--ಇಲ್ಲಿ ಜಾಹೀರಾತು--

ವಿಜಯ್ ಗೆ ‘ಮ್ಯಾಜಿಕ್ ನಂಬರ್’ ಸಿಕ್ತು ಟಿವಿಕೆಗೆ ಸಿಪಿಐ, ಸಿಪಿಎಂ, ವಿಸಿಕೆ, ಕಾಂಗ್ರೆಸ್ ಬೆಂಬಲ ಘೋಷಣೆ

On: May 8, 2026 3:10 PM
Follow Us
--ಇಲ್ಲಿ ಜಾಹೀರಾತು--

Whatsapp Channel

Join Now

Telegram Group

Join Now


ಚೆನ್ನೈ: ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ದಳಪತಿ ವಿಜಯ್ ಅವರಿಗೆ ಅಧಿಕಾರ ಹಿಡಿಯಲು ಕೊನೆಗೂ ಮ್ಯಾಜಿಕ್ ನಂಬರ್ ಸಿಕ್ಕಿದೆ. ಕಾಂಗ್ರೆಸ್ ನಂತರ ಸಿಪಿಐ ಮತ್ತು ವಿಸಿಕೆ ಸಹ ಬೆಂಬಲ ಘೋಷಿಸಿವೆ. ಹೀಗಾಗಿ ದಳಪತಿ ವಿಜಯ್ ತಮಿಳುನಾಡಿನ ನೂತನ ಮುಖ್ಯಮಂತ್ರಿ ಆಗಲಿದ್ದಾರೆ.
ಸರ್ಕಾರ ರಚನೆಗೆ ವಿಜಯ್ ನೇತೃತ್ವದ ಟಿವಿಕೆಗೆ ಸಿಪಿಐ ಶುಕ್ರವಾರ ಬೇಷರತ್ ಬೆಂಬಲ ಘೋಷಿಸಿದೆ. ಇದರ ಬೆನ್ನಲ್ಲೇ ವಿಸಿಕೆ ಸಹ ಟಿವಿಕೆಗೆ ಬೆಂಬಲ ಘೋಷಿಸಿ ರಾಜ್ಯಪಾಲರಿಗೆ ಪತ್ರ ನೀಡಿದೆ. ಇಂದು ಸುದೀರ್ಘ ಚರ್ಚೆ ನಂತರ, ಎಡಪಕ್ಷ (ಸಿಪಿಐ) ಟಿವಿಕೆಗೆ ಬೆಂಬಲ ನೀಡಲು ನಿರ್ಧರಿಸಿದೆ. ಬೇಷರತ್ತಾದ ಬೆಂಬಲ ಪತ್ರವನ್ನು ನೀಡಿದೆ. ಈ ಪತ್ರವನ್ನು ತಮಿಳುನಾಡು ರಾಜ್ಯಪಾಲ ಆರ್.ವಿ.ಅರ್ಲೇಕರ್ ಅವರಿಗೆ ಕಳುಹಿಸಲಾಗಿದೆ.
234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ಸಿಪಿಐ ಇಬ್ಬರು ಶಾಸಕರನ್ನು ಹೊಂದಿದೆ. ಟಿವಿಕೆ ಒಟ್ಟು 107, ಸಿಪಿಐ 2, ಸಿಪಿಎಂ 2, ವಿಸಿಕೆ 2,  ಎಎಂಎಂಕೆ – 01  ಕಾಂಗ್ರೆಸ್ 5 ಐದು ಸೇರಿ ಒಟ್ಟು 119ರ ಸಂಖ್ಯೆಯನ್ನು ತಲುಪಿದೆ.

Author

Editor TumkurVarthe

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು

WhatsApp

Join Now

Telegram

Join Now

Instagram

Join Now