ಅಮರೇಶ್ ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Author

Editor TumkurVarthe

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು

WhatsApp

Join Now

Telegram

Join Now

Instagram

Join Now