ತುಮಕೂರು: ನೊಂದ ಬಾಲಕಿ ತಾಯಿ ಠಾಣೆಗೆ ಹಾಜರಾಗಿ ಮೇ 29, 2021 ರಂದು ನೀಡಿದ ದೂರಿನ ಮೇರೆಗೆ ತುಮಕೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಆಕ್ಟ್ ಪ್ರಕರಣವನ್ನು ಪಿಎಸ್ ಐ ಮಂಗಳಮ್ಮ ದಾಖಲಿಸಿಕೊಂಡಿದ್ದರು. ಪ್ರಕರಣದ ತನಿಖೆ ಕೈಗೊಂಡು ಆರೋಪಿಯಾದ ಸೈಪುಲ್ಲಾ ಅವರನ್ನು ದಸ್ತಗಿರಿ ಮಾಡಿ ತನಿಖೆ ಪೂರ್ಣಗೊಳಿಸಿ ಆರೋಪಿಯ ವಿರುದ್ಧ ದೋಷಾರೋಪಣ ಪಟ್ಟಿ ನ್ಯಾಯಾಲಕ್ಕೆ ಸಲ್ಲಿಸಲಾಗಿತ್ತು.
ಸದರಿ ಪ್ರಕರಣವನ್ನು ಸ್ಪೆಷಲ್ ಸಿ.ಸಿ.ನಂ:206/2021 ರಲ್ಲಿ ತುಮಕೂರು ಎಫ್ ಟಿ ಎಸ್ ಸಿ-1 ನ್ಯಾಯಾಲಯದ ನ್ಯಾಯಾಧೀಶರು ವಿಚಾರಣೆ ನಡೆಸಿ ಆರೋಪಿಯ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮೇ 23 ರಂದು ಪ್ರಕರಣದ ಆರೋಪಿ ಸೈಪುಲ್ಲಾ ಗೆ 10 ವಷರ್ ಜೈಲು ಶಿಕ್ಷೆ ಮತ್ತು 1 ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿರುತ್ತಾರೆ. ಈ ಪ್ರಕರಣದಲ್ಲಿ ವಿಶೇಷ ಸರ್ಕಾರಿ ಅಭಿಯೋಜಕಿಯಾಗಿ ಆಶಾ ಕೆ.ಎಸ್ ವಾದಮಂಡಿಸಿದ್ದರು.
ಫೋಕ್ಸೋ ಪ್ರಕರಣ- ಆರೋಪಿಗೆ ಶಿಕ್ಷೆ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು