--ಇಲ್ಲಿ ಜಾಹೀರಾತು--

ತೈಲ ಶುದ್ಧೀಕರಣ ಘಟಕದಲ್ಲಿ ಅನಿಲ ಸೋರಿಕೆ ಉಸಿರುಗಟ್ಟಿ ಇಬ್ಬರು ಸಿಬ್ಬಂದಿ ಸಾವು

On: July 12, 2025 2:10 PM
Follow Us
--ಇಲ್ಲಿ ಜಾಹೀರಾತು--

Whatsapp Channel

Join Now

Telegram Group

Join Now


ಬೆಂಗಳೂರು: ತೈಲ ಶುದ್ಧೀಕರಣ ಘಟಕದಲ್ಲಿ ಅನಿಲ ಸೋರಿಕೆಯಿಂದಾಗಿ ಉಸಿರುಗಟ್ಟಿ ಇಬ್ಬರು ಸಿಬ್ಬಂದಿ ಮೃತಪಟ್ಟಿರುವ ಘಟನೆ ಮಂಗಳೂರು ಹೊರವಲಯದ ಸೂರತ್ಕಲ್ ನಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.
ದೀಪ ಚಂದ್ರ ಭಾರ್ತಿಯಾ ಮತ್ತು ಬಿಜಿಲ್ ಪ್ರಸಾದ ಸಾವನ್ನಪ್ಪಿದ ಸಿಬ್ಬಂದಿ, ಸೂರತ್ಕಲ್ ನ ಎಂಆರ್ಪಿಎಲ್ ತೈಲ ಶುದ್ಧೀಕರಣ ಘಟಕದ ಆಯಿಲ್ ಮೂವ್ ಮೆಂಟ್ ವಿಭಾಗದಲ್ಲಿ ಬೆಳಗ್ಗೆ 8.30 ರ ಸುಮಾರಿನಲ್ಲಿ ದೋಷ ಕಂಡು ಬಂದಿದೆ.ಈ ಹಿನ್ನೆಲೆಯಲ್ಲಿ ಸಿಬ್ಬಂದಿ ಪರಿಶೀಲನೆಗಾಗಿ ತೈಲ ಶುದ್ಧೀಕರಣದ ಟ್ಯಾಂಕ್ ಮೇಲ್ಛಾ ವಣಿಗೆ ಹೋಗಿದ್ದಾರೆ. ಆ ವೇಳೆ ಅನಿಲ ಸೋರಿಕೆಯಾಗುತ್ತಿದ್ದು ದರಿಂದ ಇಬ್ಬರು ಸಿಬ್ಬಂದಿ ತಲೆ ಸುತ್ತಿನಿಂದ ಕುಸಿದು ಅಸ್ವಸ್ಥಗೊಂಡಿ ದ್ದಾರೆ.
ತಕ್ಷಣ ಜೊತೆಯಲ್ಲಿದ್ದ ಸಹದ್ಯೋಗಿಗಳು ಇಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಇಬ್ಬರು ಮೃತಪಟ್ಟಿದ್ದಾರೆ.ಈ ಇಬ್ಬರ ರಕ್ಷಣೆಗೆ ನೆರವಾಗಿದ್ದ ಮತ್ತೊಬ್ಬ ಸಿಬ್ಬಂದಿ ವಿನಾಯಕ ಮಯಗೇರಿ ಎಂಬುವವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ತನಿಖೆ:ಈ ಘಟನೆಯಿಂದ ಆತಂಕಗೊಂಡಿರುವ ಎಂಆರ್ ಪಿಎಲ್ ಆಡಳಿತ ಮಂಡಳಿಯು ಗ್ರೂಪ್ ಜನರಲ್ ಮ್ಯಾನೇಜರ್ ಗಳನ್ನೊಳಗೊಂಡ ಉನ್ನತ ಮಟ್ಟದ ತನಿಖಾ ಸಮಿತಿಯನ್ನು ರಚನೆ ಮಾಡಿದೆ. ಈ ಸಮಿತಿಯು ಎಂಆರ್ ಪಿಎಲ್ ಘಟಕದಲ್ಲಿ ಅನಿಲ ಸೋರಿಕೆಯಾಗಲು ಕಾರಣವೇನು,ಎಷ್ಟು ಪ್ರಮಾಣದಲ್ಲಿ ಅನಿಲ ಸೋರಿಕೆಯಾಗಿದೆ ಎಂಬಿತ್ಯಾದಿ ಮಾಹಿತಿಗಳನ್ನು ಕಲೆ ಹಾಕುತ್ತಿದೆ.

Author

Editor TumkurVarthe

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು

WhatsApp

Join Now

Telegram

Join Now

Instagram

Join Now