--ಇಲ್ಲಿ ಜಾಹೀರಾತು--

ನೀರಿನ ಕ್ಯಾನ್ ಗಳಲ್ಲಿ ಪೆಟ್ರೋಲ್ ಸಂಗ್ರಹ!

On: March 12, 2026 2:44 PM
Follow Us
--ಇಲ್ಲಿ ಜಾಹೀರಾತು--

Whatsapp Channel

Join Now

Telegram Group

Join Now


ಚೆನ್ನೈ: ತಮಿಳುನಾಡಿನಲ್ಲಿ ಬಂಕ್ ಮುಂದೆ ಜನರು ಸಾಲುಗಟ್ಟಿ ನಿಂತು ನೀರಿನ ಕ್ಯಾನ್ ಗಳನ್ನು ತಂದು ಪೆಟ್ರೋಲ್ ಹಾಕಿಸುತ್ತಿದ್ದಾರೆ. ಈಗ ಸಿಲಿಂಡರ್‌ಗೆ ಸಮಸ್ಯೆಯಾಗಿದೆ ಮುಂದೆ ಪೆಟ್ರೋಲ್ ಕೂಡ ಸಿಗುವುದಿಲ್ಲ. ದರ ಭಾರೀ ಏರಿಕೆಯಾಗಲಿದೆ ಎಂಬ ಗಾಳಿ ಸುದ್ದಿ ವೈರಲ್ ಆದ ಬೆನ್ನಲ್ಲೇ ತಮಿಳುನಾಡಿನ ಪೆಟ್ರೋಲ್ ಬಂಕ್ ಮುಂದೆ ಜನ ಪೆಟ್ರೋಲ್ ಹಾಕಿಸಲು ಮುಗಿಬಿದ್ದಿದ್ದಾರೆ.
ವಾಹನಗಳಿಗೆ ಫುಲ್ ಟ್ಯಾಂಕ್ ಪೆಟ್ರೋಲ್ ತುಂಬಿಸುವುದರ ಜೊತೆಗೆ ಮನೆಯಲ್ಲಿದ್ದ 20 ಲೀಟರ್ ವಾಟರ್ ಕ್ಯಾನ್ ತಂದು ಪೆಟ್ರೋಲ್ ತುಂಬಿಸಿಕೊAಡು ಹೋಗಿದ್ದಾನೆ. ತಮಿಳುನಾಡಿನ ಪೆಟ್ರೋಲ್ ಬಂಕ್‌ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ಫುಲ್ ವೈರಲ್ ಆಗಿದೆ. ಮಧ್ಯಪ್ರಾಚ್ಯದಲ್ಲಿ ತೈಲ ಬಿಕ್ಕಟ್ಟು ಸಂಭವಿಸಿದರೂ ಭಾರತಕ್ಕೆ ಯಾವುದೇ ಸಮಸ್ಯೆ ಇಲ್ಲ. ನಮ್ಮಲ್ಲಿ ತೈಲಗಳನ್ನು ತುರ್ತು ದಾಸ್ತಾನು ಸಂಗ್ರಹಿಸಿ ಇಡಲಾಗಿದೆ. ಬೇರೆ ದೇಶಗಳಿಂದಲೂ ಕಚ್ಚಾ ತೈಲ ಬರುತ್ತಿದೆ. ಯಾವುದೇ ಸಮಸ್ಯೆ ಇಲ್ಲ ಎಂದು ಕೇಂದ್ರ ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ.

Author

Editor TumkurVarthe

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು

WhatsApp

Join Now

Telegram

Join Now

Instagram

Join Now