--ಇಲ್ಲಿ ಜಾಹೀರಾತು--

ಗ್ಯಾರಂಟಿ ಕೈಹಿಡಿದಿದೆ: ಡಿಕೆಶಿ

On: May 4, 2026 2:22 PM
Follow Us
--ಇಲ್ಲಿ ಜಾಹೀರಾತು--

Whatsapp Channel

Join Now

Telegram Group

Join Now


ಬೆಂಗಳೂರು: ಜನ ನಮ್ಮ ಜೊತೆ ಇದ್ದಾರೆ. ನಮ್ಮ ಗ್ಯಾರಂಟಿ ನಮ್ಮ ಕೈಹಿಡಿದಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
ಉಪ ಚುನಾವಣೆ ಫಲಿತಾಂಶದ ನಂತರ ಮಾತನಾಡಿದ ಅವರು, ನಮ್ಮ ಗ್ಯಾರಂಟಿ ರಾಜ್ಯದಲ್ಲಿ ಚೆನ್ನಾಗಿ ನಡೆಯುತ್ತಿದೆ. ಜನ ಸ್ಪಂದಿಸಿದ್ದಾರೆ. ಇದಕ್ಕೆ ಈ ಫಲಿತಾಂಶ ಉದಾಹರಣೆ. ಇನ್ನೂ ರೌಂಡ್ ಇದೆ, ಚೆನ್ನಾಗಿ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದಾವಣಗೆರೆಯಲ್ಲಿ ಕಾಂಗ್ರೆಸ್ ಗೆ ಎಸ್‌ಡಿಪಿಐ ವೋಟ್ ನಮಗೆ ಡೇಂಜರ್ ಆಗಿದೆ. ಎಸ್‌ಡಿಪಿಐ ಅವರನ್ನು ಲೈಟಾಗಿ ತೆಗೆದುಕೊಂಡಿಲ್ಲ. ಇಷ್ಟು ಆಗಲಿದೆ ಅಂತ ಅಂದಾಜಿಸಿರಲಿಲ್ಲ. ಅದು ಪೊಲಿಟಿಕಲ್ ಪಾರ್ಟಿ ಅಲ್ಲ. ಮುಸ್ಲಿಂ ನಾಯಕರು ಕೆಲಸ ಮಾಡಿಲ್ಲ ಎಂಬ ಬಗ್ಗೆ ನಾನು ಮಾತನಾಡಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳು ಎಲ್ಲಾ ವಿಷಯ ತಿಳಿಸಿದ್ದಾರೆ ಎಂದರು.
ತಮಿಳುನಾಡು ಫಲಿತಾಂಶದಿಂದ ಆಶ್ಚರ್ಯ ಆಗಿದೆ. ಅಲ್ಲಿ ಹೊಸ ಯುಗಾರಂಭವಾಗಿದೆ. ತಮಿಳುನಾಡು ಫಲಿತಾಂಶ ಗ್ರಹಿಸಲು ಆಗಲಿಲ್ಲ. ಶೇ.30-40 ವೋಟ್ ಹೋಗಬಹುದು ಅಂದುಕೊAಡಿದ್ದೆವು. ಈ ಪ್ರಮಾಣದಲ್ಲಿ ಬದಲಾವಣೆ ಆಗುತ್ತದೆ ಅಂತ ಅಂದುಕೊಂಡಿರಲಿಲ್ಲ ಎಂದರು.
ಕೇರಳ ಫಲಿತಾಂಶದ ಬಗ್ಗೆ ನಂಬಿಕೆ ಇತ್ತು. 10 ವರ್ಷ ಆಗಿತ್ತು. ಹೀಗಾಗಿ ಜನ ಬದಲಾವಣೆ ಬಯಸಿದ್ದಾರೆ. ಇವತ್ತು ದೊಡ್ಡ ಬೆಂಬಲ ಸಿಕ್ಕಿದೆ. ಅಸ್ಸಾಂನಲ್ಲಿ ಪಾರ್ಟಿ ಡ್ಯೂಟಿ ಮಾಡಿದ್ದೇನೆ. ಹೆಚ್ಚು ಸೀಟ್ ನಿರೀಕ್ಷೆ ಇತ್ತು. ಪಶ್ಚಿಮ ಬಂಗಾಳದಲ್ಲಿ ವೋಟ್ ಡಿಲೀಟ್ ಮಾಡಿದ್ದಾರೆ. ಮೆಷಿನ್ ಕೂಡ ಸಮಸ್ಯೆ ಮಾಡಿದ್ದರು. ಗೆಲ್ಲಲೇಬೇಕು ಅನ್ನೋ ಕಾರಣಕ್ಕೆ ಬಿಜೆಪಿ ಏನೇನೋ ಮಾಡಿದ್ದಾರೆ ಎಂದು ಡಿಕೆ ಶಿವಕುಮಾರ್ ಆರೋಪಿಸಿದರು.

Author

Editor TumkurVarthe

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು

WhatsApp

Join Now

Telegram

Join Now

Instagram

Join Now