ಪಾವಗಡ: ತಾಲೂಕಿನ ವಿರಮ್ಮನಹಳ್ಳಿ ಗೇಟ್ ಸಮೀಪದ ಖಾಸಗಿ ತೋಟದ ತೊಟ್ಟಿಯಲ್ಲಿ ನಡೆದ ಹೃದಯವಿದ್ರಾವಕ ಘಟನೆದಲ್ಲಿ 13 ವರ್ಷದ ಬಾಲಕ ತಾಹಿರ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಎಂಟನೇ ತರಗತಿಯಲ್ಲಿ ಓದುತ್ತಿದ್ದ ತಾಹಿರ್ ಸ್ನೇಹಿತರೊಂದಿಗೆ ಈಜಲು ತೆರಳಿದ್ದ ವೇಳೆ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಈಜುವ ವೇಳೆ ಕಾಲು ಜಾರಿ ಆಳವಾದ ನೀರಿಗೆ ಬಿದ್ದ ಬಾಲಕ ಹೊರಬರಲು ಸಾಧ್ಯವಾಗದೆ ಮುಳುಗಿ ಮೃತಪಟ್ಟಿದ್ದಾನೆ. ಮೃತ ಬಾಲಕ ಪಟ್ಟಣದ 21ನೇ ವಾರ್ಡ್ ನಿವಾಸಿಗಳಾದ ನೂರಿ ಮತ್ತು ರಿಜ್ವಾನ್ ದಂಪತಿಯ ಪುತ್ರ. ಘಟನೆಯ ಸುದ್ದಿ ಹರಡುತ್ತಿದ್ದಂತೆ ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಿಸಲು ಯತ್ನಿಸಿದರೂ ಪ್ರಯೊಜನವಾಗಿಲ್ಲ. ಪಾವಗಡ ಠಾಣ ಇನ್ಸ್‌ಪೆಕ್ಟರ್ ಸುರೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತದೇಹವನ್ನು ಪರಿಶಿಲಿಸಿ. ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಆರಂಭಿಸಿದ್ದಾರೆ.
ಈಜಲು ಹೋದ ಬಾಲಕ ನೀರು ಪಾಲು










