--ಇಲ್ಲಿ ಜಾಹೀರಾತು--

ಕೊರಟಗೆರೆಗೆ ಕರಡಿ ಎಂಟ್ರಿ- ಬೆಚ್ಚಿದ ಜನ

On: June 3, 2025 2:26 PM
Follow Us
--ಇಲ್ಲಿ ಜಾಹೀರಾತು--

Whatsapp Channel

Join Now

Telegram Group

Join Now


ಕೊರಟಗೆರೆ: ಅರಣ್ಯ ಪ್ರದೇಶದಿಂದ ಆಹಾರ ಹರಸಿ ಬಂದ ಕರಡಿಯೊಂದು ನೇರವಾಗಿ ಕೊರಟಗೆರೆ ಪಟ್ಟಣಕ್ಕೆ ಭೇಟಿ ಕೊಟ್ಟಿದ್ದು ರಸ್ತೆ ದಾಟುತ್ತಿರುವ ವೀಡಿಯೋ ಸಿಸಿ ಟಿಯಿಯಲ್ಲಿ ಸೆರೆಯಾಗಿದ್ದು ನಗರದಲ್ಲಿ ಭಯದ ವಾತಾವರಣ ಸೃಷ್ಟಿಸಿದೆ.
ಮಂಗಳವಾರ ಬೆ.4 ಗಂಟೆ ಸುಮಾರಿಗೆ ಪಟ್ಟಣದ ಶನೇಶ್ವರ ಸ್ವಾಮಿ ದೇವಾಲಯ ರಸ್ತೆಯಿಂದ ಶಿವಗಂಗಾ ಚಿತ್ರಮಂದಿರ ರಸ್ತೆ ಕಡೆಗೆ ದಾಟುತ್ತಿರುವ ವೀಡಿಯೋ ಸಿಸಿ ಟಿವಿ ದೃಶ್ಯದಲ್ಲಿ ಸೆರೆಯಾಗಿದ್ದು ಮುಂಜಾನೆ ವಾಯು ವಿಹಾರಕ್ಕೆಂದು ಹೊರ ಬಂದ ಕೆಲ ಜನರು ಭಯಭೀತರಾಗಿದ್ದಾರೆ.
ಅರಣ್ಯಾಧಿಕಾರಿಗಳ ಬೇಜಾವಬ್ದಾರಿ ತನದಿಂದ ಕೊರಟಗೆರೆ ತಾಲ್ಲೂಕಿನ ಸುತ್ತಮುತ್ತ ಅರಣ್ಯ ಪ್ರದೇಶಗಳ ನಾಶ ಜೊತೆಗೆ ಅಕ್ರಮ ಕಲ್ಲು ಗಣಿಗಾರಿಕೆಯಿಂದ ಆಗುತ್ತಿರುವ ಬ್ಲಾಸ್ಟಿಂಗ್ ಶಬ್ದಕ್ಕೆ ರಾತ್ರಿ ಹಗಲೆಗನ್ನದೆ ಪದೇ ಪದೆ ಜನವಸತಿ ಪ್ರದೇಶಗಳಲ್ಲಿ ಕಾಡು ಪ್ರಾಣಿಗಳು ಸಂಚರಿಸುತ್ತಿವೆ.
ಮುಂಜಾನೆ ಕಾಣಿಸಿಕೊಂಡು ಕರಡಿಯಿಂದ ಯಾವೊಬ್ಬ ವ್ಯಕ್ತಿಗೂ ಯಾವುದೇ ಪ್ರಾಣಹಾನಿಯಾಗಿಲ್ಲ, ಅಪಾಯ ಎದುರಾಗುವ ಮುನ್ನ ಅರಣ್ಯಾಧಿಕಾರಿಗಳು ವಿಶೇಷ ಆಸಕ್ತಿ ವಹಿಸಿ ಅಕ್ರಮ ಕಲ್ಲು ಗಣಿಗಾರಿಕೆಯಿಂದ ನಡೆಯುತ್ತಿರುವ ಬ್ಲಾಸ್ಟಿಂಗ್ ಶಬ್ಬಕ್ಕೆ ಕಡಿವಾಣ ಹಾಕುವಂತೆ ಸೋಷಿಯಲ್ ಮೀಡಿಯಾದಲ್ಲಿ ಪ್ರಜ್ಞಾವಂತ ನಾಗರೀಕರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

Author

Editor TumkurVarthe

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು

WhatsApp

Join Now

Telegram

Join Now

Instagram

Join Now