
ಮೈಸೂರು: ನಗರದ ಕೆಆರ್ಎಸ್ ರಸ್ತೆಯಲ್ಲಿರುವ ಗೋಕುಲ್ ಚಿತ್ರಮಂದಿರದ ಆವರಣದಲ್ಲಿ ನಡೆದ ಅಗ್ನಿ ಅವಘಡದಲ್ಲಿ ಕಾವಲುಗಾರ ಸಜೀವ ದಹನವಾಗಿದ್ದಾರೆ. ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಗ್ರಾಮದ ಮರಿಶೆಟ್ಟಿ (75) ಸಾವನ್ನಪ್ಪಿದ್ದಾರೆ.
ಗೋಕುಲ್ ಚಿತ್ರಮಂದಿರ ಹಲವು ವರ್ಷದ ಹಿಂದೆಯೇ ಮುಚ್ಚಿದೆ. ಮರಿಶೆಟ್ಟಿ 45 ವರ್ಷದಿಂದ ಚಿತ್ರಮಂದಿರದಲ್ಲಿ ಕೆಲಸ ಮಾಡಿಕೊಂಡಿದ್ದರು. ಅದು ಮುಚ್ಚಿದ ಬಳಿಕವೂ ಪತ್ನಿಯೊಂದಿಗೆ ಅಲ್ಲೇ ವಾಸವಿದ್ದರು. ಮಂಗಳವಾರ ಬೆಳಿಗ್ಗೆ ಆವರಣ ಸ್ವಚ್ಛಗೊಳಿಸುವಾಗ ಕಸದ ರಾಶಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಿದೆ. ಅದು ವೇಗವಾಗಿ ಹರಡಿಕೊಂಡ ಕಾರಣ ಮರಿಶೆಟ್ಟಿ ಅವರು ಹೊರಬರಲು ಸಾಧ್ಯವಾಗದೆ ಮೃತಪಟ್ಟಿದ್ದಾರೆ. ಪತ್ನಿ ಸ್ಥಳಕ್ಕೆ ಆಗಮಿಸಿ ನೋಡಿದಾಗ ಸುಟ್ಟು ಕರಕಳಾದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಪತ್ನಿ ನೀಡಿದ ದೂರು ಆಧರಿಸಿ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿತ್ರಮಂದಿರಕ್ಕೆ ಬೆಂಕಿ: ಕಾವಲುಗಾರ ಸಾವು

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


