
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಹಾಯಕರಾಗಿ ಕಾಣುತ್ತಿದ್ದಾರೆ. ಅಗಾಧ ಶಕ್ತಿ ಇರುವ ಅವರನ್ನು ಇಂತಹ ಸ್ಥಿತಿಯಲ್ಲಿ ನಾನು ಎಂದಿಗೂ ನೋಡಿರಲಿಲ್ಲ. ಇದೆಲ್ಲವನ್ನೂ ನೋಡಿದರೆ ಯಾರಾದರೂ ಸಿಎಂ ವಿರುದ್ಧ ಮಾಟ-ಮಂತ್ರ ಮಾಡಿಸಿದ್ದಾರೆಯೇ ಎಂಬ ಆಲೋಚನೆ ಬರುತ್ತದೆ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಮತ್ತೊಂದು ದಾಳ ಉರುಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಮಾಟ-ಮಂತ್ರ ನಂಬಲ್ಲ. ನಾನು ಕೂಡಾ ಮಾಟ, ಮಂತ್ರವನ್ನು ನಂಬಲ್ಲ. ಆಗಂತ ಅದನ್ನು ಮಾಡಿಸುವುದಿಲ್ಲ ಅಂತಲ್ಲ. ನಮ್ಮ ಹಳೇ ಮನೆ ಮುಂದೆಯೂ ನಿಂಬೆಹಣ್ಣು, ದಾರ ಹಾಕಿ ಹೋಗಿದ್ದರು. ಕೇರಳದಲ್ಲಿ ಮಾಟ-ಮಂತ್ರ ಮಾಡಿಸುತ್ತಾರೆ. ಈ ಬಗ್ಗೆ ತನಿಖೆ ನಡೆಸಬೇಕಾದ ಅಗತ್ಯವಿದೆ ಎಂದು ರಾಜಣ್ಣ ಹೇಳಿದರು.
ರಾಜ್ಯ ರಾಜಕೀಯದಲ್ಲಿ ಮೇ ತಿಂಗಳಲ್ಲಿಯೇ ರಾಜಕೀಯ ಬೆಳವಣಿಗೆಗಳು ನಡೆಯಲಿವೆ. ರಾಜಕೀಯ ನಿಂತ ನೀರಲ್ಲ. ಅದು ಪರಿಶುದ್ಧವಾಗಿರಬೇಕೆಂದರೆ ಹರಿಯುತ್ತಿರಬೇಕು. ಮೇ ತಿಂಗಳಲ್ಲಿ ರಾಜಕಾರಣದಲ್ಲಿ ಬದಲಾವಣೆಗಳಾಗಲಿವೆ ಎಂದು ರಾಜಣ್ಣ ಮತ್ತೊಂದು ಬಾಂಬ್ ಸಿಡಿಸಿದರು.
ಸಿಎಂಗೆ ಮಾಟ-ಮಂತ್ರ ಮಾಡಿಸಿರಬಹುದೇ?: ರಾಜಣ್ಣ






