ಬೆಂಗಳೂರು: ಗ್ಯಾಸ್ ಕೊರತೆಯಿಂದ ತತ್ತರಿಸಿರುವ ಹೋಟೆಲ್ ಉದ್ಯಮಕ್ಕೆ ಸರ್ಕಾರ ಮತ್ತೆ ಶಾಕ್ ನೀಡಿದೆ. ಹೋಟೆಲ್ಗಳಿಗೆ ಸದ್ಯಕ್ಕೆ ಗ್ಯಾಸ್ ಪೂರೈಕೆ ಇಲ್ಲ ಎಂದು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ತೈಲ ಪೂರೈಕೆ ಕಂಪನಿಗಳ ಜೊತೆ ಸೋಮವಾರ ಮಹತ್ವದ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗ್ಯಾಸ್ ಪೂರೈಕೆ ಪರಿಸ್ಥಿತಿ ಗಂಭೀರವಾಗಿದೆ. ಕೇಂದ್ರ ಸರ್ಕಾರ ಹೆಚ್ಚಿನ ಗಮನ ಕೊಡಬೇಕು. ಇಂದು ಇಂಧನ ಇಲಾಖೆ ಕಾರ್ಯದರ್ಶಿ, ಕಮಿಷನರ್ ಹಾಗೂ ತೈಲ ಕಂಪನಿಗಳ ಮುಖ್ಯಸ್ಥರ ಜೊತೆ ಸಭೆ ನಡೆಸಲಾಯಿತು. ಒಂದು ಗಂಟೆಯ ತನಕ ಸಭೆಯಾಗಿದೆ. ವಿನಾಕಾರಣ ಆತಂಕಕ್ಕೆ ಒಳಗಾಗಬಾರದು ಎಂದು ಗ್ರಾಹಕರಲ್ಲಿ ಮನವಿ ಮಾಡುತ್ತೇವೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರಕ್ಕೆ ಸಿಎಂ ಎರಡನೇ ಪತ್ರ ಬರೆಯುತ್ತಿದ್ದಾರೆ. ಗ್ಯಾಸ್ ಡಬಲ್ ಬುಕ್ಕಿಂಗ್ ಬೇಡ. ಮಿತವ್ಯಯದಲ್ಲಿ ಬಳಕೆ ಮಾಡಿ. ಹಡಗುಗಳ ಮೂವ್ಮೆಂಟ್ ಆರಂಭವಾಗಿದೆ. ಆಸ್ಪತ್ರೆ, ಶೈಕ್ಷಣಿಕ ಸಂಸ್ಥೆಗಳು, ಏರ್ಲೈನ್ಸ್, ರೈಲ್ವೆ ಕ್ಯಾಂಟೀನ್ಗಳಿಗೆ ಶೇ.100ರಷ್ಟು ಸಿಲಿಂಡರ್ ನೀಡಲು ಒಪ್ಪಿಗೆ ನೀಡಲಾಗಿದೆ. ಪ್ರತಿದಿನ ಆರೂವರೆ ಸಾವಿರ ಸಿಲಿಂಡರ್ ಪೂರೈಕೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಇದರಲ್ಲಿ 4200 ಸಿಲಿಂಡರ್ ಎಸೆನ್ಸಿಯಲ್ ವಲಯಕ್ಕೆ ಪೂರೈಕೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಆಸ್ಪತ್ರೆ, ಶೈಕ್ಷಣಿಕ ಸಂಸ್ಥೆಗಳು, ಇಂದಿರಾ ಕ್ಯಾಂಟೀನ್ಗಳಿಗೆ 5400, ಎಸೆನ್ಸಿಯಲ್ ಸರ್ವಿಸ್ ವಲಯಕ್ಕೆ 5200 ಪೂರೈಕೆ ಮತ್ತು 2250 ಸಿಲಿಂಡರ್ಗಳು ಆಟೋಗಳಿಗೆ ಪೂರೈಕೆ ಮಾಡಲಾಗುತ್ತದೆ. ಹೊಟೇಲ್ಗಳಿಗೆ ಸದ್ಯಕ್ಕೆ ಪೂರೈಕೆ ಆಗಲ್ಲ. ಎಲೆಕ್ಟ್ರಿಕ್ ಸ್ಟವ್ ಬಳಕೆ ಮಾಡುವಂತೆ ಸಚಿವರು ಮನವಿ ಮಾಡಿದರು.
ಒಂದು ದಿನಕ್ಕೆ 1 ಸಾವಿರ ಸಿಲಿಂಡರ್ ಪೂರೈಕೆ ಮಾಡಲಾಗುವುದು. ಇದರಲ್ಲಿ ಹೋಟೆಲ್ ಅಸೋಸಿಯೇಷನ್ ಕೂಡ ಇದೆ. ಹೋಟೆಲ್ ಸರ್ವಿಸರ್ಗಳ ಬಳಕೆಗೆದರೂ ಸಿಲಿಂಡರ್ ಬೇಕಾಗುತ್ತದೆ. ರಾಜ್ಯದಲ್ಲಿ 44 ಸಾವಿರ ಸಿಲಿಂಡರ್ಗಳನ್ನು ಹೊಟೇಲ್ಗಳಿಗೆ ಪೂರೈಕೆ ಮಾಡಲಾಗುತ್ತಿತ್ತು. ಸದ್ಯಕ್ಕೆ ಹೋಟೆಲ್ಗಳಿಗೆ ಸಿಲಿಂಡರ್ ನೀಡಲು ಸಾಧ್ಯವಿಲ್ಲ ಎಂದು ವಿವರಿಸಿದರು.



