--ಇಲ್ಲಿ ಜಾಹೀರಾತು--

ತಮಿಳುನಾಡಿಗೆ ವಿಜಯ್ ‘ದಳಪತಿ’

On: May 4, 2026 2:28 PM
Follow Us
--ಇಲ್ಲಿ ಜಾಹೀರಾತು--

Whatsapp Channel

Join Now

Telegram Group

Join Now

*ಮೊದಲ ಚುನಾವಣೆಯಲ್ಲಿಯೇ ಭರ್ಜರಿ ಜಯಗಳಿಸಿದ ಟಿವಿಕೆ
ಚೆನ್ನೈ: ತಮಿಳುನಾಡಿನ ವಿಧಾನಸಭೆ ಸಮರದಲ್ಲಿ ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಪಕ್ಷವು (ಟಿವಿಕೆ) ಹಳೆ ಹುಲಿಗಳ ಲೆಕ್ಕಾಚಾರವನ್ನು ತಲೆಕೆಳಗು ಮಾಡಿದೆ. ದಶಕಗಳಿಂದ ಡಿಎಂಕೆ ಮತ್ತು ಎಐಎಡಿಎಂಕೆ ನಡುವೆ ಸುತ್ತುತ್ತಿದ್ದ ತಮಿಳು ರಾಜಕಾರಣದಲ್ಲಿ ವಿಜಯ್ ಈಗ ‘ಸೂಪರ್ ಕಿಂಗ್’ ಆಗಿ ಉದಯಿಸಿದ್ದಾರೆ. ಯುವಶಕ್ತಿ ಮತ್ತು ಮಹಿಳೆಯರ ಅಭೂತಪೂರ್ವ ಬೆಂಬಲವೇ ಈ ಐತಿಹಾಸಿಕ ಬದಲಾವಣೆಗೆ ಕಾರಣ ಎನ್ನಲಾಗಿದೆ.
ತಮಿಳುನಾಡಿನ ಸುಮಾರು 2.38 ಕೋಟಿ ಯುವ ಮತದಾರರು ಸಾಂಪ್ರದಾಯಿಕ ದ್ರಾವಿಡ ಪಕ್ಷಗಳ ಮೇಲಿನ ಅಸಮಾಧಾನದಿಂದಾಗಿ ಹೊಸ ಪರ್ಯಾಯವನ್ನು ಹುಡುಕುತ್ತಿದ್ದರು. ವಿಜಯ್ ಅವರಲ್ಲಿ ಹೊಸ ಭರವಸೆ ಕಂಡ ಈ ಯುವ ಸಮೂಹ, ಅವರ ವಿಜಯ್ ಮಕ್ಕಳ ಇಯಕ್ಕಂ ಸಂಘಟನೆಯನ್ನು ಶಕ್ತಿಯುತ ಮತ ಬ್ಯಾಂಕ್ ಆಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಟಿವಿಕೆ ಪಕ್ಷದ ಪ್ರಣಾಳಿಕೆಯಲ್ಲಿದ್ದ ಮಹಿಳಾ ಕೇಂದ್ರಿತ ಯೋಜನೆಗಳು ಡಿಎಂಕೆಗೆ ತೀವ್ರ ಪೆಟ್ಟು ನೀಡಿವೆ. ಗೃಹಿಣಿಯರಿಗೆ ಮಾಸಿಕ ಹಣಕಾಸಿನ ನೆರವನ್ನು 2,500 ರೂ.ಗೆ ಏರಿಸುವ ಭರವಸೆ, ಪ್ರತಿ ಮನೆಗೂ ಉಚಿತ ಎಲ್‌ಪಿಜಿ ಸಿಲಿಂಡರ್ ಯೋಜನೆ. ಈ ಎರಡು ಅಂಶಗಳು ಮಹಿಳಾ ಮತದಾರರನ್ನು ಸೆಳೆಯುವಲ್ಲಿ ಗೇಮ್ ಚೇಂಜರ್ ಆಗಿದೆ ಎನ್ನಲಾಗುತ್ತಿದೆ.
ವಿದ್ಯಾರ್ಥಿಗಳಿಗಾಗಿ 25 ಲಕ್ಷ ರೂ.ವರೆಗೆ ಅಡಮಾನ ರಹಿತ ಶೈಕ್ಷಣಿಕ ಸಾಲದ ಭರವಸೆ. ಮೀನುಗಾರರಿಗೆ ಕನಿಷ್ಠ ಬೆಂಬಲ ಬೆಲೆ ಘೋಷಣೆ. ವ್ಯವಸ್ಥಿತ ಭ್ರಷ್ಟಾಚಾರದ ವಿರುದ್ಧ ವಿಜಯ್ ನೀಡಿದ ಕರೆಯು ಮಧ್ಯಮ ವರ್ಗದ ಜನರನ್ನು ಆಕರ್ಷಿಸಿತ್ತು.
ವಿಜಯ್ ಕೇವಲ ಸಿನಿಮೀಯ ಶೈಲಿಯಲ್ಲಿ ಪ್ರಚಾರ ಮಾಡದೆ ಸಂಘಟನಾತ್ಮಕವಾಗಿ ಕೆಲಸ ಮಾಡಿದ್ದರು. ರಾಜ್ಯಾದ್ಯಂತ ಸುಮಾರು 69,000 ಬೂತ್ ಏಜೆಂಟ್‌ಗಳನ್ನು ನೇಮಿಸಿ, ಬಲಿಷ್ಠ ಐಟಿ ವಿಭಾಗದ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಅಲೆ ಸೃಷ್ಟಿಸಿದ್ದು ಈ ಬಾರಿ ಡಿಎಂಕೆ ಪಲ್ಟಿ ಹೊಡೆಯಲು ಪ್ರಮುಖ ಕಾರಣವಾಗಿದೆ ಎನ್ನಲಾಗಿದೆ.
ದ್ರಾವಿಡ ರಾಜಕಾರಣದ ದ್ವಿಪಕ್ಷೀಯ ಯುಗಕ್ಕೆ ಅಂತ್ಯಹಾಡಿರುವ ವಿಜಯ್, ತಮಿಳುನಾಡಿನ ಜನಸಾಮಾನ್ಯರ ಧ್ವನಿಯಾಗಿ ಮೂಡಿಬಂದಿದ್ದಾರೆ. ಆಡಳಿತ ವಿರೋಧಿ ಅಲೆ ಮತ್ತು ತಮ್ಮ ಪ್ರಭಾವಿ ವ್ಯಕ್ತಿತ್ವದ ಸಮಾಗಮದಿಂದ ವಿಜಯ್ ಈಗ ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದ್ದಾರೆ.

ವಿಜಯ್ ನಿವಾಸಕ್ಕೆ ತ್ರಿಶಾ ಭೇಟಿ
ಚೆನ್ನೈ: ನಟಿ ತ್ರಿಶಾ ತಮ್ಮ ಹುಟ್ಟುಹಬ್ಬದ ನಿಮಿತ್ತ ಸೋಮವಾರ ಬೆಳಿಗ್ಗೆ ತಿರುಮಲ ತಿರುಪತಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ದರ್ಶನ ಪಡೆದ ನಂತರ ಅವರು ಚೆನ್ನೈಗೆ ಹಿಂತಿರುಗಿ ನೇರವಾಗಿ ದಳಪತಿ ವಿಜಯ್ ಅವರ ನಿವಾಸಕ್ಕೆ ತೆರಳಿದರು. ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ವಿಜಯ್ ಅವರಿಗೆ ತ್ರಿಶಾ ಅಭಿನಂದನೆ ಸಲ್ಲಿಸಿದ್ದಾರೆ.
ರಾಜಕೀಯ ಪಕ್ಷ ಸ್ಥಾಪಿಸಿದ 6 ತಿಂಗಳಲ್ಲಿ ಚೊಚ್ಚಲ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ವಿಜಯ್ ಅವರ ಟಿವಿಕೆ ಪಕ್ಷ ಇತಿಹಾಸ ಸೃಷ್ಟಿಸಿ ಸರ್ಕಾರ ರಚಿಸಲು ಸಜ್ಜಾಗಿರುವ ಸಮಯದಲ್ಲಿ ತ್ರಿಷಾ ಭೇಟಿ ಮಾಡಿದ್ದಾರೆ. ತ್ರಿಶಾ ಮತ್ತು ವಿಜಯ್ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬ ವದಂತಿ ಬಹಳ ಹಿಂದಿನಿAದಲೂ ಇದೆ. ವಿಜಯ್ ಅವರ ಪತ್ನಿ ಡಿಸೆಂಬರ್‌ನಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಕಾಂಗ್ರೆಸ್ ಗೆ ಟಿವಿಕೆ ಆಹ್ವಾನ
ಚೆನ್ನೈ: ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಸರ್ಕಾರ ರಚನೆಗೆ ಅಗತ್ಯವಾದಷ್ಟು ಬಹುಮತ ದೊರೆಯುವ ಸಾಧ್ಯತೆ ಕಡಿಮೆ ಇದೆ. ಹೀಗಾಗಿ ವಿಟಿಕೆ ಜೊತೆಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳುವಂತೆ ವಿಜಯ್ ಅವರ ತಂದೆ ಆಹ್ವಾನ ನೀಡಿದ್ದಾರೆ.
234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಗೆ ಸರ್ಕಾರ ರಚಿಸಲು 117 ಮ್ಯಾಜಿಕ್ ನಂಬರ್ ಆಗಿದೆ. ಆದರೆ ಟಿವಿಕೆ ಪಕ್ಷ ಸುಮಾರು 110 ಸ್ಥಾನಗಳನ್ನು ಗಳಿಸಿರುವುದರಿಂದ ಸರ್ಕಾರ ರಚಿಸಲು ಮೈತ್ರಿ ಪಕ್ಷಗಳ ಅಗತ್ಯವಿದೆ. ಹೀಗಾಗಿ ಟಿವಿಕೆ ಜೊತೆ ಸೇರಿ ಸರ್ಕಾರ ರಚನೆಗೆ ಅಗತ್ಯ ಬೆಂಬಲ ನೀಡುವಂತೆ ವಿಜಯ್ ಅವರ ತಂದೆ ಎಸ್.ಎ ಚಂದ್ರಶೇಖರ್ ಮುಕ್ತ ಆಹ್ವಾನವನ್ನು ನೀಡಿದ್ದಾರೆ. ಅಗತ್ಯ ಸಂಖ್ಯೆಗಳನ್ನು ಪಡೆಯಲು ಟಿವಿಕೆ ಕಾಂಗ್ರೆಸ್‌ನೊAದಿಗೆ ಅಧಿಕಾರವನ್ನು ಹಂಚಿಕೊಳ್ಳಲು ಸಿದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಾಂಗ್ರೆಸ್ ಈ ಹಿಂದೆ ಇತರ ಪಕ್ಷಗಳನ್ನು ಬೆಂಬಲಿಸುವ ಮೂಲಕ ತನ್ನ ಪ್ರಭಾವವನ್ನು ಕಳೆದುಕೊಂಡಿದೆ. ಈಗ ಈ ಹೊಸ ಮೈತ್ರಿ ಮೂಲಕ ಅಧಿಕಾರವನ್ನು ಮರಳಿ ಪಡೆಯುವ ಅವಕಾಶವನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ.

Author

Editor TumkurVarthe

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು

WhatsApp

Join Now

Telegram

Join Now

Instagram

Join Now