--ಇಲ್ಲಿ ಜಾಹೀರಾತು--

ಆಂಧ್ರರದ ರಸ್ತೆ ಭೀಕರ ಅಪಘಾತ

On: May 19, 2025 2:37 PM
Follow Us
--ಇಲ್ಲಿ ಜಾಹೀರಾತು--

Whatsapp Channel

Join Now

Telegram Group

Join Now


ಹುಳಿಯಾರ್: ಆಂಧ್ರರ ಪ್ರದೇಶದ ಪ್ರವಾಸಕ್ಕೆ ಹೋಗಿದ್ದ ಚಿಕ್ಕನಾಯಕನ ಹಳ್ಳಿ ತಾಲ್ಲೂಕು ಹುಳಿಯಾರು ಹೋಬಳಿಯ ಕೆಂಕೆರೆ ಗ್ರಾಮದ 6 ಮಂದಿಯ ಪೈಕಿ ಮೂವರು ಸ್ಥಾಳದಲ್ಲೇ ಸಾವನ್ನಪ್ಪಿರುವ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ.
ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಕೆಂಕೆರೆ ನವೀನ್ (43), ಬಿಜೆಪಿ ಯುವ ಮೋರ್ಚಾ ತಾಲೂಕು ಮಾಜಿ ಅಧ್ಯಕ್ಷ ಸಂತೋಷ್ (37) ಹಾಗೂ ಲೋಕೇಶ್ (37) ಸಾವನ್ನಪ್ಪಿದ ದುದೈರ್ವಿಗಳಾಗಿದ್ದಾರೆ, ಅದೃಷ್ಟವಶಾತ್ ಇವರ ಜೊತೆಯಲ್ಲಿ ಪ್ರಯಾಣ ಮಾಡುತ್ತಿದ್ದ ದರ್ಶನ್, ಶಶಿಕುಮಾರ್, ನಡುವನಹಳ್ಳಿ ಶಿವಾನಂದ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಂತೋಷ್ ಅವರ ಹುಟ್ಟುಹಬ್ಬದ ಅಂಗವಾಗಿ 6 ಮಂದಿ ಇನೋವಾ ಕಾರಿನಲ್ಲಿ ಮಂತ್ರಾಲಯ ಹಾಗೂ ಶ್ರೀಶೈಲಕ್ಕೆ ಹೋಗಿ ಬರುವ ವೇಳೆ ಕರ್ನೂಲ್ ಬಳಿ ಕಾರು ರಸ್ತೆ ವಿಭಜಕ್ಕೆ ಡಿಕ್ಕಿ ಹೊಡೆದು ನಂತರ ಮೂರ್ನಾಲ್ಕು ಪಲ್ಟಿಯಾಗಿ ರಸ್ತೆಯ ಇಕ್ಕೆಲಕ್ಕೆ ಹೋಗಿ ಬಿದ್ದಿದೆ, ಇದರಿಂದ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದ ನವೀನ್, ಸಂತೋಷ್, ಲೋಕೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸಚಿವ ಜೆ.ಸಿ.ಮಾಧುಸ್ವಾಮಿ ಪುತ್ರ ಡಾ.ಅಭಿಜ್ಞಾ, ತಾಪಂ ಮಾಜಿ ಅಧ್ಯಕ್ಷ ವಸಂತಯ್ಯ, ತಾಲೂಕು ಬಿಜೆಪಿ ಅಧ್ಯಕ್ಷ ಕೇಶವಮೂರ್ತಿ, ಕೆಎಂಎಲ್ ಕಿರಣ್, ಬರಕನಹಾಲ್ ವಿಶ್ವನಾಥ್, ಬರಗೂರು ಕಿರಣ್ ಸೇರಿದಂತೆ ಅನೇಕರು ಭಾನುವಾರ ರಾತ್ರಿಯೇ ಕರ್ನೂಲ್ ಬಳಿಯ ಘಟನಾ ಸ್ಥಳಕ್ಕೆ ತೆರಳಿ ಕಾನೂನು ವಿಧಿ ವಿಧಾನಗಳನ್ನು ಪೂರೈಸಿ ಸೋಮವಾರ ಮೃತ ದೇಹಗಳನ್ನು ಕೆಂಕೆರೆ ಗ್ರಾಮಕ್ಕೆ ತಂದರು, ಕಾಂಗ್ರೆಸ್ ಮುಖಂಡ ಡಾ.ಸಾಸಲು ಸತೀಶ್ ಕರ್ನೂಲ್ಗೆ ತೆರಳಿ ಮೃತರ ಅಂತಿಮ ದರ್ಶನ ಪಡೆದರು.
ಕರ್ನೂಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಮೃತರ ಅಂತ್ಯಕ್ರಿಯೆಯು ಮಂಗಳವಾರ ಬೆಳಗ್ಗೆ ಕೆಂಕೆರೆ ಗ್ರಾಮದಲ್ಲಿ ನಡೆಯಲಿದೆ ಎಂದು ಮೃತ ನವೀನ್ ಅವರ ಅಣ್ಣ ತಿಳಿಸಿದ್ದಾರೆ.

Author

Editor TumkurVarthe

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು

WhatsApp

Join Now

Telegram

Join Now

Instagram

Join Now