--ಇಲ್ಲಿ ಜಾಹೀರಾತು--

ದೆಹಲಿ ಕಾರ್ ಸ್ಫೋಟ ಕೇಸ್- ತುಮಕೂರಿನ ವ್ಯಕ್ತಿ ವಿಚಾರಣೆ

On: November 13, 2025 2:46 PM
Follow Us
--ಇಲ್ಲಿ ಜಾಹೀರಾತು--

Whatsapp Channel

Join Now

Telegram Group

Join Now


ತುಮಕೂರು: ದೆಹಲಿ ಕಾರ್ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ತುಮಕೂರಿನಲ್ಲಿ ವ್ಯಕ್ತಿಯೊಬ್ಬನ ವಿಚಾರಣೆಯನ್ನು ಪೊಲೀಸರು ನಡೆಸಿದ್ದಾರೆ.
ತುಮಕೂರಿನ ಪಿಎಚ್ ಕಾಲೋನಿ ನಿವಾಸಿ ಮುಜಾಯುದ್ದಿನ್ ನನ್ನು ದೆಹಲಿ ಕಾರ್ ಬಾಂಬ್ ಬ್ಲಾಸ್ಟ್ ನಡೆದ ಮರು ದಿನ ತುಮಕೂರಿನಲ್ಲಿ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಿದ್ದಾರೆ.
ಎಎಸ್ ಪಿ ಪುರುಷೋತ್ತಮ್ ರಿಂದ ಎರಡು ಗಂಟೆಗಳ ಕಾಲ್ ವಿಚಾರಣೆ ನಡೆಸಿ ಸ್ಫೋಟದಲ್ಲಿ ಕೈವಾಡ ಇಲ್ಲದೆ ಇದ್ದು ಘಟನೆಯಲ್ಲಿ ಭಾಗಿಯಾಗದ ಬಗ್ಗೆ ಖಾತರಿ ಆದ ನಂತರ ಬಿಟ್ಟು ಕಳಿಸಿದ್ದಾರೆ.
ಈ ಹಿಂದೆ ಈತ ಕಲಿಫತ್ ಉಗ್ರ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದು ಸಂಘಟನೆ ಮುಖಂಡರಿಗೆ ತುಮಕೂರಿನಲ್ಲಿ ಸಭೆಗೆ ಅವಕಾಶ ಮಾಡಿಕೊಟ್ಟಿದ್ದ.
ಈ ಪ್ರಕರಣ ಸಂಬಂಧ ಎನ್ ಐಎ ಬಂಧಿಸಿ ತಿಹಾರ್ ಜೈಲಿಗೆ ಕಳಿಸಿತ್ತು, ಬಳಿಕ ಆರು ವರ್ಷ ಶಿಕ್ಷೆ ಅನುಭವಿಸಿ ದೆಹಲಿಯ ತಿಹಾರ್ ಜೈಲಿನಿಂದ ಹೊರ ಬಂದಿದ್ದ ಮುಜಾಯುದ್ದಿನ್ ತುಮಕೂರಿನಲ್ಲಿ ವಾಸವಿದ್ದ, ಈ ಹಿನ್ನಲೆಯಲ್ಲಿ ದೆಹಲಿ ಸ್ಪೋಟದ ಮರುದಿನ ಖಾಕಿ ಡ್ರಿಲ್ ನಡೆಸಿದೆ.

Author

Editor TumkurVarthe

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು

WhatsApp

Join Now

Telegram

Join Now

Instagram

Join Now