ಖೈದಿಗಳಿಗೆ ಮೊಬೈಲ್ ಸರಬರಾಜು- ಇಬ್ಬರ ಬಂಧನ

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಖೈದಿಗಳಿಗೆ ಮೊಬೈಲ್ ಸರಬರಾಜು ಮಾಡುತ್ತಿದ್ದ ಇಬ್ಬರು ಮನಃಶಾಸ್ತ್ರಜ್ಞರನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜೈಲಿನೊಳಗಿರುವ ಖೈದಿಗಳ ಮನಃ ಪರಿವರ್ತನೆಗಾಗಿ ಮನಃಶಾಸ್ತ್ರಜ್ಞೆ ಆಗಾಗ್ಗೆ ಪರಪ್ಪನ ಕಾರಾಗೃಹಕ್ಕೆ ಹೋಗುತ್ತಿದ್ದರು. ಮೊನ್ನೆ ಮನಃಶಾಸ್ತ್ರಜ್ಞೆ ಮೊಬೈಲ್ ತೆಗೆದುಕೊಂಡು ಹೋಗುತ್ತಿದ್ದಾಗ ಜೈಲಿನ ಅಧಿಕಾರಿಗೆ ಮೊಬೈಲ್ ಸಮೇತ ಸಿಕ್ಕಿಬಿದ್ದಿದ್ದಾರೆ. ನಂತರ ಅವರನ್ನು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಮನಃಶಾಸ್ತ್ರಜ್ಞೆಯನ್ನು ವಿಚಾರಣೆಗೆ ಒಳಪಡಿಸಿದಾಗ, ತನಗೆ ಮತ್ತೊಬ್ಬ ಸೈಕ್ಯಾಟ್ರಿಸ್ಟ್ ಮೊಬೈಲ್ ತಂದುಕೊಟ್ಟಿದ್ದಾಗಿ ಹೇಳಿದ್ದರಿಂದ ಆತನನ್ನೂ ಸಹ ಬಂಧಿಸಿರುವ ಪೊಲೀಸರು ಹೆಚ್ಚಿನ … Read more

ಕನ್ನಡದಲ್ಲಿ ಉತ್ತರ ಹೇಳಿದ್ದಕ್ಕೆ ಕೆಲಸವೇ ಹೋಯ್ತು

ಬೆಂಗಳೂರು: ಇತ್ತೀಚಿಗೆ ಬೆಂಗಳೂರಿನಲ್ಲಿ ಅನ್ಯ ಭಾಷಿಕರ ದಬ್ಬಾಳಿಕೆ ಹಾಗೂ ಕನ್ನಡಿಗರ ಮೇಲೆ ಹಲ್ಲೆ ಮಾಡಿರುವ ಘಟನೆಗಳು ನಡೆದಿತ್ತು.ಅಲ್ಲದೆ ಇದಕ್ಕೆ ಕನ್ನಡಿಗರು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದರು.ಆದರೆ ಇದೀಗ ವಿಪರ್ಯಾಸ ಅಂದರೆ ಕಾಲೇಜು ಒಂದರಲ್ಲಿ ಕನ್ನಡದಲ್ಲಿ ಪ್ರಶ್ನೆ ಕೇಳಿದ ವಿದ್ಯಾರ್ಥಿಗೆ ಉಪನ್ಯಾಸಕರು ಕನ್ನಡದಲ್ಲಿ ಉತ್ತರ ಹೇಳಿದ್ದಕ್ಕೆ ತನ್ನ ಕೆಲಸವನ್ನೇ ಕಳೆದುಕೊಂಡಿದ್ದಾರೆ. ಬೆಂಗಳೂರಿನ ಕೋಣನಕುಂಟೆಯಲ್ಲಿರುವ ಆರ್ವಿ ಪಿಯು ಕಾಲೇಜಿನಲ್ಲಿ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಕನ್ನಡದಲ್ಲಿ ವಿದ್ಯಾರ್ಥಿ ಪ್ರಶ್ನೆ ಕೇಳಿದ್ದ, ಅದಕ್ಕೆ ಉಪನ್ಯಾಸಕ ಕನ್ನಡದಲ್ಲಿ ಉತ್ತರಿಸಿದ್ದರು, ಕನ್ನಡದಲ್ಲಿ ಉತ್ತರ ನೀಡಿದ್ದಕ್ಕೆ ಉಪನ್ಯಾಸಕನ … Read more

ರೌಡಿಶೀಟರ್ ಕೊಲೆ- ಆರೋಪಿಗಳ ಬಂಧನ

ಬೆಂಗಳೂರು: ಕೊಲೆ ಮಾಡಲು ಬಂದ ರೌಡಿಶೀಟರ್ನನ್ನು ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆ ಮಾಡಿದ ಆರೋಪದ ಮೇಲೆ ನಾಲ್ವರನ್ನು ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪುನೀತ್ (25) ಮೃತ ರೌಡಿಶೀಟರ್ ಹಾಗೂ ಮಹೇಶ್, ಶ್ರೀಕಾಂತ್, ರಾಜೇಶ್ ಮತ್ತು ಸುಮಂತ್ ಬಂಧಿತ ಆರೋಪಿಗಳು. ದಮೃತ ಪುನೀತ್ ರೌಡಿಶೀಟರ್ ಆಗಿದ್ದು, ಆರೋಪಿ ಮಹೇಶ್ ಬಳಿ 40 ಸಾವಿರಕ್ಕೆ ಮಾತನಾಡಿ ಬೈಕ್ವೊಂದನ್ನು ಖರೀದಿಸಿದ್ದ ಆದರೆ ಹಣ ನೀಡದೆ ಸತಾಯಿಸುತ್ತಿದ್ದ. ಅಲ್ಲದೇ ಹಣ ಕೇಳಿದ ಮಹೇಶ್ಗೆ ಮಗಳನ್ನು ಅಪಹರಿಸುವ ಬೆದರಿಕೆ ಹಾಕಿದ್ದ. ಇದರಿಂದ ಇಬ್ಬರ ಮಧ್ಯೆ … Read more

ಖೋಟಾ ನೋಟ್ ಪ್ರಿಂಟ್- ಆರೋಪಿ ಬಂಧನ

ಬೆಂಗಳೂರು: ಬೆಂಗಳೂರಲ್ಲಿ ಹೋಟೆಲ್ ರೂಮ್ ನಲ್ಲಿ ಖೋಟಾ ನೋಟುಗಳನ್ನು ಪ್ರಿಂಟ್ ಮಾಡಿದ್ದ ಆರೋಪಿಯನ್ನು ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕ್ರಿಷ್ ಮಾಲಿ (23) ಎಂದು ತಿಳಿದುಬಂದಿದೆ. ಟಸ್ಕರ್ ಟೌನ್ ನಲ್ಲಿರುವ ಹೋಟೆಲ್ನಲ್ಲಿ ಜೂನ್ 1ರಂದು ರೂಮ್ ಬುಕ್ ಮಾಡಿದ್ದ ಆರೋಪಿ, ಖೋಟಾ ನೋಟುಗಳನ್ನು ಪ್ರಿಂಟ್ ಮಾಡಿದ್ದ.ಅಲ್ಲದೇ ಜೂನ್ 7ರಂದು ಹೋಟೆಲ್ನಿಂದ ಚೆಕ್ ಔಟ್ ಆಗುವಾಗ ನಕಲಿ ನೋಟುಗಳ ಮೂಲಕ ಬಿಲ್ ಪಾವತಿಸಿದ್ದ.ಬ್ಯಾಗ್ ನಲ್ಲಿ ಪ್ರಿಂಟರ್, ಸ್ಕ್ಯಾನರ್ ಗಳನ್ನು ತಂದಿದ್ದ ಆರೋಪಿ ಹೋಟೆಲ್ನಲ್ಲಿ ಕುಳಿತೇ … Read more

ಶಾಸಕ ವಿನಯ್ ಕುಲಕರ್ಣಿ ಮತ್ತೆ ಜೈಲು ಪಾಲು

ಬೆಂಗಳೂರು: ಯೋಗೇಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಮತ್ತೆ ಜೈಲುಪಾಲಾಗಿದ್ದಾರೆ. ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಶಾಸಕ ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್ ಜಾಮೀನು ರದ್ದು ಮಾಡಿ, ಒಂದು ವಾರದೊಳಗೆ ಕೋರ್ಟ್ ಗೆ ಶರಣಾಗುವಂತೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ವಿನಯ್ ಕುಲಕರಣಿ ಇಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಮುಂದೆ ಶರಣಾಗಿದ್ದರು.ಈ ವೇಳೆ ಕೋರ್ಟ್, ಸಿಬಿಐ ವಶಕ್ಕೆ ನೀಡಿ ಆದೇಶ ಹೊರಡಿಸಿದೆ. ವಿನಯ್ ಕುಲಕರ್ಣಿಯನ್ನು ವಶಕ್ಕೆ ಪಡೆದ ಸಿಬಿಐ ಅಧಿಕಾರಿಗಳು, ಪರಪ್ಪನ … Read more

ಹುಬ್ಬಳ್ಳಿ-ಧಾರವಾಡದಲ್ಲಿ ಮಳೆ ಅಬ್ಬರ- ಇಬ್ಬರ ಸಾವು

ಚಿಕ್ಕಮಗಳೂರು: ಮುಂಗಾರು ಮಳೆಯ ಅಬ್ಬರಕ್ಕೆ ಉತ್ತರಕರ್ನಾಟಕ ತತ್ತರಗೊಂಡಿದೆ. ಮಲೆನಾಡು ಕರಾವಳಿ ಭಾಗದಲ್ಲಿ ಮುಂಗಾರು ಮಳೆ ಜೋರಾಗಿದ್ದು, ಹಳ್ಳಕೊಳ್ಳಗಳು ತುಂಬಿ, ನದಿಗಳು ಉಕ್ಕಿಹರಿಯುತ್ತಿವೆ, ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಭಾರೀ ಮಳೆಗೆ ಇಬ್ಬರು ಸಾವನ್ನಪ್ಪಿದ್ದಾರೆ. ಗೋಕಾಕ್ನಲ್ಲಿ ಒಬ್ಬರು ಬಲಿಯಾಗಿದ್ದಾರೆ. ಉತ್ತರ ಕನ್ನಡ, ಚಿಕ್ಕಮಗಳೂರು, ಉಡುಪಿ, ಕೊಡಗು ಜಿಲ್ಲೆಗಳಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ನದಿಗಳು ಉಕ್ಕಿ ಹರಿದು, ಹೊಲಗದ್ದೆಗಳು ಜಲಾವೃತಗೊಂಡಿವೆ. ಬೆಣ್ಣೆಹಳ್ಳ ತುಂಬಿ ಹರಿದ ಪರಿಣಾಮ ಹಲವು ಗ್ರಾಮಗಳಿಗೆ … Read more

ವಿಮಾನ ಪತನ- 265 ಜನ ಸಾವು

ಅಹಮದಾಬಾದ್: ಗುಜರಾತ್ ನ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಗುರುವಾರ ಏರ್ ಇಂಡಿಯಾ ವಿಮಾನ ಪತನವಾಗಿದ್ದು, ಒಬ್ಬ ಪ್ರಯಾಣಿಕ ಹೊರತುಪಡಿಸಿ ಉಳಿದ ಎಲ್ಲಾ 241 ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿದಂತೆ ಒಟ್ಟು 265 ಜನ ಮೃತಪಟ್ಟಿದ್ದಾರೆ. ಪತನಗೊಂಡ ಏರ್ ಇಂಡಿಯಾದ ಬೋಯಿಂಗ್ 787-8 ಡ್ರೀಮ್ ಲೈನರ್ ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿದೆ. ಮೂಲಗಳ ಪ್ರಕಾರ, ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ)ದ ತಂಡ ಅಹಮದಾಬಾದ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬಳಿಯ ಜನದಟ್ಟಣೆಯ ಮೇಘನಿನಗರ ಪ್ರದೇಶದಲ್ಲಿ … Read more

ಅಪಘಾತದಲ್ಲಿ ಮುಖ್ಯ ಪೇದೆ ಸಾವು

ಕುಣಿಗಲ್: ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲುಗಡೆ ಮಾಡಿದ್ದ ಕಾರನ್ನು ತೆರೆವುಗೊಳಿಸಿ ಅವರ ಪ್ರಾಣ ರಕ್ಷಿಸಲು ಮುಂದಾದ ಕರ್ತವ್ಯ ನಿರತ ಮುಖ್ಯಪೇದೆಗೆ ವಾಹನ ಒಂದು ಡಿಕ್ಕಿ ಹೊಡೆದ ಪರಿಣಾಮ ಮುಖ್ಯಪೇದೆ ಸ್ಥಳದಲ್ಲಿ ಮೃತಪಟ್ಟ ಧಾರುಣ ಘಟನೆ ಗುರುವಾರ ರಾತ್ರಿ ನಡೆದಿದೆ. ಮೃತರನ್ನು ಕುಣಿಗಲ್ ಪೊಲೀಸ್ ಠಾಣೆಯ 112 ಗಸ್ತು ವಾಹನದ ಮುಖ್ಯಪೇದೆ ನಿಂಗರಾಜು (44 )ಎಂದು ಗುರುತಿಸಲಾಗಿದೆ. ಗುರುವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಗಸ್ತು ಕರ್ತವ್ಯದಲ್ಲಿ ನಿರತರಾಗಿದ್ದಾಗ ಹನುಮಾಪುರ ಗೇಟ್ ಬಳಿಯ ಮುಖ್ಯ ರಸ್ತೆಯಲ್ಲಿ ಕಾರು ಒಂದು … Read more

ಅಪರಿಚಿತ ಶವ ಪತ್ತೆ

ತುಮಕೂರು: ಕ್ಯಾತ್ಸಂದ್ರ ಪೊಲೀಸ್ ಠಾಣೆ ವ್ಯಾಪ್ತಿ ಮಂದರಗಿರಿ ಲೇಔಟ್ ನ ಸರ್ಕಾರಿ ಹಳ್ಳದ ಕಾಡು ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸುಮಾರು 40 ವರ್ಷದ ಅಪರಿಚಿತ ವ್ಯಕ್ತಿಯ ಶವವೊಂದು ಜೂನ್ 9ರಂದು ಪತ್ತೆಯಾಗಿದ್ದು, ವಾರಸುದಾರರು ಯಾರೆಂದು ತಿಳಿದು ಬಂದಿರುವುದಿಲ್ಲ. ಮೃತನು 5.7 ಅಡಿ ಎತ್ತರ, ದೃಢಕಾಯ ಶರೀರ, ದುಂಡು ಮುಖ ಹೊಂದಿದ್ದು, ದೇಹವು ಕೊಳೆತು ಹೋಗಿರುತ್ತದೆ. ಮೈಮೇಲೆ ನೀಲಿ ಬಣ್ಣದ ಪ್ಯಾಂಟ್ ಹಾಗೂ ಖಾಕಿ ಬಣ್ಣದ ಟೀ ಷರ್ಟ್ ಇದ್ದು, ಎಡಗೈಯಲ್ಲಿ ವಾಚ್ ಇರುತ್ತದೆ. ಮೃತನ ವಾರಸುದಾರರು … Read more

ಅಪಘಾತ- ಸಾವು, ಬದುಕಿನ ನಡುವೆ ಯೀವಕ ಹೋರಾಟ

ಬೆಂಗಳೂರು: ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಯುವಕನೋರ್ವ ಸಾವು-ಬದುಕಿನ ಮಧ್ಯ ಹೋರಾಟ ನಡೆಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ರಸ್ತೆ ಕಾಮಗಾರಿಗಾಗಿ ಬಿಬಿಎಂಪಿ ಬೇಕಾಬಿಟ್ಟಿಯಾಗಿ ರಸ್ತೆ ಅಗೆದಿದ್ದರಿಂದಾಗಿ ಅಪಘಾತವೊಂದು ಸಂಭವಿಸಿದೆ. ಈ ಅಪಘಾತದಲ್ಲಿ ಯುವಕನೋರ್ವ ಗಂಭೀರವಾಗಿ ಗಾಯಗೊಂಡಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ. ಘಟನೆ ಜೂ. 8ರಂದು ನಡೆದಿದ್ದು, ಯುವಕನ ತಂದೆಯು ಬಿಬಿಎಂಪಿ, ಜಲಮಂಡಳಿ ಹಾಗೂ ಗೂತ್ತಿಗೆದಾನ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ. ಯುವಕನ ತಂದೆ ಕೊಟ್ಟ ದೂರಿನ ಅನ್ವಯ ರಾಜಾಜಿನಗರ ಸಂಚಾರ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಡಾ.ರಾಜ್ ಕುಮಾರ್ … Read more