
ಮಧುಗಿರಿ: ಪಟ್ಟಣ ವ್ಯಾಪ್ತಿಯಲ್ಲಿ ಮನೆ ನಿರ್ಮಿಸಿಕೊಳ್ಳಲು ಬೇಕಾಗಿರುವ ಮರಳನ್ನು ಟ್ರ್ಯಾಕ್ಟರ್ ಗಳ ಮೂಲಕ ಸಾಗಿಸಲು ಸಚಿವ ಕೆ.ಎನ್.ರಾಜಣ್ಣನವರ ಮೌಖಿಕ ಆದೇಶವನ್ನು ಹಲವರು ದುರುಪಯೋಗ ಪಡಿಸಿಕೊಂಡು ಲಾರಿಗಳ ಮೂಲಕ ಮಾರಾಟ ಮಾಡಿಕೊಳ್ಳುತ್ತಿರುವುದು ಕಾಣಬಹುದಾಗಿದೆ.
ಪಟ್ಟಣದ ಕಸಬಾ ವ್ಯಾಪ್ತಿಯಲ್ಲಿ ನ ಗುಡಿರೊಪ್ಪ ಶಾಲೆಯ ಪಕ್ಕದ ಮರಳಿನ ರಾಶಿ ಹಾಕಿಕೊಂಡು ಲಾರಿಗಳ ಮೂಲಕ ಮಾರಾಟ ಮಾಡುತ್ತಿದ್ದರು ಕೂಡ ತಾಲೂಕು ಆಡಳಿತ ಕಣ್ಮುಚ್ಚಿ ಕುಳಿತಿದೆ.
ಅಲ್ಲಿ ಬಂಡೆ ಸಮಿಪ ಮರಳಿನ ರಾಶಿ ನೋಡಿದರೆ ಎಂತವರಿಗೂ ಇದು ಮಾರಾಟ ಮಾಡಲು ಶೇಖರಣೆ ಮಾಡಿ ಇಟ್ಟಿರುವಂತೆ ಭಾಸವಾಗುತ್ತದೆ, ಪಟ್ಟಣದಲ್ಲಿ ಪ್ರತಿನಿತ್ಯ ಬೆಳೆಗೆ ಏಳರಿಂದ ಒಂಬತ್ತು ರವರೆಗೆ ಟ್ರ್ಯಾಕ್ಟರ್ ಗಳ ಮೂಲಕ ಮರಳು ಸಾಗಾಣಿಕೆ ಮಾಡಲಾಗುತ್ತಿದೆ, ಆದರೆ ರಾತ್ರಿ ವೇಳೆಯಲ್ಲಿ ಲಾರಿಗಳ ಮೂಲಕ ಮರಳಿನ ಲೂಟಿ ನಡೆಯುತ್ತಿದ್ದರೂ ಕೂಡ ಯಾರು ಗಮನ ಹರಿಸುತ್ತಿಲ್ಲವೆಂಬ ಆರೋಪ ಕೇಳಿ ಬರುತ್ತಿದೆ.
ಲಾರಿಗಳಲ್ಲಿ ಮರಳು ಸಾಗಾಟ- ಕಣ್ಮುಚ್ಚಿ ಕುಳಿತ ಆಡಳಿತ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


