
ಕಲಬುರಗಿ: ಪ್ರಿಯಾಂಕ್ ಖರ್ಗೆ ಇನ್ನೂ ಎಳಸು. ಅವರಪ್ಪನ ಕಾರಣಕ್ಕೆ ಮಂತ್ರಿ ಪದವಿ ಸಿಕ್ಕಿದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದರು.
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಆರ್ಎಸ್ಎಸ್ ಬ್ಯಾನ್ ಮಾಡೇ ಬಿಡುತ್ತೇವೆ ಅನ್ನೋ ರೀತಿ ಮಾತನಾಡ್ತಾರೆ. ಇಂದಿರಾ, ನೆಹರೂ ಕೈಯಲ್ಲಿಯೇ ಆರ್ಎಸ್ಎಸ್ ಬ್ಯಾನ್ ಮಾಡೋಕೆ ಆಗಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಗುಡುಗಿದರು.
ಈ ಸರ್ಕಾರ ಕೇವಲ ಮುಸ್ಲಿಮರಿಗಾಗಿ ಇದ್ದೀವಿ ಅನ್ನೋ ಥರ ನಡೆಯುತ್ತಿದೆ. ಯಾಕೆ ಈ ಸರ್ಕಾರಕ್ಕೆ ಹಿಂದುಳಿದವರು, ದಲಿತರು ನೆನಪಿಗೆ ಬರಲಿಲ್ವಾ? ಅಲ್ಲದೆ, ರಾಜ್ಯದ ಮುಸ್ಲಿಮರ ಮನಸ್ಥಿತಿ ಬದಲಾಗಬೇಕು. ಇಲ್ಲದಿದ್ದರೆ ಅವರು ಖಂಡಿತ ತೊಂದರೆ ಅನುಭವಿಸಬೇಕಾಗುತ್ತದೆ. ಬಾಗಲಕೋಟೆಯಲ್ಲಿ ಅಲ್ಲಿನ ಎಸ್ಪಿ ಮೇಲೆ ಕಲ್ಲು ತೂರಾಟವಾಗಿದೆ. ಯಾಕಂದರೆ ಸರ್ಕಾರ ಅವರ ಬೆನ್ನಿಗೆ ನಿಂತಿದೆ ಅಂತ. ಇಷ್ಟಾದರೂ ಸರ್ಕಾರ ಬಜೆಟ್ನಲ್ಲಿ ಎಲ್ಲವನ್ನೂ ಮೀಸಲಿಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಇರಾನ್-ಇಸ್ರೇಲ್ ಯುದ್ಧದಿಂದ ನಮಗೆ ಸಂಕಷ್ಟದ ಸಮಯ. ಸಂಕಷ್ಟದ ಸಮಯದಲ್ಲಿ ಇಡೀ ದೇಶ ಒಂದಾಗಬೇಕು. ಆದರೆ, ಕಾಂಗ್ರೆಸ್ ಆರೋಪ ಮಾಡುತ್ತಿದೆ. ಹಿರಿಯರಾದ ಖರ್ಗೆ ಅವರು ಈ ರೀತಿ ಹೇಳಿಕೆ ಕೊಡಬಾರದು ಎಂದು ತಿಳಿಸಿದರು.
ವಿಧಾನಸಭೆಯಲ್ಲಿ ಸ್ಪೀಕರ್ ಸಭಾತ್ಯಾಗ ಮಾಡಿದ್ದು ಇದೇ ಮೊದಲು. ಇದು ರಾಜ್ಯ ಸರ್ಕಾರದ ಆಡಳಿತಕ್ಕೆ ಹಿಡಿದ ಕೈಗನ್ನಡಿ. ರಾಜ್ಯದಲ್ಲಿ ಆಡಳಿತ ಸಂಪೂರ್ಣವಾಗಿ ಕುಸಿದು ಹೋಗಿದೆ. ಇದರಿಂದ ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಬರೋದಿಲ್ಲ. ಹಿಂದುತ್ವ ಉಳಿಯಬೇಕು. ಅದಕ್ಕಾಗಿ ರಾಜ್ಯದ ಜನ ಜಾಗೃತರಾಗಬೇಕು ಎಂದು ಹೇಳಿದರು.
ಪ್ರಿಯಾಂಕ್ ಖರ್ಗೆ ಇನ್ನೂ ಎಳಸು ರಾಜ್ಯ ಸರ್ಕಾರ ಮುಸ್ಲಿಂಗಾಗಿ ಇದೆಯಾ: ಈಶ್ವರಪ್ಪ ವಾಗ್ದಾಳಿ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


