ಬೌರಿಂಗ್ ಆಸ್ಪತ್ರೆ ಗೋಡೆ ಕುಸಿದು 7 ಮಂದಿ ಸಾವು

ಬೆಂಗಳೂರು: ಬೆಂಗಳೂರಿನಲ್ಲಿ ಬುಧವಾರ ಸಂಜೆ ಸುರಿದ ಬಿರುಗಾಳಿ ಸಮೇತ ಧಾರಾಕಾರ ಮಳೆಗೆ 7 ಮಂದಿ ಬಲಿಯಾಗಿದ್ದಾರೆ. ಬೌರಿಂಗ್ ಆಸ್ಪತ್ರೆ ಕಾಂಪೌAಡ್ ಕುಸಿದು ಮೂವರು ಮಕ್ಕಳು ಸೇರಿ 7 ಮಂದಿ ಸಾವನ್ನಪ್ಪಿದ್ದಾರೆ. ಮೃತಪಟ್ಟವರ ಪೈಕಿ ಕೆಲವರು ಫುಟ್‌ಪಾತ್ ಬಳಿ ತಳ್ಳುಗಾಡಿಯಲ್ಲಿ ವ್ಯಾಪಾರ ಮಾಡುತ್ತಿದ್ದರು. ಮೃತಪಟ್ಟವರ ಪೈಕಿ ಕೆಲವು ಪಾದಚಾರಿಗಳು ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆಸ್ಪತ್ರೆ ಗೋಡೆ ಕುಸಿದ ಬೆನ್ನಲ್ಲೇ ಅಲ್ಲಿದ್ದ ಸಾರ್ವಜನಿಕರು ರಕ್ಷಣಾ ಕಾರ್ಯ ನಡೆಸಿ ಕೆಲವರನ್ನು ರಕ್ಷಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಹಳೆಯ ಗೋಡೆಗೆ ದೊಡ್ಡ … Read more

ಸಿಡಿಲು ಬಡಿದು 60 ಕುರಿ ಸಾವು

ಯಾದಗಿರಿ: ಸಿಡಿಲು ಬಡಿದು 60 ಕುರಿಗಳು ಸಾವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಬುದುರು ಗ್ರಾಮದಲ್ಲಿ ನಡೆದಿದೆ. ಕುರಿಗಾಹಿಗಳಾದ ಮಲ್ಲಪ್ಪ, ಜಲ್ಲಪ್ಪ ಎಂಬುವವರಿಗೆ ಸೇರಿದ 60 ಕುರಿಗಳು ಮೃತಪಟ್ಟಿವೆ. ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗಿದೆ. ಈ ವೇಳೆ ಕುರಿಗಳನ್ನು ಹೊಡೆದುಕೊಂಡು ಬರುವಾಗ ಈ ಅವಘಡ ಸಂಭವಿಸಿದೆ. ಗುರುಮಠಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಒಳ ಮೀಸಲಾತಿ ಜಾರಿ ಆದೇಶ

*56,432 ಹುದ್ದೆಗಳ ನೇಮಕಾತಿ: ತರ‍್ತು ಕ್ರಮಕ್ಕೆ ಸೂಚನೆ ಬೆಂಗಳೂರು: ಒಳ ಮೀಸಲಾತಿ ಜಾರಿಗೊಳಿಸಿ ರಾಜ್ಯ ರ‍್ಕಾರ ಮಂಗಳವಾರ ಅಧಿಕೃತ ಆದೇಶ ಹೊರಡಿಸಿದೆ. ಪರಿಶಿಷ್ಟ ಜಾತಿಯ ಶೇ.15 ಮೀಸಲಾತಿಯಲ್ಲಿ ಪ್ರರ‍್ಗ ಎ (ಎಡಗೈ ಜಾತಿಗಳು) ಮತ್ತು ಪ್ರರ‍್ಗ ಬಿ (ಬಲಗೈ) ತಲಾ ಶೇ.5.25, ಮತ್ತು ಪ್ರರ‍್ಗ ಸಿಗೆ (ಸ್ಪೃಶ್ಯ, ಅಲೆಮಾರಿ ಜಾತಿಗಳು) ಶೇ.4.5ರಷ್ಟು ಒಳ ಮೀಸಲಾತಿ ಜಾರಿ ಮಾಡಲಾಗಿದೆ. ಈಗಾಗಲೇ ರ‍್ಥಿಕ ಇಲಾಖೆ ಅನುಮೋದನೆ ನೀಡಿರುವ 56,432 ಹುದ್ದೆಗಳ ನೇರ ನೇಮಕಾತಿಗೆ ತರ‍್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಎಲ್ಲ … Read more

‘ಮೈಸೂರು ಸ್ಯಾಂಡಲ್’ಗೆ 507 ಕೋಟಿ ಲಾಭ

*2025-26ನೇ ಸಾಲಿನಲ್ಲಿ 2,016 ಕೋಟಿ ರೂ. ಐತಿಹಾಸಿಕ ವಹಿವಾಟು ಬೆಂಗಳೂರು: 110 ವರ್ಷಗಳ ಇತಿಹಾಸವಿರುವ ಸರ್ಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ (ಮೈಸೂರು ಸ್ಯಾಂಡಲ್) 2025-26ನೇ ವರ್ಷದಲ್ಲಿ ಮೊದಲ ಬಾರಿಗೆ 2,016 ಕೋಟಿ ರೂ. ವಹಿವಾಟು ನಡೆಸಿ 507 ಕೋಟಿ ರೂ. ಲಾಭ ಗಳಿಸಿದೆ. ಮೈಸೂರು ಸ್ಯಾಂಡಲ್ ಸಂಸ್ಥೆಯ ಪಾಲಿಗೆ ಇದು ಚಾರಿತ್ರಿಕ ಮೈಲುಗಲ್ಲು. ಸಾರ್ವಜನಿಕ ಉದ್ದಿಮೆಗಳ ಸಾಧನೆಯಲ್ಲಿ ಕಿರೀಟಪ್ರಾಯವಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ತಿಳಿಸಿದರು. ಸಂಸ್ಥೆಯ … Read more

ಮೇ 15ಕ್ಕೆ ಡಿಕೆಶಿ ಸಿಎಂ ಆಗೋದು ಫಿಕ್ಸ್: ಇಕ್ಬಾಲ್

ರಾಮನಗರ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮೇ 15ಕ್ಕೆ ಮುಖ್ಯಮಂತ್ರಿ ಆಗೋದು ಫಿಕ್ಸ್ ಆಗಿದೆ. ಹಿಂದೆ ನಾನು ಎರಡ್ಮೂರು ಬಾರಿ ದಿನಾಂಕಗಳನ್ನು ಹೇಳಿದ್ದೇನೆ. ವಿವಿಧ ಕಾರಣಕ್ಕೆ ಆಗ ಆಗಲಿಲ್ಲ. ಈಗಿನದು ಅಂತಿಮ ದಿನಾಂಕ. ಡಿಕೆಶಿ ಸಿಎಂ ಆಗೇ ಆಗುತ್ತಾರೆ ಎಂದು ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಭರವಸೆಯ ಮಾತನಾಡಿದ್ದಾರೆ. ರಾಮನಗರ ತಾಲ್ಲೂಕಿನ ಕೇತೋಹಳ್ಳಿಯಲ್ಲಿ ಮಂಗಳವಾರ ಮುಖ್ಯಮಂತ್ರಿ ಬದಲಾವಣೆಗೆ ಸಂಬಂಧಿಸಿದ ಬೆಳವಣಿಗೆ ಕುರಿತ ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು. ಮೇ 15ರಂದು ನಮ್ಮ ನಾಯಕನ ಜನ್ಮದಿನವಿದೆ. ಅಂದು ಮುಖ್ಯಮಂತ್ರಿ … Read more

ಕೆಎಸ್‌ಆರ್‌ಟಿಸಿ ಬಸ್ ಪಲ್ಟಿ: 45 ಪ್ರಯಾಣಿಕರು ಪಾರು

ಚಿತ್ರದುರ್ಗ: ಚಳ್ಳಕೆರೆ ತಾಲ್ಲೂಕಿನ ಹೆಗ್ಗರೆ ಸಮೀಪ ಮಂಗಳವಾರ ಮುಂಜಾನೆ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿಯಾದ ಪರಿಣಾಮ 15ಕ್ಕೂ ಹೆಚ್ಚು ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾಯಚೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್ ಹೆಗ್ಗರೆ ಗ್ರಾಮದ ಸಮೀಪ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ವಾಹನವು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ರಸ್ತೆಯ ಮೇಲೆ ಉರುಳಿ ಬಿದ್ದಿದೆ. ಹೆಗ್ಗರೆ ಬಳಿ ಬೆಳಿಗ್ಗೆ 7 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಬಸ್ ನಲ್ಲಿ 45 ಪ್ರಯಾಣಿಕರಿದ್ದರು. ಇವರಲ್ಲಿ 15 ಪ್ರಯಾಣಿಕರಿಗೆ … Read more

ಪಾವಗಡದಲ್ಲಿ KSRTC ಬಸ್ ಡಿವೈಡರ್ ಗೆ ಡಿಕ್ಕಿ

ಪಾವಗಡ: ಪಟ್ಟಣದಲ್ಲಿ KSRTC ಬಸ್ ಚಾಲನೆಯ ವೇಳೆ ಜಾಯಿಂಟ್ ರಾಡ್ ಕಟ್ ಆಗಿ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. 20ಕ್ಕೂ ಹೆಚ್ಚು ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ. ಚಾಲಕನ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದ್ದು, ಬಸ್ ಮುಂಭಾಗಕ್ಕೆ ಹಾನಿಯಾಗಿದೆ.

ಕೆ ಎಸ್‌ ಆರ್‌ ಟಿ ಸಿ ಬಸ್ ಪಲ್ಟಿ- ತಪ್ಪಿದ ಭಾರಿ ದುರಂತ

ಗುಬ್ಬಿ: ತಾಲೂಕಿನ ಎಂ.ಎಚ್.ಪಟ್ಟಣ ಗೇಟ್ ಬಳಿ ಬಳಿ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಕೆ ಎಸ್‌ ಆರ್‌ಟಿ ಸಿ ಬಸ್ ಪಲ್ಟಿಯಾಗಿ ಭಾರಿ ದುರಂತ ತಪ್ಪಿದೆ, ಬಸ್‌ ನಲ್ಲಿ ಭರ್ತಿಯಾಗಿದ್ದ 40ಕ್ಕೂ ಹೆಚ್ಚು ಪ್ರಯಾಣಿಕರು ಅದೃಷ್ಟ ವಶಾತ್ ಪ್ರಾಣಾಪಾಯದಿಂದ ಎಲ್ಲರೂ ಪಾರಾಗಿದ್ದಾರೆ. ತಿಪಟೂರು ಡಿಪೋಗೆ ಸೇರಿದ ಈ ಸರ್ಕಾರಿ ಬಸ್ ಹೊಸದುರ್ಗದಿಂದ ಬೆಂಗಳೂರಿನ ಕಡೆಗೆ ತೆರಳುತ್ತಿತ್ತು, ಗುಬ್ಬಿ ಸಮೀಪದ ಎಂ.ಎಚ್.ಪಟ್ಟಣ ಬಳಿ ಚಾಲಕನ ನಿಯಂತ್ರಣ ತಪ್ಪಿ ಬಸ್ ರಸ್ತೆ ಬದಿಯ ಡಿವೈಡರ್‌ ಗೆ ಬಲವಾಗಿ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. … Read more

ಮೋದಿ ವಿರುದ್ಧ ಖರ್ಗೆ ವಿವಾದಿತ ಹೇಳಿಕೆ

ಚೆನ್ನೈ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಯೋತ್ಪಾದಕ ಎಂದು ಟೀಕಿಸುವ ಮೂಲಕ ವಿವಾದಿತ ಹೇಳಿಕೆ ನೀಡಿದ್ದಾರೆ. ತಮಿಳುನಾಡಿನಲ್ಲಿ ಚುನಾವಣಾ ಪ್ರಚಾರದ ಕೊನೆಯ ದಿನವಾದ ಮಂಗಳವಾರ ಚೆನ್ನೈನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಟೆರರಿಸ್ಟ್ ಪ್ರಧಾನಿ ಮೋದಿ ಅವರೊಂದಿಗೆ ಎಐಎಡಿಎಂಕೆ ಕೈಜೋಡಿಸಿರುವುದು ನಿಜಕ್ಕೂ ವಿಷಾದನೀಯ ಎಂದು ಹೇಳಿದರು. ಮಹಿಳಾ ಮೀಸಲಾತಿ ಮಸೂದೆ ಮತ್ತು ಕ್ಷೇತ್ರ ಪುನರ್ ವಿಂಗಡಣೆ ಮಸೂದೆ ಮಂಡನೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದಕ್ಕಾಗಿ ಎಐಎಡಿಎಂಕೆಯನ್ನು ಟೀಕಿಸಿದರು. ಪ್ರಧಾನಿ ಮೋದಿ ಅವರನ್ನು ‘ಸಮಾನತೆಯಲ್ಲಿ ನಂಬಿಕೆಯಿಲ್ಲದ ಭಯೋತ್ಪಾದಕ’ … Read more

ಸತತ 21 ಗಂಟೆ ಕಾಲ ನಲಪಾಡ್ ಗೆ ‘ಇಡಿ ಡ್ರಿಲ್’

ಬೆಂಗಳೂರು: ಬಿಟ್ ಕಾಯಿನ್ ಹಗರಣ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ಮೊಹಮ್ಮದ್ ನಲಪಾಡ್ ಮನೆ ಮೇಲೆ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯ ಸತತ 21 ಗಂಟೆ ಕಾಲ ನಲಪಾಡ್ ನಿವಾಸದಲ್ಲಿ ಶೋಧ ಕಾರ್ಯ ನಡೆಸಿದೆ. ಈ ವೇಳೆ ಹಾರ್ಡ್ಡಿಸ್ಕ್, ವಿದೇಶಿ ವ್ಯವಹಾರದ ಬ್ಯಾಂಕ್ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದೆ. ಬೆAಗಳೂರಿನ ಅಶೋಕನಗರದ ನಲಪಾಡ್ ಮನೆಗೆ ಸೋಮವಾರ ಬೆಳಗ್ಗೆ ಇಡಿ ತಂಡ 6:30ಕ್ಕೆ ಎಂಟ್ರಿ ಕೊಟ್ಟಿತ್ತು. ನಂತರ ಮಾರನೇ ದಿನ ಮುಂಜಾನೆ 3:30ಕ್ಕೆ ದಾಳಿ ಮುಗಿಸಿ ಮನೆಯಿಂದ ಇಡಿ ತೆರಳಿದೆ. ಸತತ … Read more