--ಇಲ್ಲಿ ಜಾಹೀರಾತು--

ಆಟೋ ಎಲ್‌ಪಿಜಿ ಪೂರೈಕೆ ಸಮಸ್ಯೆ: 10ರಂದು ಸಭೆ-ಸಚಿವ ಮುನಿಯಪ್ಪ

On: April 6, 2026 2:39 PM
Follow Us
--ಇಲ್ಲಿ ಜಾಹೀರಾತು--

Whatsapp Channel

Join Now

Telegram Group

Join Now

ಬೆಂಗಳೂರು: ರಾಜ್ಯದಲ್ಲಿ ಆಟೋ ಎಲ್‌ಪಿಜಿ ಪೂರೈಕೆ ಸಮಸ್ಯೆಯನ್ನು ಪರಿಹರಿಸುವ ಉದ್ದೇಶದಿಂದ ಏಪ್ರಿಲ್ 10ರಂದು ಸಭೆ ಕರೆಯುವುದಾಗಿ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಸೋಮವಾರ ತಿಳಿಸಿದರು.
ಕೆಲವು ಖಾಸಗಿ ತೈಲ ಕಂಪನಿಗಳು ವಾಹನಗಳಿಗೆ ಎಲ್‌ಪಿಜಿ (ದ್ರವೀಕೃತ ಪೆಟ್ರೋಲಿಯಂ ಅನಿಲ) ಬೆಲೆಯನ್ನು ಹೆಚ್ಚಿಸಿವೆ. ಖಾಸಗಿ ಇಂಧನ ಕೇಂದ್ರಗಳಲ್ಲಿ ಬೆಲೆಗಳು ಹೆಚ್ಚಾದ ಕಾರಣ ಹೆಚ್ಚಿನ ಜನರು ಸಾರ್ವಜನಿಕ ವಲಯದ ಇಂಧನ ಬಂಕ್ ಗಳಿಗೆ ಹೋಗುತ್ತಿದ್ದಾರೆ. ಇದರಿಂದ ಅಲ್ಲಿ ಸರತಿ ಸಾಲುಗಳು ಕಂಡುಬರುತ್ತವೆ ಎಂದು ಅವರು ಹೇಳಿದರು.
ಬೆಂಗಳೂರು ಮತ್ತು ರಾಜ್ಯದ ಇತರ ಹಲವಾರು ಸ್ಥಳಗಳಲ್ಲಿ ಆಟೋ ಎಲ್‌ಪಿಜಿ ಕೊರತೆಯಿಂದಾಗಿ ಆಟೋ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ. ಹಲವು ಸ್ಥಳಗಳಲ್ಲಿ ಇಂಧನ ಕೇಂದ್ರಗಳ ಹೊರಗೆ ಆಟೋಗಳು ಸಾಲಿನಲ್ಲಿ ನಿಂತಿವೆ. ಸೋಮವಾರ, ಆಟೋ ಚಾಲಕರ ಸಂಘಗಳ ಪ್ರತಿನಿಧಿಗಳನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಸಚಿವರು ಆಲಿಸಿದರು.
ಆಟೋ ಚಾಲಕರು ಸಂಕಷ್ಟದಲ್ಲಿದ್ದಾರೆAದು ನಮಗೆ ತಿಳಿದಿದೆ. ಕೇಂದ್ರ ಸರ್ಕಾರ ಪ್ರತಿದಿನ ಸುಮಾರು 3,000 ಆಟೋ ಎಲ್‌ಪಿಜಿ ಸಿಲಿಂಡರ್‌ಗಳನ್ನು ಪೂರೈಸುತ್ತಿದೆ. ಆದರೆ, ಖಾಸಗಿ ಪೂರೈಕೆದಾರರು ಬೆಲೆಯನ್ನು ಹೆಚ್ಚಿಸಿದ್ದಾರೆ. ಸಮಸ್ಯೆಯನ್ನು ಪರಿಹರಿಸಲು ನಾನು ತಕ್ಷಣ ಸಭೆ ಕರೆಯುತ್ತೇನೆ ಎಂದು ಸಚಿವ ಮುನಿಯಪ್ಪ ಹೇಳಿದರು.
ಸರ್ಕಾರ ಪ್ರತಿದಿನ ಸುಮಾರು 3,000 ಆಟೋ ಎಲ್‌ಪಿಜಿ ಸಿಲಿಂಡರ್‌ಗಳನ್ನು ಪೂರೈಸುತ್ತದೆ. ಖಾಸಗಿ ಕಂಪನಿಗಳು ಸಹ ಸಮಾನ ಸಂಖ್ಯೆಯ ಸಿಲಿಂಡರ್‌ಗಳನ್ನು ಪೂರೈಸುತ್ತವೆ. ಖಾಸಗಿ ಕಂಪನಿಗಳು ಬೆಲೆ ಹೆಚ್ಚಿಸಿವೆ. ಸಂಬAಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ. ಖಾಸಗಿ ಕಂಪನಿಗಳ ಪ್ರತಿನಿಧಿಗಳು, ಕೇಂದ್ರ ಸರ್ಕಾರಿ ಅಧಿಕಾರಿಗಳು, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸಂಯೋಜಕರು, ಪೊಲೀಸರು ಮತ್ತು ರಾಜ್ಯ ಸರ್ಕಾರಿ ಅಧಿಕಾರಿಗಳನ್ನು ಸಹ ಸಭೆಗೆ ಕರೆಯಲಾಗುವುದು ಎಂದು ಹೇಳಿದರು.
ಇಂಧನ ಬಿಕ್ಕಟ್ಟು ಪ್ರಪಂಚದಾದ್ಯAತ ಇದೆ. ಕೇಂದ್ರ ಸರ್ಕಾರ ರಷ್ಯಾದಿಂದ ಒಂದು ತಿಂಗಳ ಮುಂಚಿತವಾಗಿ ಇಂಧನ ಸರಬರಾಜು ಪಡೆಯಲು ಯೋಜಿಸಿದ್ದರೆ ಈ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ. ಈಗ ಪರಿಸ್ಥಿತಿ ಹದಗೆಟ್ಟಿದೆ. ಈ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಬೇಕಿದೆ ಎಂದು ಹೇಳಿದರು.

Author

Editor TumkurVarthe

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು

WhatsApp

Join Now

Telegram

Join Now

Instagram

Join Now