
ಬೆಂಗಳೂರು: ಬೆಂಗಳೂರು ಗ್ರಾಮಾಂತರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಗೆ ಬರುತ್ತಿದ್ದ ಪ್ರಯಾಣಿಕನ ಟ್ರಾಲಿಯಲ್ಲಿ ಕೆಜಿ ಚಿನ್ನ ಪತ್ತೆಯಾಗಿರುವ ಘಟನೆ ನಡೆದಿದೆ.
ವ್ಯಕ್ತಿ ಅಕ್ರಮವಾಗಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದಾಗ ಮತ್ತೊಬ್ಬರ ಬ್ಯಾಗ್ ನಲ್ಲಿ ಚಿನ್ನ ಬಿಟ್ಟು ಹೋಗಿರುವುದಾಗಿ ವರದಿಯಾಗಿದೆ.ವರದಿಗಳ ಪ್ರಕಾರ ದುಬೈ ನಿಂದ ಬಂದಿದ್ದ ವ್ಯಕ್ತಿ ಸಹ ಪ್ರಯಾಣಿಕರ ಲಗೇಜ್ ಟ್ರಾಲಿ ಒಂದಕ್ಕೆ ಚಿನ್ನದ ಬ್ಯಾಗ್ ಹಾಕಿ ಎಸ್ಕೇಪ್ ಆಗಿದ್ದಾನೆ. ಗೋಲ್ಡ್ ಸ್ಮಗ್ಲರ್ ಬರೋಬ್ಬರಿ 3.5 ಕೆಜಿ ಚಿನ್ನ ಬಿಸ್ಕೆಟ್ಗಳಿದ್ದ ಬ್ಯಾಗ್ ಬಿಟ್ಟು ಓಡಿ ಹೋಗಿದ್ದಾನೆ. ಕಸ್ಟಮ್ಸ್ ಅಧಿಕಾರಿಗಳ ಕೈಯಲ್ಲಿ ಸಿಕ್ಕಿಬೀಳುವ ಭಯದಿಂದ ಆತ ಬೇರೆಯವರ ಟ್ರಾಲಿಗೆ ಚಿನ್ನ ಹಾಕಿದ ಓಡಿ ಹೋಗಿದ್ದಾನೆ.
ವ್ಯಕ್ತಿ ಟ್ರಾಲಿ ತಳ್ಳಿಕೊಂಡು ಚೆಕಿಂಗ್ ಕಡೆ ಬರುತ್ತಿದ್ದಾಗ ಟ್ರಾಲಿ ಬ್ಯಾಗ್ ನಿಂದ ಚಿನ್ನ ಹೊರಗಡೆ ಬಿದ್ದಿದೆ. ಇದನ್ನು ಕಂಡು ತಬ್ಬಿಬ್ಬಾದ ಪ್ರಯಾಣಿಕ ಕೂಡಲೆ ಚಿನ್ನದ ಬ್ಯಾಗ್ ಸಮೇತ ಏರ್ಪೋಟ್ ಭದ್ರತಾ ಪಡೆಗೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಕೋಟಿ ಬೆಲೆ ಬಾಳುವ 3.5 ಕೆಜಿ ಚಿನ್ನ ಪತ್ತೆಯಾಗಿದೆ.
ಇದೀಗ ಪ್ರಯಾಣಿಕನಿಂದ ಮಾಹಿತಿ ಪಡೆದ ಅಧಿಕಾರಿಗಳು ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದಾತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಸಿಸಿಟಿವಿ ಪರಿಶೀಲನೆ ನಡೆಸಲಾಗುತ್ತಿದ್ದು, ಯಾರು ಚಿನ್ನದ ಬ್ಯಾಗ್ ಇಟ್ಟಿದ್ದು, ಯಾವ ಪ್ರಯಾಣಿಕ ಈ ಕೃತ್ಯ ನಡೆಸಿದ್ದು ಎನ್ನುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.ಮೆಲ್ನೋಟಕ್ಕೆ ದುಬೈ ನಿಂದ ಬಂದಿದ್ದ ವ್ಯಕ್ತಿಯೇ ಚಿನ್ನ ಬಿಟ್ಟು ಎಸ್ಕೇಪ್ ಆಗಿರುವ ಶಂಕೆ ವ್ಯಕ್ತವಾಗಿದೆ. ಏರ್ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳು 3.5 ಕೆಜಿ ಚಿನ್ನವನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ.
ಪ್ರಯಾಣಿಕನ ಟ್ರಾಲಿಯಲ್ಲಿ ಕೆಜಿ ಚಿನ್ನ ಪತ್ತೆ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


