--ಇಲ್ಲಿ ಜಾಹೀರಾತು--

ಡಿಕೆಶಿ ಇವತ್ತೇ ಸಿಎಂ ಆಗ್ತಾರೆ ಅಂತ ಹೇಳಿದ್ದೀನಾ?: ಡಿಕೆಸು

On: April 7, 2026 2:43 PM
Follow Us
--ಇಲ್ಲಿ ಜಾಹೀರಾತು--

Whatsapp Channel

Join Now

Telegram Group

Join Now


ಬೆಂಗಳೂರು: ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಬೇಕೆಂಬ ಆಸೆಯಿದೆ. ಆದರೆ ಅವರು ಇವತ್ತೇ ಸಿಎಂ ಆಗ್ತಾರೆ ಅಂತ ನಾನು ಹೇಳಿದ್ದೀನಾ?. ಇದರ ಬಗ್ಗೆ ಸಮಯ ಬಂದಾಗ ಮಾತಾಡೋಣ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಪ್ರತಿಕ್ರಿಯೆ ನೀಡಿದ್ದಾರೆ.
ಸಿದ್ದರಾಮಯ್ಯ ಇನ್ನೂ ಎರಡು ವರ್ಷ ಸಿಎಂ ಆಗಿ ಮುಂದುವರೆಯಲಿದ್ದಾರೆAಬ ಪರಮೇಶ್ವರ್ ಹೇಳಿಕೆ ವಿಚಾರಕ್ಕೆ ಪ್ರತಿಕಿಯಿಸಿದ ಅವರು, ಇದು ನನಗೆ ಗೊತ್ತಿಲ್ಲ. ಅವರನ್ನೇ ಕೇಳಬೇಕು. ಅವರು ಗೃಹ ಸಚಿವರಾಗಿದ್ದಾರೆ. ಅವರು ಹೇಳಿದನ್ನು ನಾವು ಕೇಳಬೇಕಾಗುತ್ತದೆಂದು ವ್ಯಂಗ್ಯವಾಡಿದರು.
ಕ್ಷೇತ್ರ ಪುನರ್ ವಿಂಗಡಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಸಂಸದರ ಕ್ಷೇತ್ರ ಕಡಿಮೆಯಾಗುವುದರ ಜೊತೆಗೆ ಆರ್ಥಿಕ ಮುಗ್ಗಟ್ಟು ಎದುರಿಸಬೇಕಾಗುತ್ತದೆ. ನಮ್ಮ ತೆರಿಗೆ ಬೇರೆ ರಾಜ್ಯಗಳಿಗೆ ಹಂಚಿಕೆ ಆಗುತ್ತದೆ. ದಕ್ಷಿಣ ಭಾರತಕ್ಕೆ ಅನ್ಯಾಯ ಆಗುತ್ತದೆ ಎಂದು ನಾನು ಹಿಂದೆಯೇ ಹೇಳಿದ್ದೆ. ದಕ್ಷಿಣ ಭಾರತದ ಬಗ್ಗೆ ಕೂಗು ಏಳುತ್ತದೆ ಅಂತ ಹೇಳಿದ್ದೆ ಎಂದು ಸ್ಮರಿಸಿದರು.
ದಕ್ಷಿಣ ಭಾರತದ ಆದಾಯವನ್ನು ಉತ್ತರ ಭಾರತಕ್ಕೆ ತೆಗೆದುಕೊಂಡು ಹೋಗುವ ಹುನ್ನಾರ ಇದೆ. ಹಾಗಾಗಿ ಕ್ಷೇತ್ರ ಪುನರ್ ವಿಂಗಡಣೆ 2011ರ ಜನಸಂಖ್ಯೆ ಆಧಾರ ಅಂತಿದ್ದಾರೆ. ಇದು ಇನ್ನೂ ಮಾರಕ. ಬೆಂಗಳೂರಿನಲ್ಲಿ ಆಗ 70 ಲಕ್ಷ ಜನಸಂಖ್ಯೆ ಇತ್ತು. ಈಗ ಒಂದೂವರೆ ಕೋಟಿ ಆಗಿದೆ. ರಾಜ್ಯದ ಜನಸಂಖ್ಯೆ ಏಳೂವರೆ ಕೋಟಿ ಆಗಿದೆ. ಇದು ಮುಂದೆ ನಮಗಿರುವ ಸವಾಲು ಎಂದು ತಿಳಿಸಿದರು.

Author

Editor TumkurVarthe

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು

WhatsApp

Join Now

Telegram

Join Now

Instagram

Join Now