--ಇಲ್ಲಿ ಜಾಹೀರಾತು--

ಬೌರಿಂಗ್ ಆಸ್ಪತ್ರೆ ದುರಂತ: ಸರ್ಕಾರಕ್ಕೆ ಡಿಸಿ ವರದಿ ಸಲ್ಲಿಕೆ

On: May 12, 2026 2:33 PM
Follow Us
--ಇಲ್ಲಿ ಜಾಹೀರಾತು--

Whatsapp Channel

Join Now

Telegram Group

Join Now


ಬೆಂಗಳೂರು: ಬೌರಿಂಗ್ ಆಸ್ಪತ್ರೆ ಗೋಡೆ ಕುಸಿದು ಏಳು ಜನರು ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಜಿಲ್ಲಾಧಿಕಾರಿ ಜಗದೀಶ್ ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಕೆ ಮಾಡಿದ್ದಾರೆ. ಇದರಲ್ಲಿ ಏಳು ಜನರ ಸಾವಿಗೆ ಆರೋಗ್ಯ ಇಲಾಖೆ ಇಂಜಿನಿಯರ್ ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯವೇ ಕಾರಣ ಹಾಗೂ ಆಸ್ಪತ್ರೆ ಆಡಳಿತ ಮಂಡಳಿಯ ನಿರ್ಲಕ್ಷ್ಯ ಬಯಲಾಗಿದೆ.
ಬೆಂಗಳೂರು ಡಿಸಿ ಜಗದೀಶ್ ಮಾತನಾಡಿ, ಸರ್ಕಾರ ತನಿಖೆಗೆ ಸೂಚಿಸಿತ್ತು. ಕೂಲಂಕುಷವಾಗಿ ತನಿಖೆಯನ್ನ ಮಾಡಿ, ವರದಿ ಸಲ್ಲಿಕೆ ಮಾಡಿದ್ದೇನೆ. ಏನು ಸಲ್ಲಿಕೆ ಆಗಿದೆ ಅಂತಾ ಡಿಸ್ಕ್ಲೋಸ್ ಮಾಡಲ್ಲ. ಮುಚ್ಚಿದ ಲಕೋಟೆಯಲ್ಲಿ ನೀಡಿದ್ದೇನೆ. ಸರ್ಕಾರ ಏನು ಕ್ರಮ ವಹಿಸುತ್ತದೆಯೋ ಕಾದು ನೋಡಬೇಕು ಎಂದರು.
ವರದಿಯಲ್ಲಿ ಏನಿದೆ?: ಗೋಡೆ ಪಕ್ಕದಲ್ಲಿ ಮಣ್ಣು ಸುರಿದಿರೋದು ದುರಂತಕ್ಕೆ ಮೂಲ ಕಾರಣ. ಗೋಡೆ ಪಕ್ಕ ಸುರಿದಿರುವ ಮಣ್ಣನ್ನ ಸೂಕ್ತ ಸಮಯಕ್ಕೆ ಗುತ್ತಿಗೆದಾರ ಮತ್ತು ಆರೋಗ್ಯ ಇಲಾಖೆ ಇಂಜಿನಿಯರ್ ತೆರವು ಮಾಡಿಲ್ಲ. ಆರೋಗ್ಯ ಇಲಾಖೆ ಇಂಜಿನಿಯರ್ ಮತ್ತು ಗುತ್ತಿಗೆದಾರ ಕಾರಣ. 4.8 ಅಡಿ ಗೋಡೆ ಇದ್ದರೆ 6 ಅಡಿ ಮಣ್ಣು ಸುರಿದಿದ್ದಾರೆ. ಗೋಡೆ ಪಕ್ಕದಲ್ಲಿ ಕ್ರಿಕೆಟ್ ಆಡುವುದಕ್ಕೆ ನೆಟ್ ಸೃಷ್ಟಿ ಮಾಡಲಾಗಿದೆ. ಕ್ರಿಕೆಟ್ ನೆಟ್ ಸೃಷ್ಟಿ ಮಾಡೋಕೆ ಮಣ್ಣು ಸುರಿದಿದ್ದಾರೆ. ಇದರಲ್ಲಿ ಆಸ್ಫತ್ರೆ ನಿರ್ಲಕ್ಷ್ಯವಿದೆ ಎಂದು ಮೂಲಗಳು ತಿಳಿಸಿವೆ.

Author

Editor TumkurVarthe

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು

WhatsApp

Join Now

Telegram

Join Now

Instagram

Join Now