
ಬೆಂಗಳೂರು: ಬಿಟ್ ಕಾಯಿನ್ ಹಗರಣ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ಮೊಹಮ್ಮದ್ ನಲಪಾಡ್ ಮನೆ ಮೇಲೆ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯ ಸತತ 21 ಗಂಟೆ ಕಾಲ ನಲಪಾಡ್ ನಿವಾಸದಲ್ಲಿ ಶೋಧ ಕಾರ್ಯ ನಡೆಸಿದೆ. ಈ ವೇಳೆ ಹಾರ್ಡ್ಡಿಸ್ಕ್, ವಿದೇಶಿ ವ್ಯವಹಾರದ ಬ್ಯಾಂಕ್ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದೆ.
ಬೆAಗಳೂರಿನ ಅಶೋಕನಗರದ ನಲಪಾಡ್ ಮನೆಗೆ ಸೋಮವಾರ ಬೆಳಗ್ಗೆ ಇಡಿ ತಂಡ 6:30ಕ್ಕೆ ಎಂಟ್ರಿ ಕೊಟ್ಟಿತ್ತು. ನಂತರ ಮಾರನೇ ದಿನ ಮುಂಜಾನೆ 3:30ಕ್ಕೆ ದಾಳಿ ಮುಗಿಸಿ ಮನೆಯಿಂದ ಇಡಿ ತೆರಳಿದೆ. ಸತತ 21 ಗಂಟೆಗಳ ಸುದೀರ್ಘ ಶೋಧ ಕಾರ್ಯವನ್ನು ಇಡಿ ನಡೆಸಿದೆ.
14 ಇಡಿ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸಿದರು. ಆದರೆ, ಅಂದಿನ ಕೆಲವು ದಾಖಲೆಗಳು ಸದ್ಯಕ್ಕೆ ಸಿಕ್ಕಿಲ್ಲ. ನಲಪಾಡ್ ವಿದೇಶಿ ವ್ಯವಹಾರ, ಹೂಡಿಕೆ ಕುರಿತು ದಾಖಲೆ ಕಲೆಹಾಕಿದ್ದಾರೆ. ಮಹತ್ವದ ದಾಖಲೆಗಳು, ಡಿಜಿಟಲ್ ಡಾಕ್ಯುಮೆಂಟ್ ಅನ್ನು ಇಡಿ ವಶಕ್ಕೆ ಪಡೆದಿದೆ. ಕರೆದಾಗ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿ ಅಧಿಕಾರಿಗಳು ಹೊರಟರು. ಮೂರು ಕಾರುಗಳಲ್ಲಿ 14 ಅಧಿಕಾರಿಗಳು ನಲಪಾಡ್ ಮನೆಯಿಂದ ಹೊರಟರು.
Editor TumkurVarthe
ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು






