--ಇಲ್ಲಿ ಜಾಹೀರಾತು--

ಹೋಟೆಲ್‌ಗಳಲ್ಲಿ ಸೌದೆ ಒಲೆ ಮೊರೆ

On: March 11, 2026 2:31 PM
Follow Us
--ಇಲ್ಲಿ ಜಾಹೀರಾತು--

Whatsapp Channel

Join Now

Telegram Group

Join Now


ಬೆಂಗಳೂರು:
ಇರಾನ್ ಮತ್ತು ಇಸ್ರೇಲ್ ವಾರ್ ಎಫೆಕ್ಟ್ನಿಂದಾಗಿ ಸಂಪೂರ್ಣವಾಗಿ ಕಮರ್ಷಿಯಲ್ ಗ್ಯಾಸ್ ಬಂದಾಗಿದೆ. ಸಿಲಿಂಡರ್ ಸಿಗದೇ ಹೋಟೆಲ್ ಮಾಲೀಕರು ಅಕ್ಷರಶಃ ಪರದಾಡುತ್ತಿದ್ದಾರೆ. ಕೆಲವು ಹೋಟೆಲ್ ಗಳಲ್ಲಿ ಸೌದೆ ಒಲೆ ಮೊರೆಹೋಗಿದ್ದಾರೆ.
ಗ್ಯಾಸ್ ಸಿಲಿಂಡರ್ ಬಂದ್ ಆದ ಹಿನ್ನೆಲೆ ಸಂಪೂರ್ಣವಾಗಿ ಹೋಟೆಲ್ ಮಾಲೀಕರು ಸೌದೆ ಒಲೆಗಳ ಮೊರೆ ಹೋಗಿದ್ದಾರೆ. ಸೌದೆ ಮೇಲೆಯೇ ಉಪಹಾರ, ಊಟ ತಯಾರಿಸುತ್ತಿದ್ದಾರೆ. ಗ್ಯಾಸ್ ಸಿಲಿಂಡರ್ ಸಿಗದೇ 10-15 ಕ್ವಿಂಟಾಲ್ ಸೌದೆಯನ್ನು ಹೋಟೆಲ್ ಮಾಲೀಕರು ಸ್ಟಾಕ್ ಮಾಡಿಕೊಂಡಿದ್ದಾರೆ. ಹೋಟೆಲ್ ಉದ್ಯಮ ಬಂದ್ ಮಾಡದೇ ಸೌದೆ ಬಳಸಿಕೊಂಡು ಉಪಹಾರ, ಊಟ ತಯಾರು ಮಾಡುತ್ತಿದ್ದಾರೆ.
ಗ್ಯಾಸ್ ಕಲೆಕ್ಷನ್ ಇದ್ದ ಒಲೆಗಳನ್ನು ಬಂದ್ ಮಾಡಲಾಗಿದೆ. ಎಲ್ಲವೂ ಸೌದೆ ಮಯವಾಗಿದೆ. ಸೌದೆ ಬಳಸಿಕೊಂಡು ಮಾಲೀಕರು ಅಡುಗೆ ಮಾಡಿಸುತ್ತಿದ್ದು, ಗ್ಯಾಸ್ ಹೆಚ್ಚು ಖರ್ಚಾಗುವ ಮೇನುಗಳನ್ನು ಬಂದ್ ಮಾಡಿದ್ದಾರೆ. ಚೈನೀಸ್, ಸೂಪ್‌ಗಳು, ದೋಸಾ ಸೇರಿದಂತೆ ಹೆಚ್ಚು ಗ್ಯಾಸ್ ಖರ್ಚಾಗುವ ಉಪಹಾರಗಳಿಗೆ ಬ್ರೇಕ್ ಹಾಕಿದ್ದಾರೆ.

Author

Editor TumkurVarthe

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು

WhatsApp

Join Now

Telegram

Join Now

Instagram

Join Now