--ಇಲ್ಲಿ ಜಾಹೀರಾತು--

ರಾಜ್ಯಕ್ಕೆ ಕೇಂದ್ರ ಕನಿಷ್ಠ ಗ್ಯಾಸ್ ಪೂರೈಸುತ್ತಿಲ್ಲ: ಪರಮೇಶ್ವರ್

On: April 6, 2026 2:36 PM
Follow Us
--ಇಲ್ಲಿ ಜಾಹೀರಾತು--

Whatsapp Channel

Join Now

Telegram Group

Join Now

ಬೆಂಗಳೂರು: ಕೇಂದ್ರ ಸರ್ಕಾರ ರಾಜ್ಯಕ್ಕೆ ಬರಬೇಕಾದ ಕನಿಷ್ಠ ಗ್ಯಾಸ್ ಸಿಲಿಂಡರ್ ಪೂರೈಕೆ ಮಾಡದ ಕಾರಣ ರಾಜ್ಯದಲ್ಲಿ ಸಮಸ್ಯೆ ಹೆಚ್ಚಾಗಿದೆ ಎಂದು ಗೃಹಸಚಿವ ಜಿ.ಪರಮೇಶ್ವರ್ ಆರೋಪಿಸಿದರು.
ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಕೇಂದ್ರಕ್ಕೆ ಬೇಡಿಕೆ ಇಟ್ಟಿದ್ದೇವೆ. ನಮ್ಮ ರಾಜ್ಯಕ್ಕೆ ಕೊಡಬೇಕಾದ ಅಲಾಟ್‌ಮೆಂಟ್ ನೀಡಬೇಕು. ಯುದ್ದದಿಂದ ಎಲ್ಲಾರಿಗೂ ತೊಂದರೆ ಆಗಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಬರಬೇಕಾದ ಅನಿಲ ಪೂರೈಕೆ ಮಾಡಿಲ್ಲ. ಕನಿಷ್ಠ ಪೂರೈಕೆಯನ್ನಾದರೂ ಮಾಡಬೇಕಲ್ಲವೇ? ಅದಕ್ಕಾಗಿ ಸಮಸ್ಯೆ ಆಗಿದೆ. ಎಲ್ಲಾ ರಾಜ್ಯಗಳಿಗೆ ಕೊಟ್ಟಂತೆ ನಮಗೂ ಸಮರ್ಪಕವಾಗಿ ಕೊಡಲಿ ಎಂದು ಒತ್ತಾಯಿಸಿದರು.
ಹಿಂದಿ ಭಾಷೆ ವಿಚಾರದಲ್ಲಿ ಲೋಕಭವನದ ಪತ್ರ ವಿಚಾರ ಕುರಿತು ಮಾತನಾಡಿ, ಇದು ಮೊದಲೇನೂ ಅಲ್ವಲ್ಲ. ವಿಶೇಷವಾಗಿ ಹಿಂದಿ ಬಳಸದ ರಾಜ್ಯಗಳಲ್ಲಿ ಮೊದಲಿನಿಂದಲೂ ಇದೆ. ಇದು ಆದಷ್ಟು ಬೇಗ ಬಗೆಹರಿದರೆ ಒಳ್ಳೆಯದು ಎಂದರು.

Author

Editor TumkurVarthe

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು

WhatsApp

Join Now

Telegram

Join Now

Instagram

Join Now