--ಇಲ್ಲಿ ಜಾಹೀರಾತು--

ಮದುವೆಗಳಿಗೂ ಗ್ಯಾಸ್ ಕಂಟಕ

On: March 11, 2026 2:32 PM
Follow Us
--ಇಲ್ಲಿ ಜಾಹೀರಾತು--

Whatsapp Channel

Join Now

Telegram Group

Join Now


ಬೆಂಗಳೂರು: ಕಲ್ಯಾಣ ಮಂಟಪಗಳಿಗೂ ಈಗ ಗ್ಯಾಸ್ ಟ್ರಬಲ್ ಆಗಿದೆ. ಮದುವೆ ಮನೆಯವರೇ ಗ್ಯಾಸ್ ಸಿಲಿಂಡರ್ ತರಬೇಕೆಂದು ಕಲ್ಯಾಣ ಮಂಟಪಗಳು ಹೇಳುತ್ತಿವೆ. ಹೀಗಾಗಿ ಮದುವೆಗಳಿಗೆ ಗ್ಯಾಸ್ ಕಂಟಕವಾಗಿದೆ.
ಕಲ್ಯಾಣ ಮಂಟಪಗಳಿಗೆ ವಾಣಿಜ್ಯ ಗ್ಯಾಸ್ ಸಿಗುತ್ತಿಲ್ಲ. ಹೀಗಾಗಿ ಮದುವೆ ಬುಕ್ಕಿಂಗ್ ಮಾಡಿದ ವಧು/ ವರನ ಕಡೆಯವರಿಗೆ ಸಿಲಿಂಡರ್ ತರುವಂತೆ ಕಲ್ಯಾಣ ಮಂಟಪಗಳ ಸಿಬ್ಬಂದಿ ಸೂಚಿಸುತ್ತಿದ್ದಾರೆ.
ಶುಭ ಕಾರ್ಯಕ್ರಮಗಳಿಗೆ ಕಲ್ಯಾಣ ಮಂಟಪಗಳೇ ವಾಣಿಜ್ಯ ಸಿಲಿಂಡರ್‌ಗಳನ್ನು ನೀಡುತ್ತಿದ್ದವು. ಆದರೆ ಈಗ ಸಿಲಿಂಡರ್ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದರಿಂದ ಮದುವೆ ಕಾರ್ಯಕ್ರಮಗಳಿಗೆ ಬುಕ್ಕಿಂಗ್ ಮಾಡಿದವರು ಪರದಾಡುತ್ತಿದ್ದಾರೆ. ವಾಣಿಜ್ಯ ಸಿಲಿಂಡರ್‌ಗಳ ಲಭ್ಯತೆ ಕಡಿಮೆಯಾದ ಕಾರಣ ಹಲವು ಹೋಟೆಲ್‌ಗಳು ಮೆನು ಬದಲಾವಣೆ ಮಾಡಿಕೊಂಡಿವೆ.

Author

Editor TumkurVarthe

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು

WhatsApp

Join Now

Telegram

Join Now

Instagram

Join Now