
ನವದೆಹಲಿ: ಹೆಚ್ಚುತ್ತಿರುವ ಇಂಧನ ದರವನ್ನು ಜನರ ಮೇಲೇ ವರ್ಗಾವಣೆ ಮಾಡುವುದು ಅನಿವಾರ್ಯ ಎಂದು ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ.
ನವದೆಹಲಿಯಲ್ಲಿ ನಡೆದ ಮಾಸಿಕ ಆರ್ಥಿಕ ಪರಿಶೀಲನೆಯಲ್ಲಿ, ಹೆಚ್ಚಿದ ಇಂಧನದ ಬೆಲೆಗಳನ್ನು ಜನರು ಮತ್ತು ಉದ್ಯಮಗಳಿಗೆ ವರ್ಗಾಯಿಸುವುದು ತಪ್ಪಿಸಲಾಗದ ಕ್ರಮ. ಪೂರೈಕೆ ವ್ಯತ್ಯಯದ ಸಂದರ್ಭಗಳಲ್ಲಿ ಬೇಡಿಕೆ ನಿಯಂತ್ರಣ ಅಗತ್ಯವಾಗಿದೆ. ಇಲ್ಲದಿದ್ದರೆ ಇಂಧನಕ್ಕಾಗಿ ಇನ್ನಷ್ಟು ಹೆಚ್ಚಿನ ಬೆಲೆ ತೆರಬೇಕಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.
ಆದರೆ, ಚುನಾವಣೆಗೂ ಮುನ್ನ ಮೂರು ದಿನಗಳ ಹಿಂದೆ ಹೇಳಿಕೆ ನೀಡಿದ್ದ ಕೇಂದ್ರ ಸರ್ಕಾರ ಚುನಾವಣೆ ಮುಗಿದ ನಂತರ ಇಂಧನ, ಗ್ಯಾಸ್ ದರ ಏರಿಕೆ ಮಾಡಲಾಗುತ್ತಿದೆ ಎಂಬ ವದಂತಿ ಸುಳ್ಳು. ಸದ್ಯಕ್ಕೆ ದರ ಏರಿಕೆ ಮಾಡಲ್ಲ ಎಂದು ಭರವಸೆ ನೀಡಿತ್ತು. ಆದರೆ, ನಿನ್ನೆ ಚುನಾವಣೆ ಮುಗಿದ ತಕ್ಷಣವೇ ಕೇಂದ್ರ ಉಲ್ಟಾ ಹೊಡಿದಿದೆ.
ಇಂಧನ ಬೆಲೆ ಏರಿಕೆ: ಕೇಂದ್ರ ಸರ್ಕಾರ ಉಲ್ಟಾ







