ಬೆಂಗಳೂರು: ರಾಜ್ಯದಲ್ಲಿ 17,969 ಎಕರೆ ವಕ್ಫ್ ಆಸ್ತಿಯನ್ನು ಅತಿಕ್ರಮಣ ಮಾಡಲಾಗಿದೆ. ಈ ಪೈಕಿ ಹೆಚ್ಚಿನವರು ಮುಸ್ಲಿಮರೇ ಆಗಿದ್ದಾರೆ ಎಂದು ರಾಜ್ಯ ವಕ್ಫ್ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದರು.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಎಂ.ವೈ.ಪಾಟೀಲ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯಾದ್ಯಂತ ಒಟ್ಟು 1,12,860 ಎಕರೆ ವಕ್ಫ್ ಆಸ್ತಿ ಇದೆ. ಅದರಲ್ಲಿ 20,054 ಎಕರೆ ನಮ್ಮ ಕೈಯಲ್ಲಿವೆ. 17,969 ಎಕರೆ ಅತಿಕ್ರಮಣ ಮಾಡಲಾಗಿದೆ. 47,263 ಎಕರೆ ಇನಾಂ ರದ್ದತಿ ಕಾಯ್ದೆಯಡಿ ಮತ್ತು 23,627 ಎಕರೆ ಭೂಸುಧಾರಣಾ ಕಾಯ್ದೆಯಡಿ ಒತ್ತುವರಿ ಮಾಡಲಾಗಿದೆ ಎಂದು ಖಾನ್ ತಿಳಿಸಿದರು.
ಮುಸ್ಲಿಮರಿಂದಲೇ ವಕ್ಫ್ ಆಸ್ತಿ ಒತ್ತುವರಿ ಹೆಚ್ಚು: ಜಮೀರ್

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


